ಗಂಡಿಬಾಗಿಲು: ಬದ್ರ್ ದಿನಾಚರಣೆ, ಇಫ್ತಾರ್ ಕೂಟ

0

ರಾಮಕುಂಜ: ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಗಂಡಿಬಾಗಿಲು ಇದರ ವತಿಯಿಂದ ಬದ್ರ್ ದಿನಾಚರಣೆ ಮತ್ತು ಇದರ ಸಲುವಾಗಿ ರಮಳಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟ ಸಮಾರಂಭ ಮಾ. 28ರಂದು ಜರಗಿತು.


ಬದ್ರ್ ದಿನಾಚರಣೆ ಸಲುವಾಗಿ ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಆಲಿ ಫೈಝಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಬಳಿಕ ಮಾತನಾಡಿ ಬದ್ರ್ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಕುತುಬಿಯ್ಯಾ ಜುಮಾ ಮಸೀದಿಯ ಮುಅದ್ದಿಂ ಬದ್ರುದ್ದೀನ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಮಸೀದಿ ಕಾರ‍್ಯದರ್ಶಿ ಎಸ್. ಆದಂ ಹಾಜಿ, ಕೋಶಾಧಿಕಾರಿ ಹಸೈನಾರ್ ಹಾಜಿ, ಪದಾಧಿಕಾರಿಗಳಾದ ಜಿ. ಮಹಮ್ಮದ್ ರಫೀಕ್, ಅಬ್ದುಲ್ ರಜಾಕ್ ಮರ‍್ವೇಲ್, ಎಸ್. ಅಬ್ದುಲ್ ರಹಿಮಾನ್, ಜಿ. ಅಬ್ದುಲ್ ರಜಾಕ್, ಅಬ್ದುಲ್ ರಜಾಕ್ ಮುಸ್ಲಿಯಾರ್, ನೂಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಪಿ. ಲತೀಫ್, ಕಾರ‍್ಯದರ್ಶಿ ಝಿಯಾದ್, ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಇಸಾಕ್ ಬೊಲುಂಬುಡ, ಆಶಿಫ್, ಝಕರಿಯಾ, ನಿಝಾರ್, ಮಹಮ್ಮದ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here