ಪುತ್ತೂರು: ಸರಕಾರದ ಸುತ್ತೋಲೆಯಂತೆ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆಯು ಮಾ.23ರಂದು ಜರಗಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುಂದರ ಕನ್ಯಾಮಂಗಲ, ಸವಣೂರು ಗ್ರಾ.ಪಂ, ಸದಸ್ಯರಾದ ಗಿರಿಶಂಕರ್ ಸುಲಾಯ ದೇವಸ್ಯ, ಶೀನಪ್ಪ ಶೆಟ್ಟಿ ನೆಕ್ರಾಜೆ, ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು, ಕರ್ಣಾಟಕ ಬ್ಯಾಂಕ್ ಅಧಿಕಾರಿ ರಾಮಕೃಷ್ಣ ವಿ.ಯು ಕುಮಾರಮಂಗಲ, ಹಿರಿಯ ವಿದ್ಯಾರ್ಥಿ ಬಾಳಪ್ಪ ಪೂಜಾರಿ ಬಂಬಿಲರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
