ಪುತ್ತೂರು ಧೀಶಕ್ತಿ ಬಳಗದ ನಿರ್ದೇಶಕಿ ಪದ್ಮಾ ಕೆ.ಆರ್.ಆಚಾರ್ಯರಿಗೆ ಯಕ್ಷಧ್ರುವ ಪುರಸ್ಕಾರ

0

ಪುತ್ತೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು, ಕೇಂದ್ರ ಮಹಿಳಾ ಘಟಕದ ಸಪ್ತಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕೊಡಲ್ಪಡುವ “ಯಕ್ಷಧ್ರುವ ಪುರಸ್ಕಾರ-2024” ನ್ನು ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದ ನಿರ್ದೇಶಕರಾದ ಪದ್ಮಾ ಕೆ ಆರ್ ಆಚಾರ್ಯ ಇವರಿಗೆ ನೀಡಿ ಗೌರವಿಸಿದರು. ಇವರು ಪುತ್ತೂರಿನ ನ್ಯಾಯವಾದಿ ಕೆ ಆರ್ ಆಚಾರ್ಯರವರ ಪತ್ನಿಯಾಗಿದ್ದಾರೆ. ಕಳೆದ 19 ವರ್ಷಗಳಿಂದ ತಾಳಮದ್ದಳೆ ಅರ್ಥದಾರಿಗಳಾಗಿ, ಇತ್ತೀಚೆಗೆ ದಶಮಾನೋತ್ಸವವನ್ನು ಆಚರಿಸಿದ ಧೀಶಕ್ತಿ ಮಹಿಳಾ ಯಕ್ಷಬಳಗದ ಮತ್ತು ಬಾಲಿಕಾ ಯಕ್ಷಬಳಗದ ಸ್ಥಾಪಕರಾಗಿದ್ದಾರೆ. ಪಾವಂಜೆಯಲ್ಲಿ ನಡೆದ ಪಟ್ಲಫೌಂಡೇಶನ್ ಕೇಂದ್ರ ಮಹಿಳಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಲಫೌಂಡೇಶನ್ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here