ಸವಣೂರಿನಲ್ಲಿ “ಸ್ಕಂದ ಮಾರ್ಟ್” ಶುಭಾರಂಭ

0

ಸ್ಕಂದ ಮಾರ್ಟ್ ದೊಡ್ಡದಾದ ಸಂಸ್ಥೆಯಾಗಿ ಬೆಳೆಯಲಿ- ನಳಿನ್ ಕುಮಾರ್

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶ್ರೀ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಮಾ.29 ರಂದು ಸ್ಕಂದ ಮಾರ್ಟ್( ಜಿನಸು ಸಾಮಾಗ್ರಿಗಳ ಮಾರಾಟ ಮಳಿಗೆ) ಶುಭಾರಂಭಗೊಂಡಿತು.


ದ.ಕ.ಸಂಸದ ನಳಿನ್ ಕುಮಾರ್ ಕಟೀಲ್‌ರವರು ಸ್ಕಂದ ಮಾರ್ಟ್ ಸಂಸ್ಥೆಯನ್ನು ಉದ್ಘಾಟಿಸಿ, ಮಾತನಾಡಿ ಬಂಬಿಲ ವಿಠಲ ಶೆಟ್ಟಿ ಮತ್ತು ನಾನು ಬಾಲ್ಯ ಸ್ನೇಹಿತರು. ವಿಠಲ ಶೆಟ್ಟಿಯವರು ರಿಕ್ಷಾ ಮತ್ತು ಕಾರು ಮಾಲೀಕನಾಗಿ, ಕೃಷಿಕನಾಗಿ ಬೆಳೆದು ಬಂದವರು, ಈ ಬಾಗದಲ್ಲಿ ಎಲ್ಲರೊಂದಿಗೆ ಚಿರಪರಿಚಿತರಾದ ಇವರು ಕುದ್ಮಾರಿನಲ್ಲಿ ಎರಡು ವರ್ಷಗಳ ಹಿಂದೆ ವ್ಯಾಪಾರ ಮಳಿಗೆಯನ್ನು ಆರಂಭಿಸಿ, ಇದೀಗ ಸವಣೂರು ಪೇಟೆ ವ್ಯವಹಾರ ಕ್ಷೇತ್ರದಲ್ಲಿ ಬಹಳಷ್ಟು ಮುಂದೆ ಬರುತ್ತಿರುವ ಹಿನ್ನಲೆಯಲ್ಲಿ ಸವಣೂರಿನ ಹೃದಯ ಭಾಗದಲ್ಲಿ ಸ್ಕಂದ ಮಾರ್ಟ್ ವ್ಯಾಪಾರ ಮಳಿಗೆಯನ್ನು ಆರಂಭಿಸುವ ಮೂಲಕ, ಉದ್ಯಮ ಕ್ಷೇತ್ರಕ್ಕೆ ವಿಟಳ ಶೆಟ್ಟಿಯವರು ಬಂದಿದ್ದಾರೆ, ಇದಕ್ಕೆ ಅವರ ಮಗ ಮತ್ತು ಸೊಸೆ ಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಈ ವ್ಯಾಪಾರ ಮಳಿಗೆ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ, ಆ ಮೂಲಕ ಈ ಭಾಗದ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ “ಸ್ಕಂದ ಮಾರ್ಟ್” ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ನಿಕಟಪೂರ್ವಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ ಶುಭಹಾರೈಸಿದರು.

ಸಮಾರಂಭದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇರ್ಶಕರುಗಳಾದ ಅಶ್ವಿನ್ ಎಲ್.ಶೆಟ್ಟಿ , ಗಂಗಾಧರ್ ಪೆರಿಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ ಪಿ., ಮಾಜಿ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ, ಉಪಾಧ್ಯಕ್ಷೆ ಜಯಶ್ರೀ,ಮಾಜಿ ಅಧ್ಯಕ್ಷೆ ಇಂದಿರಾ ಬಿ .ಕೆ ಸದಸ್ಯರುಗಳಾದ, ತೀರ್ಥರಾಮ್‌ ಕೆಡೆಂಜಿ, ಗಿರಿಶಂಕರ್ ಸುಲಾಯ, ಸತೀಶ್ ಅಂಗಡಿಮೂಲೆ, ಚಂದ್ರಾವತಿ ಸುಣ್ಣಾಜೆ, ಸವಣೂರು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ,ಪ್ರವೀಣ್‌ ನಾೖಕ್‌ ಕಂಪ, ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಪ್ರಕಾಶ್ ಕುಮಾರ್ ಅರಿಗ ಬಂಬಿಲಗುತ್ತು, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾ.ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಸವಣೂರು, ಶ್ರೀರಕ್ಷಾ ಡ್ರೆಸಸ್ಸ್ ಮಾಲಕ ಸಚಿನ್ ಸವಣೂರು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಉಪಾಧ್ಯಕ್ಷೆ ಆಶಾ ರೈ ಕಲಾಯಿ, ಸುಧಾಕರ್ ರೈ ಕುಂಜಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಬಾಲಕೃಷ್ಣ ರೈ ದೇವಸ್ಯ, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಪೀಕ್ ಅರ್ತಿಕರೆ, ಎಆ.ಸುಬ್ರಹ್ಮಣ್ಯ ಭಟ್, ಅನನ್ಯ ಜುವೆಲ್ಸ್‌ನ ಪದ್ಮನಾಭ ಆಚಾರ್ಯ, ಮಾಸ್ ಸಂಸ್ಥೆಯ ಸವಣೂರು ಶಾಖಾ ಮೇನೇಜರ್ ಯತೀಶ್, ಅಜಿತ್ ರೈ ಹೊಸ ಮನೆ, ನಾರಾಯಣ ಕೊಂಡೆಪ್ಪಾಡಿ, ಕುಶಾಲಪ್ಪ ಗೌಡ ಪೆರುವಾಜೆ, ಪ್ರಮೋದ್ ಕುಮಾರ್ ರೈ ನೂಜಾಜೆ, ಡಾ. ಶ್ಯಾಮ್ ಸುಂದರ್, ಸಂಜೀವ ಪೂಜಾರಿ ಅಗರಿ, ರಾಮಕೃಷ್ಣ ಪ್ರಭು, ರಾಜೇಶ್ ಇಡ್ಯಾಡಿ, ಸಹಿತ ಅನೇಕ ಗಣ್ಯರು ಭಾಗವಹಿಸಿ, ಶುಭಹಾರೈಸಿದರು. ಸವಣೂರು ಸ್ಕಂದ ಮಾರ್ಟ್ ಸಂಸ್ಥೆಯ ಮಾಲಕರಾದ ವಿಠಲ ಶೆಟ್ಟಿ, ಮೋಹಿನಿ ವಿಠಲ ಶೆಟ್ಟಿ, ಸಂದೇಶ್, ಕೃತಿಕಾ, ಮಾ. ತ್ರಿನಾಬ್ ಅತಿಥಿಗಳನ್ನು ಗೌರವಿಸಿದರು.

ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಕೃಷ್ಣ ಶೆಟ್ಟಿ, ಪುಷ್ಪಲತಾ, ವೃತ್ತಿ, ಖಾನಿಷ್ಕ, ಸಂಜೀವ ಶೆಟ್ಟಿ ಹಾಗೂ ಮಾಧವ ಶೆಟ್ಟಿ ಕಾರ್‍ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here