ಉಪ್ಪಿನಂಗಡಿ: 34ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು ಮತ್ತು ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಬೃಂದಾವನ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಎರಡನೇ ದಿನವಾದ ಎ.1ರಂದು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥರಿಂದ ಸಂಸ್ಥಾನ ಪೂಜೆ ಹಾಗೂ ಹಸಿರು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ವಿಷ್ಣು ಗಾಯತ್ರಿ ಹೋಮ, ನವಗ್ರಹ ಹೋಮ, ಬೃಂದಾವನ ಮತ್ತು ಮುಖ್ಯಪ್ರಾಣ ದೇವರಿಗೆ ಅಷ್ಟಬಂಧ ಲೇಪನ ನಡೆಯಿತು. ಬಳಿಕ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥರಿಂದ ಸಂಸ್ಥಾನ ಪೂಜೆ ನೆರವೇರಿತು. ಉಗ್ರಾಣ ಮುಹೂರ್ತವನ್ನು ಶಾಂತರಾಮ್ ಭಟ್ ಕಾಂಚನ ಮತ್ತು ಪ್ರೇಮಲತಾ ದಂಪತಿ ನಡೆಸಿಕೊಟ್ಟರು. ಹಸಿರು ಹೊರೆ ಕಾಣಿಕೆಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ ಮತ್ತು ಶಾಂತಿನಗರದ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಕ್ರೂಢೀಕರಿಸಿಕೊಂಡು ಅಲ್ಲಿಂದ ಹಸಿರು ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ತಂದು ಶ್ರೀ ಮಠಕ್ಕೆ ಸಮರ್ಪಿಸಲಾಯಿತು.
ಭಜನಾ ಸೇವೆಯನ್ನು ಬ್ರಹ್ಮಕಲಶಾಭಿಷೇಕದ ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ದೀಪ ಪ್ರಜ್ವಲನೆಗೈಯುವ ಮೂಲಕ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ವಿಶ್ವೇಶದಾಸ ವಿದ್ವಾನ್ ಕೈರಬೆಟ್ಟು, ಶ್ರೀ ವಿಶ್ವನಾಥ ಭಟ್ ಅವರು ‘ಶ್ರೀ ರಾಘವೇಂದ್ರ ವೈಭವ’ ಹರಿಕಥೆ ನಡೆಸಿಕೊಟ್ಟರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಅನ್ನಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಕ್, ಕೆ. ಹರೀಶ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ. ಉದಯ ಕುಮಾರ್, ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಉಪಾಧ್ಯಕ್ಷರುಗಳಾದ ಕೆ. ಸದಾನಂದ, ಪ್ರಶಾಂತ್ ಎನ್. ಶಿವಾಜಿನಗರ, ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್, ಬ್ರಹ್ಮಕಲಶಾಭಿಷೇಕ ಸಮಿತಿಯ ಸದಸ್ಯರಾದ ಕರುಣಾಕರ ಸುವರ್ಣ, ಯು.ಜಿ. ರಾಧಾ, ವಿದ್ಯಾಧರ ಜೈನ್, ಸಮಿತಿ ಪದಾಧಿಕಾರಿಗಳಾದ ವಿನೀತ್ ಶಗ್ರಿತ್ತಾಯ, ಶಿವಕುಮಾರ್ ಬಾರಿತ್ತಾಯ, ಶಿವಪ್ರಸಾದ್ ಶ್ರೀರಾಮ ಮೆಡಿಕಲ್, ಸ್ವರ್ಣೇಶ್, ಕೈಲಾರ್ ರಾಜಗೋಪಾಲ ಭಟ್, ಗುಣಕರ ಅಗ್ನಾಡಿ, ಕೀರ್ತನ್ ಕುಮಾರ್ ಶೆಟ್ಟಿ, ಸುಂದರ ಗೌಡ ಅರ್ಬಿ, ಚಿದಾನಂದ ನಾಯಕ್, ಜಯಪ್ರಕಾಶ್ ಶ್ರೀನಿಧಿ, ಸುಧೀರ್ ವನಸುಮ, ಮಲ್ಲೇಶ್ ಕುಂದರ್, ರಾಜೇಶ್ ಮುಖಾರಿ, ಹರೀಶ್ ನಾಯಕ್ ನಟ್ಟಿಬೈಲು, ವಸುಧಾ ಹರೀಶ ಉಪಾಧ್ಯಾಯ, ಜಯಂತ ಪೊರೋಳಿ, ಶಿವಪ್ರಸಾದ್ ಹರಿನಗರ, ವಿಶ್ವನಾಥ ಶೆಟ್ಟಿ ಕಂಗ್ವೆ, ವಿಜಯಕುಮಾರ್ ಕಲ್ಲಳಿಕೆ, ಜೀವನ್, ನವೀನ್ ಪದೆಬರಿ ಮತ್ತಿತರರು ಉಪಸ್ಥಿತರಿದ್ದರು.