ಪುತ್ತೂರು: ಶ್ರೀ ಸುಬ್ರಹ್ಮಣ್ಯ ಸಭಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತರಿಗೆ ವಾಸ ಮಾಡಲು ಸುಸಜ್ಜಿತ ಕೊಠಡಿ ಮತ್ತು ಇನ್ನಿತರ ವ್ಯವಸ್ಥೆ ಹೊಂದಿರುವ ಮುರ ಶಿವಸದನದಲ್ಲಿ ನೂತನವಾಗಿ ಮೂರನೇ ಅಂತಸ್ತಿನ ಮತ್ತು ವಿಶೇಷಚೇತನರ ವಸತಿನಿಲಯ ಮತ್ತು ಶುಶ್ರೂಷಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಮಾ.29ರಂದು ನಡೆಯಲಿದೆ ಎಂದು ಶ್ರೀ ಸುಬ್ರಹ್ಮಣ್ಯ ಸಭಾ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಕರುಣಾಕರ ರಾವ್ ಬೆಳ್ಳೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮವನ್ನು ಐಕ್ಯೂವಿಐಎ ಸಂಸ್ಥೆಯ ನಿರ್ದೇಶಕ ನಿಶಾಂತ್ ರಾವ್ ಉದ್ಘಾಟಿಸಲಿದ್ದಾರೆ. ಹಿರಿಯ ವ್ಯವಸ್ಥಾಪಕ ಸ್ವಾಮಿರುದ್ರ, ಶ್ರೀ ಮಾಧವ ಸೇವಾ ಸಂಸ್ಥೆಯ ವ್ಯವಸ್ಥಾಪಕ ಕೆ.ಪ್ರಭಾಕರ ರಾವ್, ಶ್ರೀ ಸುಬ್ರಹ್ಮಣ್ಯ ಸಭಾ ಮಂಗಳೂರಿನ ನಿರ್ದೇಶಕ ಚಂದ್ರಕಾಂತ್ ರಾವ್ ಇನ್ನಾ ಅವರು ಭಾಗವಹಿಸಲಿದ್ದಾರೆ. ಈ ಆಶ್ರಯಧಾಮ ಯಾವುದೇ ಜಾತಿ, ಭೇದವಿಲ್ಲದೆ ಅವಶ್ಯಕತೆ ಇರುವ ಎಲ್ಲಾ ಜನರಿಗೆ ವಾಸಿಸುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದ್ದು, 30 ವರ್ಷ ಮೇಲ್ಪಟ್ಟ ಬದ್ದಿಮಾಂದ್ಯರಿಗೆ 24ಗಂಟೆಯೂ ಸೇವೆ, ಮಕ್ಕಳ ಚಟುವಟಿಕೆಗೆ ಬೇರೆ ಬೇರೆ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಎಮ್ ಎಸ್ ರಘುನಾಥ್ ರಾವ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು.