ಮಾ.29: ಕುಕ್ಕುತ್ತಡಿ ದರ್ಬೆ ಗರಡಿ ಬ್ರಹ್ಮಬೈದೇರುಗಳ ನೇಮೋತ್ಸವ

0

ಪುತ್ತೂರು: ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ಕುಕ್ಕುತ್ತಡಿ ದರ್ಬೆ ಬ್ರಹ್ಮಗಿರಿ ನೇತ್ರಾದಿ ಗರಡಿ ಶ್ರೀ ನಾಗಬಿರ್ಮೆರ್‌ ಕೋಟಿ ಚೆನ್ನಯ ಸನ್ನಿಧಾನದಲ್ಲಿ 12ನೇ ವರ್ಷದ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವವು ಮಾ.29ರಂದು ನಡೆಯಲಿದೆ. ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ಕುಕ್ಕುತ್ತಡಿ ದರ್ಬೆ ಮನೆಯಿಂದ ಭಂಡಾರ ತೆಗೆದು ರಾತ್ರಿ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಕೋಟಿ ಚೆನ್ನಯರು ಗರಡಿ ಇಳಿಯುವುದು, ಕಿನ್ನಿದಾರು ಗರಡಿ ಇಳಿಯುವುದು, ದರ್ಶನ ಪಾತ್ರಿಗಳ ರಂಗಸ್ಥಳ ಪ್ರವೇಶ, ಬೈದೇರುಗಳಲ್ಲಿ ಅರಿಕೆ ಮತ್ತು ಗಂಧಪ್ರಸಾದ ವಿತರಣೆ ಜರಗಲಿದೆ.
ಸಂಜೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ, ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ ಶ್ರೀ ಮಣಿಕಂಠ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ನಡೆದು ಬಳಿಕ ಧರ್ಮಜಾಗೃತಿ ಸಭೆ ಮತ್ತು ಪಾವೂರು ಭಂಡಾರದ ಮನೆ ದಿ. ಮೋನಪ್ಪ ಪೂಜಾರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಶ್ರೀ ನಾರಾಯಣ ಗುರು ವೈದಿಕ ಸಮಿತಿ ಮಂಗಳೂರು ಇದರ ಅಧ್ಯಕ್ಷ ಹರೀಶ್‌ ಶಾಂತಿ ಪುತ್ತೂರುರವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ವಿವಿಧ ಗರಡಿಗಳ ಮೊಕ್ತೇಸರರು, ನೇಮ ಕಟ್ಟುವ ಶೀನ ಪರವ, ನಾರಾಯಣ ಪರವ, ಸುಂದರ ಪರವ ಮತ್ತು ನೇಮು ಪರವ, ಪರಿಚಾರಕಾದ ಶೀನಪ್ಪ ಪೂಜಾರಿ, ನಾರಾಯಣ ಪೂಜಾರಿ, ದಿನೇಶ್‌ ಪೂಜಾರಿ, ಬಾಲಕೃಷ್ಣ ಮಡಿವಾಳ ಮತ್ತು ವಾದ್ಯವಾದಕರಾದ ಸಂದೀಪ್‌ ಮತ್ತು ಶ್ರೀಧರ ಕಾವುರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶಿಕ್ಷಕ ವಿಠಲ ನಾಯಕ್‌ ರವರು ಅಭಿನಂದಿಸಲಿದ್ದಾರೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿಠಲ ನಾಯಕ್‌ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮʼ ನಡೆಯಲಿದೆ ಎಂದು ಗರಡಿಯ ಮುಖ್ಯಸ್ಥರಾದ ಜಯರಾಮ ಪೂಜಾರಿ ಡಿ. ಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here