ಗೋಳಿತ್ತೊಟ್ಟು: ದ್ವಿಚಕ್ರ ವಾಹನಗಳ ಡಿಕ್ಕಿ-ಮೂವರಿಗೆ ಗಂಭೀರ ಗಾಯ

0

ನೆಲ್ಯಾಡಿ; ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪದ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗೊಂಡ ಘಟನೆ ಮಾ.30ರಂದು ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಕೊಕ್ಕಡದ ರಜನೀಶ್, ಗಗನ್ ಹಾಗೂ ಗೋಳಿತ್ತೊಟ್ಟುವಿನ ವಿನಯ್ ಎಂದು ಗುರುತಿಸಲಾಗಿದೆ. ವಿನಯ್ ಅವರು ಸಣ್ಣಂಪಾಡಿಯಿಂದ ಗೋಳಿತ್ತೊಟ್ಟು ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಕೊಕ್ಕಡದಿಂದ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಕೊಕ್ಕಡದ ರಜನೀಶ್ ಮತ್ತು ಗಗನ್ ಅವರು ಹೋಗುತ್ತಿದ್ದ ವೇಳೆ ಗೋಳಿತ್ತೊಟ್ಟು ಸಮೀಪದ ಶಿರಾಡಿ ಗುಡ್ಡೆ ಎಂಬಲ್ಲಿ ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here