ಬಡಗನ್ನೂರು: ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗೂ ಶ್ರೀ ಧರ್ಮದೈವ ವರ್ಣಾರ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ.24 ಮತ್ತು 25ರಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತ್ರತ್ವದಲ್ಲಿ ಶ್ರೀ ಕ್ಷೇತ್ರ ಪಡುಮಲೆ ಇದರ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರ ಸಹಭಾಗಿತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮ:
ಮಾ.24ರಂದು ಬೆಳಗ್ಗೆ ಗಂ 9.30 ಕ್ಕೆ ನಾಗದೇವರ ತಂಬಿಲ, 11ರಿಂದ ಹರಿಸೇವೆ, ಸಂಜೆ ಗಂ 6.30 ಕ್ಕೆ ದೈವಸ್ಥಾನದಿಂದ ಭಂಡಾರ ತೆಗೆಯುವುದು, ತೊಡಂಗಲ್, ನಂತರ ಮೇಲೇರಿ ಆಗ್ನಿ ಸ್ಪರ್ಶ, ರಾತ್ರಿ ಗಂ 8ರಿಂದ ಅನ್ನಸಂತರ್ಪಣೆ ಬಳಿಕ ಪೋಟ್ಟ ಭೂತದ ನೇಮ ನಡೆಯಲಿದೆ. ಮಾ.25ರಂದು ಪ್ರಾತಃ ಕಾಲ ಗಂ 4ರಿಂದ ಶ್ರೀ ರಕ್ತೇಶ್ವರೀ ದೈವದ ನೇಮ, ಮತ್ತು ಸಂಚಾರ ಗುಳಿಗ ದೈವದ ನೇಮ ನಡೆಯಲಿರುವುದು.ಸಂಜೆ ಗಂ 7.30ರಿಂದ ತರವಾಡು ಮನೆಯಿಂದ ಭಂಡಾರ ತೆಗೆಯುವುದು, ರಾತ್ರಿ ಗಂ 8ರಿಂದ ಅನ್ನಸಂತರ್ಪಣೆ, ರಾತ್ರಿ ಗಂ.9ರಿಂದ ದೇವತೆ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಮತ್ತು ಸ್ಥಳದ ಗುಳಿಗ ದೈವಗಳ ನೇಮ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಮಾ.24ರಂದು ಗಂ 8 ರಿಂದ ಕುಮಾರಿ ಅಂಕಿತ ಶೆಟ್ಟಿ ಕುದ್ಕಾಡಿ ವಿಶ್ವಕಲಾನಿಕೇತನ ನೃತ್ಯ ಶಾಲೆ ಪದಡ್ಕ ಪರ್ಮಲೆ ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ, ರಾತ್ರಿ ಗಂ 9ರಿಂದ ಉಡುಪಿ ಕಲಾರ್ಘ್ಯ ಯಕ್ಷಗಾನ ತಂಡದ ಸದಸ್ಯರಿಂದ “ಮೇದಿನಿ ನಿರ್ಮಾಣ- ಮಹಿಷವಧೆ”ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿರುವುದು.
ಸದ್ರಿ ದೈವಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಸಪರಿವಾರ ಸಮೇತ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಕುದ್ಕಾಡಿ ಮನೆತನದ ಯಜಮಾನ ಬಾಲಕೃಷ್ಣ ರೈ ಕುದ್ಕಾಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.