ಪುತ್ತೂರು ಮಾಯಿ ದೆ ದೇವುಸ್ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ನೆನಪಿನ ಪವಿತ್ರ ಗುರುವಾರ ಆಚರಣೆ

0

ಪುತ್ತೂರು: ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ. ಮಾ.24 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಮಾ.29 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ. ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ಭೋಜನವನ್ನು ಈ ದಿನವು ಗುರುತಿಸುತ್ತದೆ. ನಾವೆಲ್ಲರೂ ಸಮಾನರು ಎಂಬುದರ ಸಂಕೇತವಾಗಿ ನಾವು ವಿನಮ್ರರಾಗಿರಬೇಕು ಮತ್ತು ಪರಸ್ಪರ ಪಾದಗಳನ್ನು ತೊಳೆಯುವುದರ ಮೂಲಕ ಸೇವಾ ಮನೋಭಾವನೆಗೆ ಸಿದ್ಧರಾಗಿರಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪಾಠವನ್ನು ಸಹ ಇದು ನೆನಪಿಸುತ್ತದೆ. ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಪ್ರಪಂಚದಾದ್ಯಂತ ಎಲ್ಲಾ ಚರ್ಚುಗಳಲ್ಲಿ ಪಶ್ಚಾತ್ತಾಪದ ವಿಧಿ, ಪಾದ ಸ್ನಾನದ ವಿಧಿ, ಪರಮ ಪ್ರಸಾದ ವಿಧಿ ಹಾಗೂ ಪರಮ ಪ್ರಸಾದ ಪ್ರತಿಷ್ಠಾಪನೆ ಮತ್ತು ಆರಾಧನೆ ವಿಧಿಗಳನ್ನು ಆಚರಿಸಲಾಗುತ್ತದೆ.

ಅದರಂತೆ ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿದೆ ದೇವುಸ್ ಚರ್ಚಿನಲ್ಲಿ ಪವಿತ್ರ ಗುರುವಾರವನ್ನು ಮಾ.28 ರಂದು ಆಚರಿಸಲಾಯಿತು. ಪ್ರದಾನ ಧರ್ಮಗುರುಗಳಾಗಿ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಬಲಿ ಪೂಜೆಯನ್ನು ನೆರವೇರಿಸಿದರು. ಪ್ರಭು ಕ್ರಿಸ್ತರ ಪ್ರತಿನಿಧಿಯಾಗಿ, ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ರವರು ಧರ್ಮ ಕೇಂದ್ರದ ವಿವಿಧ ವರ್ಗಗಳಿಂದ ಆರಿಸಲ್ಪಟ್ಟ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುದರ ಮೂಲಕ ಪರಸೇವೆ, ಪರಸ್ನೇಹ, ದೀನತೆಯ ಮಹತ್ವವನ್ನು ತಿಳಿಸಿದರು. ವಂದನಿಯ ಸ್ಟ್ಯಾನಿ ಪಿಂಟೋ ರವರು ತಮ್ಮ ಪ್ರವಚನದಲ್ಲಿ ಬಲಿಪೂಜೆಯ ಮಹತ್ವವನ್ನು ಹಾಗೂ ಯಾಜಕಿ ದೀಕ್ಷೆಯ ದಿನವಾದ ಇಂದು ಅದರ ಮಹತ್ವವನ್ನು ಸಾರಿ ಹೇಳಿದರು. ಸಹಾಯಕ ಧರ್ಮಗುರುಗಳಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಪರಮ ಪ್ರಸಾದದ ಪ್ರತಿಷ್ಠಾಪನೆ ಮತ್ತು ಆರಾಧನೆಯನ್ನು ವಂದನಿಯಾ ರೂಪೇಶ್ ತೌರೋರವರು ನಡೆಸಿಕೊಟ್ಟರು. ಯೇಸುವಿನ ಕೊನೆಯ ಭೋಜನದ ಸಂಕೇತವಾಗಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ರೊಟ್ಟಿಯನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here