ಪುತ್ತೂರು: ಕಳೆದ ಎರಡು ದಿನದ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ ಕಡಬ ತಾಲೂಕಿನ ಕಲಾರದ ಸುವಿಧಾ ಸಹಾಯಕಿ ರತ್ನಾರವರ ಮನೆ ಮೇಲೆ ಬಿದ್ದಿದ್ದ ಮರವನ್ನು ಕಡಬದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತೆರವು ಕಾರ್ಯ ನಡೆಸಿದರು.
ಕಡಬ ಶೌರ್ಯ ವಿಪತ್ತು ನಿರ್ವಹಣಾ ಬಳಗದ 8 ಮಂದಿ ಸದಸ್ಯರು ಸ್ಥಳಕ್ಕೆ ಧಾವಿಸಿ ಮನೆಯ ಮೇಲೆ ಬಿದ್ದಿದ್ದ ಮರ ತೆರವುಗೊಳಿಸಿದರು. ಅಲ್ಲದೆ ಅಪಾಯಕಾರಿ ಮರದ ಕೊಂಬೆಗಳನ್ನು ತೆರವುಗೊಳಿಸಿ ಮನೆಯ ಮೆಲ್ಚಾವಣಿಯನ್ನು ಪುನರ್ ನಿರ್ಮಾಣ ಮಾಡಲಾಯಿತು. ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಪಿಡಿಒ ಆನಂದ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್ ಅಲಾಜೆ, ಶೌರ್ಯ ವಿಪತ್ತು ನಿರ್ವಹಣಾ ಬಳಗದ ತಾಲೂಕು ಮಾಸ್ಟರ್ ಪ್ರಶಾಂತ್ ಎಸ್.ಎಸ್. ಸಂಯೋಜಕಿ ನಳಿನಿ ಪಿ. ಹಾಗೂ ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು.