ಆಲಂಕಾರು: ಆಕ್ಸಿಜನ್ ಸಾಗಾಟದ ಈಚರ್ -ಮಿನಿಬಸ್ ಡಿಕ್ಕಿ, ಇಬ್ಬರಿಗೆ ಗಾಯ

0

ಪುತ್ತೂರು: ಈಚರ್ ಹಾಗೂ ಮಿನಿಬಸ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಆಲಂಕಾರು-ಕುದ್ಮಾರು ರಸ್ತೆಯ ಆಲಂಕಾರು ಸಮೀಪ ಬುಡೇರಿಯಾ ಕ್ರಾಸ್‌ನಲ್ಲಿ ಮಾ.೩೦ರಂದು ರಾತ್ರಿ ೮ ಗಂಟೆ ಸುಮಾರಿಗೆ ನಡೆದಿದೆ.

ಆಲಂಕಾರಿನಿಂದ ಕುದ್ಮಾರು ಕಡೆಗೆ ಹೋಗುತ್ತಿದ್ದ ಈಚರ್ ಹಾಗೂ ಕುದ್ಮಾರುನಿಂದ ಆಲಂಕಾರಿಗೆ ಬರುತ್ತಿದ್ದ ಮಿನಿಬಸ್ ನಡುವೆ ಬುಡೇರಿಯಾ ಸಮೀಪ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಮಿನಿಬಸ್ ಜಖಂಗೊಂಡಿದ್ದು ಮಿನಿಬಸ್‌ನ ಚಾಲಕ ಹಾಗೂ ಇನ್ನೊಬ್ಬ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಈಚರ್ ಲಾರಿಯಲ್ಲಿ ಆಕ್ಸಿಜನ್ ಸಿಲಿಂಡರ್ ಸಾಗಾಟ ಮಾಡುತ್ತಿದ್ದು ಅಪಘಾತದ ರಭಸಕ್ಕೆ ಸಿಲಿಂಡರ್ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕದಳದವರನ್ನೂ ಸ್ಥಳಕ್ಕೆ ಕರೆಸಲಾಗಿತ್ತು. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಿದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here