ಶ್ರೀ ಕ್ಷೇತ್ರ ಕೆಯ್ಯೂರು ದೇವಿಯ ವಾರ್ಷಿಕ  ಜಾತ್ರೋತ್ಸವ- ಹಸಿರು ಹೊರೆ ಕಾಣಿಕೆ ಮೆರವಣಿಗೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.24ರಂದು ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇವಳದ ಉತ್ಸವ ಸಮಿತಿ ಅಧ್ಯಕ್ಷ  ಸಂತೋಷ್ ಕುಮಾರ್ ರೈ ಇಳಂತಾಜೆ,ಹಸಿರು ಹೊರೆಕಾಣಿಕೆ ಸಂಚಾಲಕ ಜಯಂತ ಪೂಜಾರಿ ಕೆಂಗುಡೇಲು ಮಹಾದ್ವಾರ ಬಳಿ ತೆಂಗಿನಕಾಯಿ ಒಡೆಯುವ ಮೂಲಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ  ಚಾಲನೆ ನೀಡಿದರು.

ನಂತರ ಕೆಯ್ಯೂರು ದೇವಿನಗರದಿಂದ ಕೆಯ್ಯೂರು ದೇವಲಾಯದ ತನಕ  ಚೆಂಡೆ,ಕುಣಿತ, ಮತ್ತು ಶ್ರೀ ದುರ್ಗಾ ಪರಮೇಶ್ವರಿ ಮಕ್ಕಳ ಭಜನಾ ತಂಡ ಕೆಯ್ಯೂರು, ಶ್ರೀ ರಾಮ ಕುಣಿತ ಮಕ್ಕಳ ಭಜನಾ ತಂಡ ಕೆಯ್ಯೂರು, ಶ್ರೀ ದರ್ಮರಸು ಉಳ್ಳಾಕುಲು ಭಜನಾ ತಂಡ ಪಾಲ್ತಾಡಿ ಇವರಿಂದ ಭಜನಾ ಕುಣಿತ ನಡೆದು, ಭಕ್ತಾದಿಗಳು ನೀಡಿದ ಹೊರ ಕಾಣಿಕೆಯನ್ನು ಬಹಳ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಸಾಗಿ, ಪ್ರದಾನ ಅರ್ಚಕರಾದ ಶ್ರೀನಿವಾಸ ರಾವ್ ಆರತಿ ಬೆಳಗಿಸಿ  ದೇವರಿಗೆ ಸಮರ್ಪಿಸಿದರು.

ಬಳಿಕ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಚಂಡಿಯಾಗ ಪ್ರಾರಂಭ ಗೊಂಡು ಮದ್ಯಾಹ್ನ ಮಹಾಗಣಪತಿ ಹೋಮ ಮತ್ತು ಚಂಡಿಕಾಯಾಗದ ಪೂರ್ಣಾಹುತಿ ನಡೆದು ಶ್ರೀ ದೇವರಿಗೆ ಸಾನಿಧ್ಯ ಕಲಶಾಭಿಷೇಕ ನಡೆಸಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದೇವಳದ ಆಡಳಿತಾದಿಕಾರಿ ನಮಿತಾ.ಎ.ಕೆ, ಗೌರವದ್ಯಕ್ಷ  ಶಶಿಧರ ರಾವ್ ಬೊಳಿಕ್ಕಳ, ಉತ್ಸವ ಸಮಿತಿ ಅದ್ಯಕ್ಷ ಸಂತೋಷ್ ಕುಮಾರ್ ರೈ ಇಳಂತಾಜೆ, ಮಾಜಿ ವ್ಯವಸ್ಥಾಪಾನ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರುಗಳು, ಅರ್ಚಕವೃಂದ, ನೌಕರವೃಂದ, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು, ಅಧ್ಯಕ್ಷರು,ಸದಸ್ಯರು, ಉತ್ಸವ ಸಮಿತಿಯ ವಿವಿಧ ಸಮಿತಿಯ ಸಂಚಾಲಕರು, ಸದಸ್ಯರು, ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು ಪಾಳ್ಗೊಂಡಿದ್ದರು.

LEAVE A REPLY

Please enter your comment!
Please enter your name here