ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಪದವಿ ಪ್ರಧಾನ ಸಮಾರಂಭ

0

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕಿಂಡರ್ ಸಿಟಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ಮಾ.27ರಂದು ನಡೆಯಿತು.

ಕುಂತೂರು ಮಾರ್ ಇವಾನಿಯೋಸ್ ಶಾಲಾ ಮುಖ್ಯ ಶಿಕ್ಷಕಿ ರೆ.ಸಿ.ಅಲೆನ್.ಡಿ.ಎಂ.ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪುಟಾಣಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕ ರೆ.ಫಾ.ಜೈಸನ್ ಸೈಮನ್ ಒಐಸಿ ಅವರು ಪುಟಾಣಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ರೆ.ಫಾ.ಡಾ.ವರ್ಗಿಸ್ ಕೈಪನಡ್ಕ ಒಐಸಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಶುಭ ಹಾರೈಸಿದರು. ಉಪಪ್ರಾಂಶುಪಾಲ ಜೋಸ್ ಎಂ.ಜೆ, ಕಿಂಡರ್ ಗಾರ್ಡನ್ ಮುಖ್ಯಸ್ಥೆ ಗೆಸ್ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಟಾಣಿ ಶ್ವಿನನ್ ಸ್ವಾಗತಿಸಿದರು. ಪುಟಾಣಿ ಅಭಿಷೀತ್ ವಂದಿಸಿದರು. ಪುಟಾಣಿ ಅನನ್ಯ ಈಶಲ್ ಡೆಸ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here