ಮಾ.31: ಕಟ್ಟತ್ತಾರು ಶಾಲಾ ಶಿಕ್ಷಕಿ ಇಂದಿರಾ ಕೆ ಸೇವಾ ನಿವೃತ್ತಿ

0

ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕಿ ಇಂದಿರಾ ಕೆ.ರವರು ಮಾ.31 ರಂದು ಕರ್ತವ್ಯದಿಂದ ನಿವೃತ್ತಿಯಾಗುತ್ತಿದ್ದಾರೆ. ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1996 ರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರ್ಪಡೆಗೊಂಡ ಇವರು ತೆಗ್ಗುವಿನಲ್ಲಿ 7 ವರ್ಷ 5 ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ 2003 ರಲ್ಲಿ ಕಟ್ಟತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು 20 ವರ್ಷ 7 ತಿಂಗಳು ಕಾಲ ಸೇವೆ ಸಲ್ಲಿಸಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇಂದಿರಾ ಕೆ.ರವರು ಮಾ.31 ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಪತಿ ಪುರಂದರ ರೈ ನಂಜೆ, ಪುತ್ರಿ ತನ್ವಿ ರೈ ಎನ್.ರವರೊಂದಿಗೆ ಮಾಡಾವು ಬೊಳಿಕ್ಕಲದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here