ಪುತ್ತೂರು: ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ಊರ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆಯು ಮಾ.25ರಂದು ಜರಗಿತು. ಬಳಿಕ ಭಕ್ತಾದಿಗಳಿಂದ ಸ್ವಚ್ಚತೆ ಹಾಗೂ ಅಲಂಕಾರ ಸೇವೆ ನೆರವೇರಿತು.
ಸಂಜೆ ತಂತ್ರಿಗಳ ಆಗಮನ, ಪುರ್ಣಕುಂಭ ಸ್ವಾಗತ ನಡೆದ ಬಳಿಕ, ದೇವತಾ ಪ್ರಾರ್ಥನೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ`ಸಹಕಾರ ರತ್ನ’ ಸವಣೂರು ಕೆ.ಸೀತಾರಾಮ ರೈ, ಕಾರ್ಯದರ್ಶಿ ಎನ್.ಶಿವಪ್ರಸಾದ್ ಶೆಟ್ಟಿ ಕಿನಾರ, ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ಸದಸ್ಯರುಗಳಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಶಿವರಾಮ ಗೌಡ ಮೆದು, ರಾಕೇಶ್ ರೈ ಕೆಡೆಂಜಿ, ಆಶಾ ಪ್ರವೀಣ್ ಕಂಪ, ಮೋನಪ್ಪ ಗೌಡ ಆರೇಲ್ತಡಿ, ಪ್ರೇಮ ಪುಟ್ಟಣ್ಣ ನಾಯ್ಕ ಆರೇಲ್ತಡಿ, ಅರ್ಚಕ ಪದ್ಮನಾಭ ಕುಂಜತ್ತಾಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ, ಸದಸ್ಯರುಗಳಾದ ರಾಜೀವಿ ವಿ.ಶೆಟ್ಟಿ ಕೆಡೆಂಜಿ, ತೀರ್ಥರಾಮ್ ಕೆಡೆಂಜಿ, ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಪ್ರವೀಣ್ ನಾೖಕ್ ಕಂಪ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಗಂಗಾಧರ್ ಪೆರಿಯಡ್ಕ, ನಿವೃತ್ತ ಉಪ ಕಾರ್ಯನಿರ್ವಹಣಾಧಿಕಾರಿ ಕುಸುಮ ಪಿ.ಶೆಟ್ಟಿ ಕೆರೆಕೋಡಿ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗೋಪಾಲಕೃಷ್ಣ ಗೌಡ, ಮಾಜಿ ನಿರ್ದೇಶಕ ಪ್ರಕಾಶ್ ಕುದ್ಮನಮಜಲು, ರಾಜೇಶ್ ರೈ ಮುಗೇರು, ಕುಶಾಲಪ್ಪ ಗೌಡ ಇಡ್ಯಾಡಿ, ರಾಜೇಶ್ ಇಡ್ಯಾಡಿ, ಪುಷ್ವರಾಜ್ ಆರೇಲ್ತಡಿ, ಜತ್ತಪ್ಪ ಗೌಡ ಆರೇಲ್ತಡಿ, ವಸಂತ ಗೌಡ ಕಾಯರ್ಗ, ಸವಣೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ಕಾಯರ್ಗ, ಹರಿಶ್ಚಂದ್ರ ಗೌಡ ಕಾಯರ್ಗ, ಚಂದ್ರಶೇಖರ್ ಮೆದು, ಗಿರಿಧರ್ ಗೌಡ ಮೆದು, ಚಂದಪ್ಪ ಪೂಜಾರಿ ಊರುಸಾಗು, ಜಗದೀಶ್ ಇಡ್ಯಾಡಿ, ಸುರೇಶ್ ರೈ ಸೂಡಿಮುಳ್ಳು, ಮೋಹನ್ ರೈ ಕೆರೆಕೋಡಿ, ರವಿ ಪೂಜಾರಿ ಕೇಕುಡೆ, ಬಾಲಚಂದ್ರ ರೈ ಕೆರೆಕೋಡಿ ಸಹಿತ ಊರ ಮತ್ತು ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.
ದೇವಾಲಯಕ್ಕೆ ಕೊಡುಗೆ:
ರವಿ ಪೂಜಾರಿ ಕೇಕುಡೆರವರು ದೇವಾಲಯಕ್ಕೆ ಮರದ ಸ್ಟ್ಯಾಂಡ್ವೊಂದನ್ನು ಕೊಡುಗೆಯಾಗಿ ನೀಡಿದರು.