ಎ.8 ರಿಂದ ದಿ ಪುತ್ತೂರು ಕ್ಲಬ್‌ನಲ್ಲಿ ಮಕ್ಕಳಿಗೆ, ಸ್ತ್ರೀಯರಿಗೆ ಈಜು ಶಿಬಿರ

0

ಪುತ್ತೂರು: ಬೇಸಿಗೆ ಶಿಬಿರದ ಅಂಗವಾಗಿ ಮರೀಲ್ ದಿ ಪುತ್ತೂರು ಕ್ಲಬ್‌ನಲ್ಲಿ ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಈಜು ಶಿಬಿರ ಎ.8ರಿಂದ 27ರ ತನಕ ನಡೆಯಲಿದೆ. ನುರಿತ ತರಬೇತುದಾರರರಿಂದ ಈಜು ತರಬೇತಿ ಮತ್ತು ಸ್ತ್ರೀಯರಿಗೆ ಸ್ತ್ರೀಯರೇ ಈಜು ತರಬೇತಿ ನೀಡಲಿದ್ದು, ಬೆಳಿಗ್ಗೆ ಗಂಟೆ 10 ರಿಂದ 10.45, ಸಂಜೆ ಗಂಟೆ 6 ರಿಂದ 6.45, 7 ರಿಂದ 7.45 ಮತ್ತು 8 ರಿಂದ 8.45ವರೆಗೆ ವಿವಿಧ ಬ್ಯಾಚ್‌ಗಳಲ್ಲಿ ಈಜು ತರಬೇತಿ ನೀಡಲಾಗುತ್ತದೆ. ಇತರ ಸಮಯದಲ್ಲೂ 8 ಮಂದಿಯ ಪ್ರತ್ಯೇಕ ಬ್ಯಾಚ್ ಮಾಡಿ ಈಜು ತರಬೇತಿ ನೀಡಲು ಅವಕಾಶವಿದೆ. ಆಸಕ್ತರು ಮೊಬೈಲ್ ಸಂಖ್ಯೆ 9448283717 ಮತ್ತು 7204083718 ಅನ್ನು ಸಂಪರ್ಕಿಸುವಂತೆ ದಿ ಪುತ್ತೂರು ಕ್ಲಬ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here