ನಾಳೆ (ಮಾ.27) ಪೆರ್ಲಂಪಾಡಿಯಲ್ಲಿ ಸನ್ನಿಧಿ ಹಾರ್ಡ್ ವೇರ್ ಶುಭಾರಂಭ

0

ಪುತ್ತೂರು: ಕೃಷಿ ಸಂಬಂಧಪಟ್ಟ ವಸ್ತುಗಳು, ಪೈಪು ಫಿಟ್ಟಿಂಗ್ ಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಕೃಷಿಕರಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳ ಮಾರಾಟ ಮಳಿಗೆ ಸನ್ನಿಧಿ ಹಾರ್ಡ್ ವೇರ್ ಮಾ.27ರಂದು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿರುವ ಸನ್ನಿಧಿ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.

ಬೆಳಿಗ್ಗೆ 9.46 ರ ಶುಭ ಮುಹೂರ್ತದಲ್ಲಿ ಸಂಸ್ಥೆ ಶುಭಾರಂಭಗೊಳ್ಳಲಿದ್ದು ಗ್ರಾಹಕರು, ಗ್ರಾಮಸ್ಥರು, ಕೃಷಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಲಕರಾದ ಗುಡ್ಡಪ್ಪ ಗೌಡ, ಜಯಲಕ್ಷ್ಮೀ ಕೆ.ಜಿ ಅಶ್ವಿತ್ ಕೆ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾರ್ಡ್ ವೇರ್ ನಲ್ಲಿ ಗೃಹೋಪಯೋಗಿ ವಸ್ತುಗಳಾದ ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳು, ಹಂಡೆಗಳು, ಎಲ್ಲಾ ವಿಧದ ಪೈಪು ಫಿಟ್ಟಿಂಗ್ ಗಳು, ಕೃಷಿಗೆ ಸಂಬಂಧಿಸಿದ ವಸ್ತುಗಳು ಲಭ್ಯವಿದೆ. ಗ್ರಾಹಕರು ಸಹಕರಿಸುವಂತೆ ಮಾಲಕರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here