ಆರ್ಯಾಪು:ಜಲಜೀವನ್ ಮಿಷನ್ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಸೈಟ್ ಸೂಪರ್‌ವೈಸರ್ ಪಾಲಾಕ್ಷ ಮೃತ್ಯು

0

ಪುತ್ತೂರು:ಜಲಜೀವನ್ ಮಿಷನ್ ಅಡಿಯಲ್ಲಿ ಆರ್ಯಾಪು ಗ್ರಾಮದ ಬಂಗಾರಡ್ಕದಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಸೈಟ್ ಸೂಪರ್‌ವೈಸರ್ ಪಾಲಾಕ್ಷ ಎಂಬವರು ಮೃತಪಟ್ಟ ಘಟನೆ ಮಾ.೨೭ರಂದು ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಂಚಿಕೊಪ್ಪ ಗ್ರಾಮದ ಹುಚ್ಚಪ್ಪ ಎಂಬವರ ಪುತ್ರ, ಪುತ್ತೂರು ಜಲಜೀವನ್ ಮಿಷನ್‌ನ ಕೆವಿಆರ್ ಕಂಪೆನಿಯಲ್ಲಿ ಸೈಟ್ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಪಾಲಾಕ್ಷ (೩೧ವ) ಅವರು ಮಾ.೨೭ರಂದು ಸಂಜೆ ಬಂಗಾರಡ್ಕದ ನೀರಿನ ಟ್ಯಾಂಕ್ ಮೇಲೇರಿ ವೀಕ್ಷಣೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು.ಅಲ್ಲೇ ಇದ್ದ ಧನರಾಜ್ ಎಂಬವರು ತಕ್ಷಣ ಪಾಲಾಕ್ಷ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಆವೇಳೆಗಾಗಲೇ ಅವರು ಮೃತಪಟ್ಟಿದ್ದರು. ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here