ಕನ್ಯಾನ ಜಾತ್ರೋತ್ಸವದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ

0

ಪುತ್ತೂರು: ಕನ್ಯಾನ ಶ್ರೀ ಮಲರಾಯ ದೈವದ ಜಾತ್ರೋತ್ಸವದ ಸಂದರ್ಭದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ, ಪುತ್ತೂರು ಇವರಿಂದ ಪದ್ಮಾ ಕೆ ಆರ್ ಆಚಾರ್ಯ ಸಾರಥ್ಯದಲ್ಲಿ “ಯಕ್ಷ-ಗಾನಾರ್ಥ ವೈಭವ”, ಕಾರ್ಯಕ್ರಮವು ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ, ಉದಯೋನ್ಮುಖ ಕಲಾವಿದರಾದ ಶ್ರೇಯಾ ಆಚಾರ್ಯ, ರಚನಾ ಚಿದ್ಗಲ್, ಸಿಂಚನಾ ಮೂಡುಕೋಡಿ, ಮದ್ದಳೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ, ಪಂಜ ರಾಮದಾಸ್ ಶೆಟ್ಟಿ ದೇವಸ್ಯ, ಚೆಂಡೆಯಲ್ಲಿ ಚೆಂಡೆ ಮಾಂತ್ರಿಕ ಪ್ರಶಾಂತ್ ಶೆಟ್ಟಿ ವಗೆನಾಡುರವರ ಶಿಷ್ಯ ಮಾಸ್ಟರ್ ಅದ್ವೈತ ಕನ್ಯಾನ ಭಾಗವಹಿಸಿದರು. “ಹರಿಶ್ಚಂದ್ರ-ಚಂದ್ರಮತಿ”, “ಭೀಷ್ಮ-ಪರಶುರಾಮ”, “ಕರ್ಣ-ಶಲ್ಯ” ಎಂಬ ಮೂರು ಸಂವಾದ ಕಾರ್ಯಕ್ರಮಗಳು ನಡೆಯಿತು. ಹರಿಶ್ಚಂದ್ರನಾಗಿ ಹೀರಾ ಉದಯ್, ಚಂದ್ರಮತಿಯಾಗಿ ಶ್ರುತಿ ವಿಸ್ಮಿತ್, ಭೀಷ್ಮನಾಗಿ ಜಯಲಕ್ಷ್ಮಿ ವಿ ಭಟ್, ಪರಶುರಾಮನಾಗಿ ಶುಭಾ ಪಿ ಆಚಾರ್ಯ, ಕರ್ಣನಾಗಿ ಪದ್ಮಾ ಕೆ ಆರ್ ಆಚಾರ್ಯ, ಶಲ್ಯನಾಗಿ ಪ್ರೇಮಾ ಕಿಶೋರ್ ಭಾಗವಹಿಸಿದರು. ಮಂಜುಳಾ. ಪಿ. ಕನ್ಯಾನ ಕಾರ್ಯಕ್ರಮ ಆಯೋಜಿಸಿದ್ದರು. ದೈವಸ್ಥಾನದ ಮುಖ್ಯಸ್ಥರು ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here