ವಿಟ್ಲ: ಜಮೀನು ವಿವಾದ – ಅನುಚಿತ ವರ್ತನೆ, ಹಲ್ಲೆ

0

ವಿಟ್ಲ: ವಿಟ್ಲದ ನಿವಾಸಿಯೊಬ್ಬರ ಜಮೀನಿಗೆ ಹೋಗುವ ದಾರಿಗೆ, ಇಲ್ಲಿನ ಸ್ಧಳೀಯರಾದ ಲವೀನ್ ಜೋಗಿ ಎಂಬರು ಬೇಲಿ ಹಾಕಿದ್ದು, ಈ ಬಗ್ಗೆ ಸ್ಧಳಕ್ಕೆ ತೆರಳಿ ಪ್ರಶ್ನಸಿದಾಗ ಲವೀನ್ ಜೋಗಿ ಅವರು ಹಲ್ಲೆ ಮಾಡಿರುವ ಘಟನೆ 28-02-2024 ರಂದು ಸಂಜೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲಿ ಹಾಕುತ್ತಿರುವ ವಿಚಾರದ ಬಗ್ಗೆ ಸ್ಧಳಕ್ಕೆ ತೆರಳಿ ವಿಚಾರಿಸಿದಾಗ ಲವೀನ್ ಜೋಗಿಯವರು ಅವಾಚ್ಯ ಶಬ್ದಗಳಿಂದ ಬೈದು, ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತ ಮಹಿಳೆ ಬೊಬ್ಬೆ ಹಾಕಿದ್ದು, ಇದನ್ನ ಕೇಳಿ ಸ್ಥಳಕ್ಕೆ ಬಂದ ಮಹಿಳೆಯ ಮಗನಿಗೂ ಲವೀನ್ ಜೋಗಿಯವರು ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಹಲ್ಲೆಯಿಂದ ಗಾಯಗೊಂಡ ಸಂತ್ರಸ್ತ ಮಹಿಳೆ ಹಾಗೂ ಅವರ ಮಗ ವಿಟ್ಲ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 52/2024 ಕಲಂ: 504,354,323,324,506 IPಅ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here