ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದ ಸಭೆ- ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಸದಸ್ಯರಿಗೆ ಗೌರವಾರ್ಪಣೆ

0

ಪುತ್ತೂರು: ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದ ಮೊದಲ ತ್ರೈಮಾಸಿಕ ಸಭೆಯು ಮಾ .31ರಂದು ಭಕ್ತಕೋಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಮಹಿಳಾ ಮಂಡಲದ ಅಧ್ಯಕ್ಷೆಯಾಗಿರುವ ಮೋಹಿನಿ ಎನ್ ಆರ್ ಭಕ್ತಕೋಡಿ ಅವರು ಮಾತನಾಡುತ್ತಾ ಸರ್ವ ಸದಸ್ಯರ ಒಮ್ಮತದ ಸಹಕಾರದಿಂದ ಮಹಿಳಾ ಮಂಡಲವು ಉನ್ನತ ಮಟ್ಟಕ್ಕೆ ಏರಲು ಸಾಧ್ಯ . ಮಹಿಳಾ ಮಂಡಲ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಎಲ್ಲರೂ ಕೈಜೋಡಿಸಬೇಕು ಎಂದರು.

ಮಹಿಳಾಮಂಡಲದ ಗೌರವ ಅಧ್ಯಕ್ಷೆ ರತ್ನಾವತಿ ಸರ್ವೆ ದೋಳ ಮಾತನಾಡುತ್ತಾ ಸದಸ್ಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು. ಗೌರವ ಸಲಹೆಗಾರರಾಗಿರುವ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್ ಮನೆಯಲ್ಲಿರುವ ಗ್ರಹಿಣಿಯರು ಇಂತಹ ಸಂಘ ಸಂಸ್ಥೆಗಳಲ್ಲಿ ಭಾಗವಹಿಸಿ ಮನೆಯನ್ನು ಬೆಳಗುವುದರೊಂದಿಗೆ ಸಾರ್ವಜನಿಕ ಕೆಲಸದಲ್ಲಿಯೂ ತೊಡಗಿಸಿಕೊಂಡ ತೃಪ್ತಿ ನಮ್ಮದಾಗುತ್ತದೆ ಎಂದರು.

ಶಿಕ್ಷಕಿ ವಿನಯ ವಿ ಶೆಟ್ಟಿ ಶುಭ ಹಾರೈಸಿದರು. ಸಭೆಯಲ್ಲಿ ವಾರ್ಷಿಕವಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ರಜನಿ ರಾಜೇಶ್ ಸರ್ವೆದೊಳ 2023 ನೇ ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ 24ನೇ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಏರ್ಪಡಿಸಿದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಿಲೆಯಲ್ಲಿ ಪ್ರಥಮ, 100 ಮೀ ಓಟದಲ್ಲಿ ತೃತೀಯ , ಶಾರ್ಟ್ ಪುಟ್ ನಲ್ಲಿ ಪ್ರಥಮ ಸ್ಠಾನ ಗಳಿಸಿರುವ ಶ್ರೀ ಗೌರಿ ಮಹಿಳಾ ಮಂಡಲದ ಸದಸ್ಯರಾದ ಶಶಿಕಲಾ ಸತ್ಯನಾರಾಯಣ ಮತ್ತು ಹರಿಣಾಕ್ಷಿ ಚಂದ್ರಶೇಖರ್ ಇವರನ್ನು ಮಹಿಳಾ ಮಂಡಲದ ಪರವಾಗಿ ಗೌರವಿಸಲಾಯಿತು.
ಶಶಿಕಲಾ ಸತ್ಯನಾರಾಯಣ ಪ್ರಾರ್ಥಿಸಿದರು. ಸುಮತಿ ಪರಂಟೋಳು ಸ್ವಾಗತಿಸಿದರು. ವಸಂತಿ ಕಲ್ಲಮ್ಮ ಕಾರ್ಯಕ್ರಮ ನಿರೂಪಿಸಿದರು. ಭವ್ಯ ಸುಬ್ರಹ್ಮಣ್ಯ ಕರುಂಬಾರು ವಂದಿಸಿದರು.

LEAVE A REPLY

Please enter your comment!
Please enter your name here