ಪುತ್ತೂರು:ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಪಾಣಾಜೆ ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಮಾವೇಶ ಪರ್ಪುಂಜ ಶಿವಕೃಪಾ ಆಡಿಟೋರಿಯಂ ನಲ್ಲಿ ಮಾ.22ರಂದು ನಡೆಯಿತು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಹಿಂದುತ್ವದ ಬದ್ದತೆಯೊಂದಿಗೆ ಅಭಿವೃದ್ಧಿಗೆ ಆಧ್ಯತೆ ನೀಡಿ ಜನಸೇವಕನಾಗಿ ಕೆಲಸ ಮಾಡಲು ಸಂಘಟನೆ ಅವಕಾಶ ಮಾಡಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಮತ್ತು ಮತದಾರ ಪ್ರಭುಗಳು ಏನೂ ಅಪೇಕ್ಷೆ ಪಟ್ಟಿದ್ದಾರ ಅವರ ಅಪೇಕ್ಷೆ ಅನುಗುಣವಾಗಿ ನಾನು ಸಚ್ಛಾರಿತ್ರ್ಯಾದ ರಾಜಕಾರಣ ಮಾಡಲು ಕಟಿಬದ್ದನಾಗಿದ್ದೇನೆ. ಇವತ್ತು ನಾನು ಹೋದಲೆಲ್ಲಾ ಸಿಗುವ ಈ ಗೌರವ , ಪ್ರೀತಿ ನಮ್ಮ ಹಿರಿಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಟ್ಟಿದ ಸಂಘಟನೆ ಆ ಸಂಘಟನೆಗೆ ಸಿಗುವ ಗೌರವ ಎಂದರು ಮತ್ತೊಮ್ಮೆ ನಾವು ದಕ್ಷಿಣ ಕನ್ನಡದಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನಷ್ಟು ಬಲ ತುಂಬುವ ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ , ಮಾಜಿ ಶಾಸಕ ಸಂಜೀವ ಮಠಂದೂರು , ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ , ಪುತ್ತೂರು ಮಂಡಲ ಪ್ರಭಾರಿ ಸುನಿಲ್ ಆಳ್ವ , ರಾಜ್ಯ ಹಿಂ.ಮೋರ್ಛ ಪ್ರ.ಕಾ ಆರ್ .ಸಿ ನಾರಾಯಣ , ಚುನಾವಣಾ ಸಮಿತಿ ಸಂಚಾಲಕರಾದ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಿಧ್ಯಾಗೌರಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಪಾಣಾಜೆ ಮಹಾಶಕ್ತಿಕೇಂದ್ರ ಅಧ್ಯಕ್ಷ ಜಯರಾಮ ಪೂಜಾರಿ, ಉಮೇಶ್ ಗೌಡ ಕೋಡಿಬೈಲು ವೇದಿಕೆಯಲ್ಲಿದ್ದರು.
ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಅರುಣ್ ಕುಮಾರ್ ಪುತ್ತಿಲ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಾಣಾಜೆ ಮಹಾಶಕ್ತಿಕೇಂದ್ರ ಸಂಚಾಲಕ ಜಯರಾಮ ಪೂಜಾರಿ ಸ್ವಾಗತಿಸಿ ಒಳಮೊಗ್ರು ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ ವಂದಿಸಿದರು. ಒಳಮೊಗ್ರು ಗ್ರಾ.ಪಂ ಸದಸ್ಯ ಮಹೇಶ್ ಕೇರಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಪಾಣಾಜೆ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಶಕ್ತಿಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳು, ಸಂಚಾಲಕರು, ಪ್ರವಾಸಿ ಪ್ರಭಾರಿಗಳು, ಜಿಲ್ಲಾ ಮಟ್ಟ, ಮಂಡಲ ಮಟ್ಟದ ಪ್ರಮುಖರು, ಪರಿವಾರ ಸಂಘಟನೆಗಳ ಪ್ರಮುಖರು, ಮಹಾಶಕ್ತಿಕೇಂದ್ರ ಮಟ್ಟದ ಪ್ರಮುಖರು, ಪಂಚಾಯತ್ ಜನಪ್ರತಿನಿಧಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರುಗಳು, ಪೇಜ್ ಪ್ರಮುಖರು, ಹಿರಿಯ- ಕಿರಿಯ ದೇವ ದುರ್ಲಭ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.