ಕಾರಲ್ಲಿ ಬಂದು ತಂದೆ,ಮಗನಿಗೆ ಬೆದರಿಕೆ-ಮಗನಿಗೆ ಹಲ್ಲೆ-ಪೊಲೀಸರಿಗೆ ದೂರು

0

ಪುತ್ತೂರು:ತಂದೆ,ಮಗ ನಡೆದುಕೊಂಡು ಹೋಗುತ್ತಿರುವಾಗ ಕಾರಲ್ಲಿ ಬಂದ ಇಬ್ಬರು ತಡೆಗಟ್ಟಿ ಅವಾಚ್ಯವಾಗಿ ಬೈದು,ಹಲ್ಲೆ ನಡೆಸಿರುವ ಘಟನೆ ಮೊಟ್ಟೆತ್ತಡ್ಕ ಮಣ್ಣಾಪು ಬಳಿ ನಡೆದಿರುವುದಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಕೆಮ್ಮಿಂಜೆ ಗ್ರಾಮದ ಮಹಮ್ಮದ್ ಜುಬೇರ್(೩೦ವ.)ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.ಱಮಾ.೨೮ರಂದು ರಾತ್ರಿ ಸಮಯದಲ್ಲಿ ನಾನು ತಂದೆ ಆದಂರವರೊಂದಿಗೆ ಮನೆಗೆ ನಡೆದುಕೊಂಡು ಹೋಗುವಾಗ ಕೆಮ್ಮಿಂಜೆ ಗ್ರಾಮದ ಮಣ್ಣಾಪು ಮೊಟ್ಟೆತ್ತಡ್ಕ ಎಂಬಲ್ಲಿ, ಆರೋಪಿಗಳಾದ ತಿಂಗಲಾಡಿ ಗ್ರಾಮ,ಪುತ್ತೂರು ನಿವಾಸಿ ಸಿದ್ದಿಕ್ ಅನ್ಸಾರ್ ಹಾಗೂ ಕೆಮ್ಮಿಂಜೆ ಗ್ರಾಮ, ಪುತ್ತೂರು ನಿವಾಸಿ ಶಮೀರ್ ಎಂಬವರು ಕಾರಿನಲ್ಲಿ ಬಂದು ನಮ್ಮನ್ನು ಅಡ್ಡಗಟ್ಟಿ ತಡೆದು ಅವಾಚ್ಯವಾಗಿ ಬೈದಿರುವುದಾಗಿದೆ.ಬಳಿಕ ಆರೋಪಿಗಳು ನನಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಸದ್ರಿ ಸ್ಥಳದಿಂದ ತೆರಳಿರುತ್ತಾರೆೞ ಎಂಬುದಾಗಿ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ (ಅ.ಕ್ರ.ನಂ ೩೧-೨೦೨೪) ಕಲಂ ೩೪೧,೫೦೪, ೩೨೩, ೩೨೪,೫೦೬ ಜೊತೆಗೆ ೩೪ ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here