-ಪ್ರಾಮಾಣಿಕ ಸೇವೆಯಿಂದ ಗ್ರಾಹಕರ ಪ್ರೀತಿಯನ್ನು ಸಂಪಾದಿಸಿದೆ-ಸಾದ್ವಿಶ್ರೀ ಮಾತಾನಂದಮಯಿ
-ಸಂಸ್ಥೆಯು ಮಹಿಳಾಮಣಿಗಳಿಂದಲೇ ಉದ್ಘಾಟನೆಗೊಂಡಿರುವುದು ಒಳ್ಳೆಯ ಬೆಳವಣಿಗೆ-ಶಕುಂತಳಾ ಶೆಟ್ಟಿ
-ಸಂಸ್ಥೆಯಿಂದ ಒಳ್ಳೆಯ ಸೇವೆ ಸಿಕ್ಕಿದೆ-ಡಾ.ಗೌರಿ ಪೈ
-ಡ್ರೈಫ್ರುಟ್ಸ್ ಮಳಿಗೆಯನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಪರಿಚಯಿಸಿದ್ದು ಲಿಖಿತಾ ಕುಸುಮ್‌ರಾಜ್ ದಂಪತಿ-ಅಶ್ವಿನಿಕೃಷ್ಣ ಮುಳಿಯ
-ನಗುಮುಖದ ಸೇವೆಯಿದ್ದಾಗ ಖಂಡಿತಾ ಗ್ರಾಹಕರನ್ನು ಆಕರ್ಷಿಸಬಲ್ಲುದು-ವಾರಿಜ ಬೆಳ್ಳಿಯಪ್ಪ ಗೌಡ
-ಲಹರಿ ಸಂಸ್ಥೆಯು ಸಮಾಜಕ್ಕೆ ಅನೇಕ ಕೊಡುಗೆ ನೀಡಿದೆ-ಶಾಂತೇರಿ ಶೆಣೈ
ಪುತ್ತೂರು: ಹೊಸದಾಗಿ ಪುನರ್‌ನಿರ್ಮಿತಗೊಂಡು ನವೀಕೃತ ಮಳಿಗೆಯೊಂದಿಗೆ ಲಹರಿ ಡ್ರೈ ಫ್ರುಟ್ಸ್ ಆಂಡ್ ಮೋರ್ ಸಂಸ್ಥೆಯ ದಶಮಾನೋತ್ಸವ ಸಂಭ್ರಮಾಚರಣೆ ಹಾಗೂ ಇದರ ಉದ್ಘಾಟನೆ ಕಾರ್ಯಕ್ರಮ ಮಾ.24ರಂದು ಮುಖ್ಯರಸ್ತೆಯ ಕೆ.ವಿ ಶೆಣೈ ಪೆಟ್ರೋಲ್ ಪಂಪಿನ ಎದುರುಗಡೆ, ಪೈ ಇಂಟರ್ನ್ಯಾಷನಲ್ ಬಳಿಯ ಕಟ್ಟಡದಲ್ಲಿ ನೆರವೇರಿತು.
ಪ್ರಾಮಾಣಿಕ ಸೇವೆಯಿಂದ ಗ್ರಾಹಕರ ಪ್ರೀತಿಯನ್ನು ಸಂಪಾದಿಸಿದೆ-ಸಾದ್ವಿಶ್ರೀ ಮಾತಾನಂದಮಯಿ:
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿಶ್ರೀ ಮಾತಾನಂದಮಯಿರವರು ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚಿಸಿ ಮಾತನಾಡಿ, ಲಹರಿ ಡ್ರೈಫ್ರುಟ್ಸ್ ಸಂಸ್ಥೆ ಇಂದು ದಶಮಾನೋತ್ಸವವನ್ನು ಆಚರಿಸುವುದರ ಹಿಂದೆ ಸಂಸ್ಥೆಯ ಮಾಲಕರಾದ ಲಿಖಿತಾ ಕುಸುಮ್‌ರವರ ನಿರಂತರ ಪರಿಶ್ರಮವಿದೆ. ಲಹರಿ ಸಂಸ್ಥೆಯು ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಪ್ರಾಮಾಣಿಕವಾಗಿ ಸೇವೆ ನೀಡುತ್ತಾ ಬಂದಿದ್ದು ಗ್ರಾಹಕರ ಪ್ರೀತಿಯನ್ನು ಸಂಪಾದಿಸಿದೆ. ಒಮ್ಮೆಲೇ ಮೇಲೆ ಏರುವುದಕ್ಕಿಂತ ಕಠಿಣ ಪರಿಶ್ರಮಪಟ್ಟು ಹಂತ ಹಂತವಾಗಿ ಮೇಲೇರುವುದು ಬಹಳ ಮುಖ್ಯ. ಇಂಥಹ ಸಂಸ್ಥೆಗಳು ಮುಂದಿನ ದಿನಗಳಲ್ಲಿ 100 ಕ್ಕೂ ಮಿಕ್ಕಿ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದರು.
ಸಂಸ್ಥೆಯು ಮಹಿಳಾಮಣಿಗಳಿಂದಲೇ ಉದ್ಘಾಟನೆಗೊಂಡಿರುವುದು ಒಳ್ಳೆಯ ಬೆಳವಣಿಗೆ-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ನವೀಕೃತಗೊಂಡ ಲಹರಿ ಸಂಸ್ಥೆಯನ್ನು ಮಹಿಳಾಮಣಿಗಳಿಂದಲೇ ಉದ್ಘಾಟನೆಗೊಂಡಿರುವುದು ಒಳ್ಳೆಯ ಬೆಳವಣಿಗೆ. ಮಹಿಳೆಯು ಸ್ವಾವಲಂಭಿಯಾಗಿ ಕೆಲಸ ಮಾಡಲು ಸಮಾಜದಲ್ಲಿ ಸಹೋದರರಿಂದ ಒಳ್ಳೆಯ ಪ್ರೋತ್ಸಾಹ ಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಮಾಲಕ ಕುಸುಮ್‌ರವರು ಸಂಸ್ಥೆಯ ಅಭಿವೃದ್ಧಿಯಲ್ಲಿ ತನ್ನ ಪತ್ನಿ ಲಿಖಿತಾರವರಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಪುತ್ತೂರ್ದ ಮುತ್ತಿನಂತೆ, ಲಕ್ಷ್ಮೀಯಂತೆ ಮನೆ ಬೆಳಗಲ, ಸಮಾಜ ಬೆಳಗಲಿ, ಜನಾಕರ್ಷಣೆಯ ಕೇಂದ್ರವಾಗಲಿ ಎಂದರು.
ಸಂಸ್ಥೆಯಿಂದ ಒಳ್ಳೆಯ ಸೇವೆ ಸಿಕ್ಕಿದೆ-ಡಾ.ಗೌರಿ ಪೈ:
ಸಮಾಜ ಸೇವಕಿ ಡಾ.ಗೌರಿ ಪೈ ಮಾತನಾಡಿ, ತಾನೂ ಕೂಡ ಈ ಸಂಸ್ಥೆಯ ಗ್ರಾಹಕಿಯಾಗಿದ್ದು, ಈ ಮಳಿಗೆಗೆ ಹಲವು ಬಾರಿ ಬಂದಾಗಲೂ ನನಗೆ ಒಳ್ಳೆಯ ಸೇವೆ ಸಿಕ್ಕಿರುತ್ತದೆ. ಈ ಸಂಸ್ಥೆಯು ಮತ್ತಷ್ಟು ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಡ್ರೈಫ್ರುಟ್ಸ್ ಮಳಿಗೆಯನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಪರಿಚಯಿಸಿದ್ದು ಲಿಖಿತಾ ಕುಸುಮ್‌ರಾಜ್ ದಂಪತಿ-ಅಶ್ವಿನಿಕೃಷ್ಣ ಮುಳಿಯ:
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಅಶ್ವ್ವಿನಿಕೃಷ್ಷ ಮುಳಿಯರವರು ಪ್ರಥಮ ಖರೀದಿಯನ್ನು ನೆರವೇರಿಸಿ ಮಾತನಾಡಿ, ಮಹಿಳಾ ದಿನಾಚರಣೆಯ ಮಾಸದಲ್ಲಿ ಈ ಸಂಸ್ಥೆಯು ನವೀಕೃತಗೊಂಡು ಮಹಿಳೆಯರಿಂದಲೇ ಉದ್ಘಾಟನೆಗೊಂಡಿದೆ. ಡ್ರೈಫ್ರುಟ್ಸ್‌ನ ಗುಣಮಟ್ಟದ ಮಳಿಗೆಯನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಪರಿಚಯಿಸಿದ್ದು ಲಿಖಿತಾ ಕುಸುಮ್‌ರಾಜ್ ದಂಪತಿಯಾಗಿದೆ. ಸಮಾರಂಭಕ್ಕೆ ಬೇಕಾದ ಐಟಂಗಳು ಇಲ್ಲಿ ಇದೆ ಮಾತ್ರವಲ್ಲ ಗ್ರಾಹಕರಿಗೆ ಮುಟ್ಟಿಸುವ ಕಾರ್ಯವೂ ಈ ಸಂಸ್ಥೆಯಿಂದ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.
ನಗುಮುಖದ ಸೇವೆಯಿದ್ದಾಗ ಖಂಡಿತಾ ಗ್ರಾಹಕರನ್ನು ಆಕರ್ಷಿಸಬಲ್ಲುದು-ವಾರಿಜ ಬೆಳ್ಳಿಯಪ್ಪ ಗೌಡ:
ತಾಲೂಕು ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷೆ ಶ್ರೀಮತಿ ವಾರಿಜ ಬೆಳ್ಳಿಯಪ್ಪ ಗೌಡ ಮಾತನಾಡಿ, ಸಂಸ್ಥೆಯು ಗ್ರಾಹಕರಿಗೆ ಲವಣಯುಕ್ತ ಆಹಾರ ನೀಡಿ ಬೆಳೆಸುತ್ತಾ ಬಂದು ಇಂದು ದಶಮಾನೋತ್ಸವವನ್ನು ಆಚರಿಸುತ್ತಿದೆ. ಸೌಲಭ್ಯದ ಕೊರತೆ, ಮಾರ್ಗದರ್ಶನದ ಕೊರತೆ, ಸ್ಫೂರ್ತಿಯ ಕೊರತೆಯಿಂದ ಬಹಳಷ್ಟು ಮಂದಿ ಮಹಿಳೆಯರು ಉದ್ಯೋಗದಲ್ಲಿ ಮುಂದುವರೆಯುತ್ತಿಲ್ಲ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವೂ ಮುಖ್ಯ. ನಗುಮುಖದ ಸೇವೆಯಿದ್ದಾಗ ಖಂಡಿತಾ ಗ್ರಾಹಕರನ್ನು ಆಕರ್ಷಿಸಬಲ್ಲುದು. ಶುದ್ಧತೆ, ಬದ್ಧತೆ, ಧೈರ್ಯವನ್ನು ಮೈಗೂಡಿಸಿಕೊಂಡಿರುವ ಮಾಲಕಿ ಲಿಖಿತಾರವರಿಂದ ಸಂಸ್ಥೆಯು ಬೆಳಗಲಿ ಎಂದರು.
ಲಹರಿ ಸಂಸ್ಥೆಯು ಸಮಾಜಕ್ಕೆ ಅನೇಕ ಕೊಡುಗೆ ನೀಡಿದೆ-ಶಾಂತೇರಿ ಶೆಣೈ:
ಶ್ರೀಮತಿ ಶಾಂತೇರಿ ಶೆಣೈ ಮಾತನಾಡಿ, ಲಹರಿ ಸಂಸ್ಥೆಯು ಈಗಾಗಲೇ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದು, ಮುಂದಿನ ದಿನಗಳಲ್ಲಿ ಈ ಕೊಡುಗೆ ಮುಂದುವರೆಯಲಿ ಎಂದರು.
ದ.ಕ ತೆಂಗು ರೈತ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲಹರಿ ಡ್ರೈಫ್ರುಟ್ಸ್ ಮಾಲಕಿ ಲಿಖಿತಾ ಕುಸುಮ್‌ರಾಜ್‌ರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಸಿದರು. ಮಾಲಕ ಕುಸುಮ್‌ರಾಜ್ ವಂದಿಸಿದರು. ಈ ಸಂದರ್ಭದಲ್ಲಿ ಮಾಲಕ ಲಿಖಿತಾ ಕುಸುಮ್‌ರಾಜ್ ದಂಪತಿಯ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
2025ಕ್ಕೆ 25 ಫ್ರಾಂಚೈಸಿಗಳು..
ಪುತ್ತೂರಿನಲ್ಲಿ ಒಂಭತ್ತು ವರ್ಷದ ಹಿಂದೆ ಸಣ್ಣ ಮಳಿಗೆಯನ್ನು ಆರಂಭಿಸಿದ್ದೆ. ಜೇಸಿಐ, ರೋಟರಿ, ಮುಳಿಯ ಸಂಸ್ಥೆ, ಪುತ್ತೂರಿನ ಜನತೆ ಪ್ರೋತ್ಸಾಹಿಸಿದ್ದರಿಂದ ಸಂಸ್ಥೆಯು ಬೆಳೆದಿದೆ. 2025ನೇ ವರ್ಷಕ್ಕೆ 25 ಫ್ರಾಂಚೈಸಿಗಳನ್ನು ತೆರೆಯಲು ಇಚ್ಚಿಸಿದ್ದೇನೆ. ಈ ಸಂಸ್ಥೆಯನ್ನು ಮಾಡೆಲ್ ಆಗಿ ತೆಗೆದುಕೊಂಡು ಸಂಸ್ಥೆಗೆ ಮಹಿಳೆಯರನ್ನೇ ಉದ್ಯೋಗಕ್ಕೆ ನೇಮಿಸುವ ಯೋಜನೆ ಹೊಂದಿದ್ದೇನೆ. ಇವತ್ತು ಆಗಮಿಸಿದ ಗ್ರಾಹಕರಿಗೆ ಡ್ರೈಫ್ರುಟ್ಸ್ ಮೇಲೆ ಮುಂದಿನ ದಿನಗಳಲ್ಲಿ ಶೇ.10 ಡಿಸ್ಕೌಂಟ್ ನೀಡಲಾಗುತ್ತದೆ. ಈಗಾಗಲೇ ಗ್ರಾಹಕರು ನಮಗೆ ಪ್ರೋತ್ಸಾಹವನ್ನು ನೀಡಿದ್ದೀರಿ, ಇದುವೇ ಪ್ರೋತ್ಸಾಹ ನಿರಂತರ ಮುಂದುವರೆಯಲಿ.
-ಕುಸುಮ್‌ರಾಜ್, ಮಾಲಕರು, ಲಹರಿ ಡ್ರೈಫ್ರುಟ್ಸ್ ಆಂಡ್ ಮೋರ್
ಒಂದೇ ಸೂರಿನಡಿ ಲಭ್ಯ..
ಆರೋಗ್ಯಯುತವಾದ ಡ್ರೈ ಫ್ರುಟ್ಸ್, ಸ್ವಾದಿಷ್ಟವುಳ್ಳ ಚಾಕಲೇಟ್ ಐಟಂಗಳು ಮತ್ತು ಬಾಂಬೆ ಕಪೂರ್ ಕುಲ್ಫಿವನ್ನೊಳಗೊಂಡ ಉತ್ತಮ ಗುಣಮಟ್ಟದ ಐಟಂಗಳು ದೊರೆಯುತ್ತದೆ ಮಾತ್ರವಲ್ಲದೆ ಎಲ್ಲಾ ಸಂಘ-ಸಂಸ್ಥೆಗಳಿಗೆ ಸನ್ಮಾನಕ್ಕೆ ಬೇಕಾಗುವ ಸಾಮಾಗ್ರಿಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಗ್ರಾಹಕರು ನಮ್ಮನ್ನು ಪ್ರೋತ್ಸಾಹಿಸಿ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ 7624957763 ನಂಬರಿಗೆ ಸಂಪರ್ಕಿಸಬಹುದು ಎಂದು ಮಳಿಗೆಯ ಮಾಲಕರಾದ ಶ್ರೀಮತಿ ಲಲಿತಾ ಕುಸುಮ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.