ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ನ ಮೂರನೇ ಮಳಿಗೆ ಶುಭಾರಂಭ- ಯಶಸ್ಸಿನ ಕೀಲಿಕೈ ಶ್ರದ್ದೆಯಲ್ಲಿ ಅಡಗಿದೆ: ಒಡಿಯೂರು ಶ್ರೀ

0

*ಸ್ವಾರ್ಥ ತೊರೆದ ಜೀವನದಿಂದ ಯಶಸ್ಸು ಹೆಚ್ಚು: ಫಾ.ಲಾರೆನ್ಸ್ ಮಸ್ಕರೇನಸ್
*ಜನರಿಗೆ ಸಹಕಾರ ನೀಡುವುದೇ ನಿಜವಾದ ವ್ಯವಹಾರ: ಸವಣೂರು ಸೀತಾರಾಮ ರೈ


ಪುತ್ತೂರು: ತಂತ್ರಜ್ಞಾನದ ಕಡೆ ಜನರು ಹೆಚ್ಚು ಒಲವು ತೋರುವ ಕಾಲಘಟ್ಟವಿದ್ದು, ಸ್ಪರ್ಧಾತ್ಮಕ ಬದುಕಿನಲ್ಲಿ ನಾವಿದ್ದೇವೆ. ವ್ಯವಹಾರದಲ್ಲಿ ಇತಿಮಿತಿ ಇದ್ದರೆ ಬದುಕು ಹಸನಾಗುತ್ತದೆ. ಪರಿಶ್ರಮ ಕಾಣುವ ವ್ಯಕ್ತಿ ಮಂಜುನಾಥ್. ಯಶಸ್ಸಿನ ಕೀಲಿಕೈ ಶ್ರದ್ದೆಯಲ್ಲಿ ಅಡಗಿದೆ. ಪ್ರಾಮಾಣಿಕ ಸೇವೆ ನಮ್ಮದಾದಾಗ ವ್ಯವಹಾರ ಅಭಿವೃದ್ಧಿ ಸಾಧ್ಯ. ನಗುಮುಖದ ವ್ಯವಹಾರದಿಂದ ಉನ್ಮತಿ ಸಾಧ್ಯ. ಮಾನವೀಯ ಮೌಲ್ಯಗಳನ್ನು ತುಂಬುವ ವ್ಯವಹಾರ ನಮ್ಮದಾಗಬೇಕು. ಬೆಳೆಯುವ ಪೇಟೆಗೆ ಇಂತಹ ಸಂಸ್ಥೆ ಪೂರಕ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಮಾ.22ರಂದು ಪುತ್ತೂರಿನ ದರ್ಬೆವೃತ್ತದ ಬಳಿ ಇರುವ ಪ್ರಶಾಂತ್ ಮಹಲ್‌ನ ನೆಲಮಹಡಿಯಲ್ಲಿ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ನ ಮೂರನೇ ಮಳಿಗೆ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಧರ್ಮಗುರು ಫಾ.ಲಾರೆನ್ಸ್ ಮಸ್ಕರೇನಸ್ ರವರು ಮಾತನಾಡಿ ಹಲವಾರು ವರುಷಗಳ ಸೇವೆ ನೀಡಿದ ಸಂಸ್ಥೆ ಇನ್ನಷ್ಟು ಯಶಸ್ಸಾಗಲಿ. ಊರಿನ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಪಾತ್ರವಿದೆ. ಸದ್ವಿಚಾರವನ್ನು ಮೈಗೂಡಿಸಿಕೊಂಡಾಗ ಸಮಾಜ ಅಭಿವೃದ್ದಿಯಾಗಲು ಸಾಧ್ಯ. ಮಾಲಕರ ತ್ಯಾಗದ ಫಲದಿಂದ ಇಂದು ಮೂರನೇ ಮಳಿಗೆ ಉದ್ಘಾಟನೆಗೊಂಡಿದೆ. ಸ್ವಾರ್ಥ ತೊರೆದ ಜೀವನದಿಂದ ಯಶಸ್ಸು ಹೆಚ್ಚು. ಸಂಸ್ಥೆಗೆ ಯಶಸ್ಸಾಗಲಿ ಎಂದರು.

ಪ್ರಶಾಂತ್ ಮಹಲ್‌ನ ಮಾಲಕ ಕೆ.ಸೀತಾರಾಮ ರೈ ಸವಣೂರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪುತ್ತೂರು ಬೆಳೆಯುವ ನಗರ. ಇಲ್ಲಿ ಯಾವುದೇ ವ್ಯವಹಾರ ಬಂದರೂ ಯಶಸ್ಸು ಖಂಡಿತ. ಸಂಸ್ಥೆಗೆ ಉತ್ತಮ ಭವಿಷ್ಯವಿದೆ. ವ್ಯವಹಾರದಲ್ಲಿ ಕೇವಲ ಹಣಗಳಿಸುವ ಉದ್ದೇಶವಿರಭಾರದು. ನಾವು ಜನರಿಗೆ ಸಹಕಾರ ನೀಡುವುದೇ ನಿಜವಾದ ವ್ಯವಹಾರ. ಗ್ರಾಹಕನ ಕಷ್ಟ ಸುಖದಲ್ಲಿ ನಾವು ಭಾಗಿಯಾದಾಗ ವ್ಯವಹಾರದಲ್ಲಿ ಉನ್ನತಿಯಾಗಲು ಸಾಧ್ಯ. ಲಾಭದಲ್ಲಿ ಒಂದಂಶವನ್ನು ಸಮಾಜದ ಒಳಿತಿಗೆ ಬಳಸಬೇಕಾಗಿದೆ ಎಂದರು.
ಉಡುಪಿಯ ಉದ್ಯಮಿ ಸುರೇಶ್ ಕುಮಾರ್ ನಾಯಕ್, ಎಲ್.ಐ.ಸಿ. ಆಫ್ ಇಂಡಿಯಾದ ನಿವೃತ್ತ ಆಡಳಿತಾಧಿಕಾರಿ ರವೀಂದ್ರನಾಥ ನಾಯಕ್ ಪಡೀಲ್, ಸಿವಿಲ್ ಕಾಂಟ್ರ್ಯಾಕ್ಟರ್ ಸೀತಾರಾಮ ನಾಯಕ್, ಮಂಗಳೂರು ಮಹಾನಗರ ಪಾಲಿಕೆಯ ನೀರುಸರಬರಾಜು ವಿಭಾಗದ ನಿವೃತ್ತ ನಿರೀಕ್ಷಕರಾದ ಶಿವಣ್ಣ ನಾಯಕ್, ಬ್ಯಾಂಕ್ ಆ- ಬರೋಡಾ ದರ್ಬೆ ಶಾಖೆಯ ವ್ಯವಸ್ಥಾಪಕರಾದ ಸಾದಿಕ್ ಎಸ್.ಎಂ., ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಹೆಚ್. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ಕಳೆದ 13 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಶರತ್ ಬಳಂತಿಮೊಗರು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಲೀಲಾ ಶಾಂತಿಗೋಡುವರವರು ಪ್ರಥಮ ಗ್ರಾಹಕರಾಗಿ ಖರೀದಿ ಮಾಡಿದರು.
ಶಾರದಾ ಕೇಶವ ಸಾಲ್ಮರ ಸ್ವಾಗತಿಸಿದರು. ಶ್ರೀ ಒಡಿಯೂರು ವಜ್ರಮಾತ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರು ಪ್ರಾರ್ಥಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಮಾಲಕರ ಪತ್ನಿ ರಶ್ಮಿ ಮಂಜುನಾಥ್ ವಂದಿಸಿದರು. ಮಾಲಕರ ಮಕ್ಕಳಾದ ಶ್ರೀಶಾಸ್ತಾ, ಶ್ರೀದೇವಿ ಸಹಕರಿಸಿದರು.

28 ವರುಷಗಳ ಸೇವಾ ಪರಂಪರೆ

ಸಂಸ್ಥೆಯು ಕಳೆದ 28 ವರುಷಗಳಿಂದ ನಿರಂತರ ಸೇವೆಯನ್ನು ನೀಡುತ್ತಿದ್ದು ವಿಟ್ಲ, ಪೆರ್ಲದಲ್ಲಿ ವ್ಯವಹಾರ ನಡೆಸುತ್ತಿತ್ತು. ಇದೀಗ ಮೂರನೇ ಶಾಖೆಯನ್ನು ಇಂದಿಲ್ಲಿ ಉದ್ಘಾಟಿಸಲಾಗಿದೆ. ಉದ್ಘಾಟನೆ ಪ್ರಯುಕ್ತ 1000 ರೂ. ಗಳಿಗಿಂತ ಹೆಚ್ಚಿನ ಮೌಲ್ಯದ ಖರೀದಿ ಮಾಡಿದಲ್ಲಿ ಗಿಫ್ಟ್ ಕೂಪನ್ ಲಭಿಸಲಿದೆ. ಉಳಿದಂತೆ ವಿಶೇಷ ರಿಯಾಯಿತಿಯೊಂದಿಗೆ ಕೊಡುಗೆಗಳು ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಪ್ರತೀ ಹದಿನೈದು ದಿನಗಳಿಗೊಮ್ಮೆ 5೦೦ ರೂಪಾಯಿ ಪಾವತಿ ಮಾಡುವ ಸ್ಕೀಂ ಅನ್ನು ಕೂಡ ಆರಂಭಿಸಲಾಗಿದ್ದು, ಅದರಲ್ಲಿ ದ್ವಿಚಕ್ರವಾಹನ ಹಾಗೂ ಕಾರು ಗೆಲ್ಲುವ ಅವಕಾಶವಿದೆ. ನಾವು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಗ್ರಾಹಕರಿಂದ ಉತ್ತಮ ಸಹಕಾರ ಸಿಕ್ಕಿದೆ. ಈ ಭಾಗದ ಜನರಿಂದಲೂ ಸಹಕಾರವನ್ನು ಬಯಸುತ್ತಿದ್ದೇವೆ.
ಮಂಜುನಾಥ್ ಎಸ್, ಮಾಲಕರು

LEAVE A REPLY

Please enter your comment!
Please enter your name here