ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ರಜತ ಸಂಭ್ರಮ

0

ಚರ್ಚ್ ಉತ್ಸವ ದೇವರ, ಮನುಷ್ಯನ ನಡುವಿನ ಸೇತುಬಂಧ – ಬಿಷಪ್ ಸಲ್ದಾನ್ಹಾ

ಪುತ್ತೂರು: ಪ್ರಭು ಯೇಸುಕ್ರಿಸ್ತರು ಭೋದಿಸಿದಂತೆ ಮಾನವ ತನ್ನ ಜೀವನದುದ್ದಕ್ಕೂ ಪರಸ್ಪರರನ್ನು ಪ್ರೀತಿಯಿಂದ ಕಾಣಬೇಕು, ಮಾನವನ ಅಗತ್ಯತೆಗೆ ಸ್ಪಂದಿಸುವವನಾಗಬೇಕು, ಯಾರಾದರೂ ಕೋಪದಲ್ಲಿದ್ದರೆ ಅವರನ್ನು ರಾಜಿ ಸಂಧಾನದ ಮೂಲಕ ಸರಿಪಡಿಸಿಕೊಳ್ಳಬೇಕು, ನಮ್ಮೊಳಗೆ ಹಗೆತನ ಬೆರೆತರೆ ಕ್ಷಮೆಯನ್ನು ಮೈಗೂಡಿಸಿಕೊಳ್ಳಬೇಕು. ಇದುವೇ ಚರ್ಚ್ ಉತ್ಸವದ ಸಂಕೇತವಾಗಿದೆ. ಮಾತ್ರವಲ್ಲ ದೇವರ ಮತ್ತು ಮನುಷ್ಯನ ನಡುವಿನ ಸೇತುಬಂಧವಾಗಿ ಪರಿಣಮಿಸಿದೆ ಎಂದು ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಹೇಳಿದರು.


ಏ.1ರಂದು ಸಂಜೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಗೊಳಪಟ್ಟ ಮರೀಲು ಹೊರ ವಲಯದಲ್ಲಿನ ಸೆಕ್ರೇಡ್ ಹಾರ್ಟ್ ಆಫ್ ಜೀಸಸ್ ಚರ್ಚ್ ಇದರ ರಜತ ಸಂಭ್ರಮದ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ರೈಸ್ತ ಪವಿತ್ರ ಸಭೆಯಲ್ಲಿ ಬದುಕುತ್ತಿರುವ ನಾವು ಸಮುದಾಯದಲ್ಲಿ ಮಾಡುವ ಉತ್ತಮ ಕೆಲಸ ಕಾರ್ಯವು ಬೆಲೆ ಬಾಳುವಂತದ್ದಾಗಿದ್ದು ದೇವರಿಗೆ ಹತ್ತಿರವಾಗುವಂತಿರಬೇಕು. ಮರೀಲು ಚರ್ಚ್ ಎಂಬ ಪುಟ್ಟ ಚರ್ಚ್‌ನಲ್ಲಿ ಯೋಜನೆಯನ್ನು ಹೇಗೆ ಕಾರ್ಯಗತ ಮಾಡುತ್ತಾರೆ ಎಂಬ ಚಿಂತನೆ ನನಗಿತ್ತು. ಆದರೆ ಚರ್ಚ್ ವ್ಯಾಪ್ತಿಯಲ್ಲಿನ ಭಕ್ತರು ಚರ್ಚ್ ಯೋಜನೆಗೆ ಸಕರಾತ್ಮಕವಾಗಿ ಸ್ಪಂದಿಸಿ ಪ್ರೀತಿಯಿಂದ ಹಾಗೂ ಉದಾರ ಮನೋಭಾವನೆಯಿಂದ ಸ್ಪಂದಿಸಿರುವುದು ಶ್ಲಾಘನೀಯ ಎಂದ ಅವರು, ಯಾವುದೇ ಚರ್ಚ್ ಅಭಿವೃದ್ಧಿಗೆ ಚರ್ಚ್ ಅನ್ನು ಜೀವಾಳವಾಗಿ ಉಳಿಸುವ ಸ್ಮರಣೆ, ತಪ್ಪು ಮಾಡಿದಾಗ ಕ್ಷಮಿಸುವ ಸಂತಾಪದ ಗುಣ, ಪರಸ್ಪರ ಕೋಪದಲ್ಲಿರುವವರನ್ನು ರಾಜಿ ಸಂಧಾನ ಮಾಡುವುದು, ಒಳ್ಳೆಯ ಜೀವನ ನಡೆಸುವ ಸನ್ಮಾರ್ಗವನ್ನು ಕಲ್ಪಿಸುವುದು, ಕೊನೆಗೆ ಎಲ್ಲರೂ ಸೇರಿಕೊಂಡು ಸಂಭ್ರಮವನ್ನು ಆಚರಿಸುವುದು ಮಹೋತ್ಸವ ಉದ್ಧೇಶವಾಗಿದೆ ಎಂದು ಹೇಳಿದರು.


ಒಳ್ಳೆಯ ಮನಸ್ಸು, ತ್ಯಾಗ, ಪ್ರೀತಿಯಿದ್ದಾಗ ಪ್ರೀತಿಯ ಸಮುದಾಯ ಕಟ್ಟಲು ಸಾಧ್ಯವಾಗುತ್ತದೆ-ವಂ|ಲಾರೆನ್ಸ್:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಹಾಗೂ ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಚರ್ಚ್ ನೂತನ ಧರ್ಮಗುರು ವಂ|ನೀಲೇಶ್‌ರವರು ಕೇವಲ ಐದು ತಿಂಗಳಿನಲ್ಲಿ ಅಭೂತಪೂರ್ವ ಕಾರ್ಯ ಮಾಡಿದ್ದಾರೆ, ಅವರಿಗೆ ಐದು ವರ್ಷ ಕೊಟ್ಟರೆ ಏನನ್ನು ಮಾಡಬಹುದು. ಚರ್ಚ್ ಅಭಿವೃದ್ಧಿ ನಿಟ್ಟಿನಲ್ಲಿ ಒಳ್ಳೆಯ ಮನಸ್ಸು, ತ್ಯಾಗ, ಪ್ರೀತಿ ಬಹಳ ಮುಖ್ಯವಾಗುತ್ತದೆ ಮಾತ್ರವಲ್ಲ ಅಲ್ಲಿ ಪ್ರೀತಿಯ ಸಮುದಾಯ ಕಟ್ಟಲು ಸಾಧ್ಯವಾಗುತ್ತದೆ ಎಂಬುದನ್ನು ಇಲ್ಲಿ ತೋರಿಸಿಕೊಟ್ಟೀದ್ದೀರಿ ಎಂದರು.


ಅಶೋಕ್ ರೈ ನಿಮ್ಮ ಮನೆ ಮಗ.ನಿಮ್ಮ ಸೇವಕ-ಅಶೋಕ್ ರೈ:
ರೂ.5000ಕ್ಕೂ ಮಿಕ್ಕಿ ದೇಣಿಗೆ ನೀಡಿದ ಚರ್ಚ್ ವ್ಯಾಪ್ತಿಯ ಹಾಗೂ ಚರ್ಚ್ ಹೊರ ವ್ಯಾಪ್ತಿಯ ದಾನಿಗಳಿಗೆ ಶಾಲು ಹೊದಿಸಿ ಗೌರವಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈರವರು, ಕ್ರೈಸ್ತ ಸಮಾಜ ಎನ್ನುವುದು ಅದು ಪ್ರೀತಿಯ ಸಮಾಜ. ಸೇವಾ ಮನೋಭಾವವುಳ್ಳ ಸಮಾಜ. ಆರೋಗ್ಯ ಕ್ಷೇತ್ರವಿರಲಿ, ಶೈಕ್ಷಣಿಕ ಕ್ಷೇತ್ರವಿರಲಿ, ಸಾಮಾಜಿಕ ಕ್ಷೇತ್ರವಿರಲಿ ಎಲ್ಲದರಲ್ಲೂ ಮುಂಚೂಣಿಯಲ್ಲಿರುವುದು ಕ್ರಿಶ್ಚಿಯನ್ ಸಮಾಜ. ಪರರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಆ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗುವುದು ಕ್ರೈಸ್ತ ಸಮಾಜದ ಹೆಗ್ಗಳಿಕೆ. ಅಶೋಕ್ ರೈ ನಿಮ್ಮ ಮನೆ ಮಗ. ನಿಮ್ಮ ಸೇವಕ. ನಾನು ತಪ್ಪು ಮಾಡಿದ್ರೆ ಹೇಳಿ, ಸರಿಪಡಿಸೋಣ. ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದರು.


ಸೇವಾ ಮನೋಭಾವದಿಂದ ಕಾರ್ಯ ಮಾಡಿದಾಗ ಕ್ಷೇತ್ರ ಅಭಿವೃದ್ಧಿ-ವಂ|ರೊನಾಲ್ಡ್ ಡಿ’ಸೋಜ:
ಚರ್ಚ್ ಸ್ಥಾಪಕ ಧರ್ಮಗುರು ವಂ|ರೊನಾಲ್ಡ್ ಡಿ’ಸೋಜ ಮಾತನಾಡಿ, ಚರ್ಚ್ ವ್ಯಾಪ್ತಿಯ ಪ್ರತಿ ಕುಟುಂಬದವರ ಸೇವೆಯ, ತ್ಯಾಗದ, ಪ್ರೀತಿಯ ಫಲವಾಗಿ ಇಂದು ಈ ಚರ್ಚ್ ರಜತ ಸಂಭ್ರಮವನ್ನು ಆಚರಿಸುತ್ತಿರುವುದು ಸಂತೋಷ ತಂದಿದೆ. ಭಕ್ತರನ್ನು ಒಗ್ಗೂಡಿಸಿಕೊಂಡು ಸೇವಾ ಮನೋಭಾವದಿಂದ ಕಾರ್ಯವನ್ನು ಮಾಡಿದಾಗ ಆ ಕ್ಷೇತ್ರ ಅಭಿವೃದ್ಧಿಗೊಳ್ಳುವುದು ಎಂದರು.


70ಕ್ಕೂ ಮಿಕ್ಕಿ ಧರ್ಮಗುರುಗಳು:
ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಚರ್ಚ್ ಸ್ಥಾಪಕ ಧರ್ಮಗುರು ವಂ|ರೊನಾಲ್ಡ್ ಡಿ’ಸೋಜ, ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ವಂ|ಪೌಲ್ ಡಿ’ಸೋಜ, ವಂ|ಆಂಟನಿ ಪ್ರಕಾಶ್ ಮೊಂತೇರೊ, ವಂ|ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ, ವಂ|ವಲೇರಿಯನ್ ಫ್ರ್ಯಾಂಕ್, ಹಾಗೂ ಧರ್ಮಗುರುಗಳಾದ ವಂ|ವಲೇರಿಯನ್ ಡಿ’ಸೋಜ, ವಂ|ಅಬೆಲ್ ಲೋಬೊ, ವಂ|ವಿಜಯ್ ಲೋಬೊ, ವಂ|ರೂಪೇಶ್ ತಾವ್ರೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಲ್ಯಾರಿ ಪಿಂಟೊ, ವಂ|ಸ್ಟ್ಯಾನಿ ಪಿಂಟೊ, ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ವಂ|ಸಂತೋಷ್ ಡಿ’ಸೋಜ, ವಂ|ಪ್ರವೀಣ್ ಡಿ’ಸೋಜ, ವಂ|ಪ್ರಶಾಂತ್ ಫೆರ್ನಾಂಡೀಸ್, ವಂ|ಬಾಲ್ತಜಾರ್ ಪಿಂಟೊ, ವಂ|ನೆಲ್ಸನ್ ಡಿ’ಅಲ್ಮೇಡ, ವಂ|ಜೇಸನ್ ಲೋಬೊ, ವಂ|ರೋಶನ್ ಡಿ’ಕುನ್ಹಾ, ವಂ|ಫ್ರೆಡರಿಕ್ ಮಸ್ಕರೇನ್ಹಸ್, ವಂ|ಜೋಸೆಫ್ ಮೊಂತೇರೊ, ವಂ|ವಿನ್ಸೆಂಟ್ ತೋರಸ್, ವಂ|ಟೋನಿ ಡಿ’ಅಲ್ಮೇಡ, ವಂ|ಜೋನ್ ಪ್ರಕಾಶ್ ಡಿ’ಅಲ್ಮೇಡ, ವಂ|ಲಿಯೋ ಲೋಬೊ, ವಂ|ಪೀಟರ್ ಗೊನ್ಸಾಲ್ವಿಸ್ ಹೀಗೆ ಸುಮಾರು 70ಕ್ಕೂ ಮಿಕ್ಕಿ ಧರ್ಮಗುರುಗಳು ರಜತ ಸಂಭ್ರಮದ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.


ಗೌರವಾರ್ಪಣೆ:
ಚರ್ಚ್ ವ್ಯಾಪ್ತಿಯಲ್ಲಿ ಕುಟುಂಬ ಹೊಂದಿದ್ದು ಪ್ರಸ್ತುತ ವಿವಿಧ ಚರ್ಚ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳಾದ ವಂ|ಅವಿಲ್ ಡಿ’ಕುನ್ಹಾ, ವಂ|ಕ್ಲೇವನ್ ಗೋಮ್ಸ್, ವಂ|ಐವನ್ ಅಶ್ವಿನಿ ಡಿ’ಸೋಜ, ವಂ|ಐವನ್ ಮೊಂತೇರೊ, ವಂ|ಜೇಸನ್ ಗ್ಲೆನ್ ಪಾಯಿಸ್, ವಂ|ಜೋಸೆಫ್ ಮೊಂತೇರೊ, ವಂ|ನೆಲ್ಸನ್ ಡಿ’ಅಲ್ಮೇಡ, ವಂ|ಪ್ರವೀಣ್ ಮೊರಾಸ್, ವಂ|ಟೋನಿ ಡಿ’ಅಲ್ಮೇಡ, ವಂ|ವಿಕ್ಟರ್ ಪ್ರಸನ್ನ ಮಾರ್ಟಿಸ್, ವಂ|ವಿನ್ಸೆಂಟ್ ತೋರಸ್, ಬ್ರ|ಅಕ್ವಿನ್ ಡಿ’ಸೋಜ, ಬ್ರ|ಅವಿತ್ ಪಾಯಿಸ್, ಬ್ರ|ಡೊಮಿನಿಕ್ ನೊರೋನ್ಹಾ, ಬ್ರ|ವಿಲ್ಫ್ರೆಡ್ ನೊರೋನ್ಹಾ, ಧರ್ಮಭಗಿನಿಯರಾದ ಸಿಸ್ಟರ್ ಬೆನೆಡಿಕ್ಟ, ಸಿಸ್ಟರ್ ಸಿಸಿಲಿಯ ಡಿ’ಸೋಜ, ಸಿಸ್ಟರ್ ಸೆಲಿನ್ ಲೂವಿಸ್, ಸಿಸ್ಟರ್ ಕ್ಲಾರಾ ಡಿ’ಅಲ್ಮೇಡ, ಸಿಸ್ಟರ್ ಸಿಂತಿಯಾ ಡಿ’ಸೋಜ, ಸಿಸ್ಟರ್ ಡೈನಾ ಜಾನೆಟ್ ಪಾಯಿಸ್, ಸಿಸ್ಟರ್ ದೀಪಿಕಾ ಸೆರಾವೋ, ಸಿಸ್ಟರ್ ಫ್ಲಾವಿಯ ಪಾಯಿಸ್, ಸಿಸ್ಟರ್ ಲೀನಾ ಸುವಾರಿಸ್, ಸಿಸ್ಟರ್ ಲೀಶಾ ಪಿರೇರಾ, ಸಿಸ್ಟರ್ ಲೋನಾ ಸುವಾರಿಸ್, ಸಿಸ್ಟರ್ ಲೊರಿನಾ ಸುವಾರಿಸ್, ಸಿಸ್ಟರ್ ಎಂ.ಪ್ರತೀಕ್ಷಾ ತೋರಸ್, ಸಿಸ್ಟರ್ ಮರಿಯ ಜ್ಯೋಸ್ನಾ ಕುಟಿನ್ಹಾ, ಸಿಸ್ಟರ್ ಮೇರಿ ರೀನಾ ಜ್ಯುಲಿಯೆಟ್ ತೋರಸ್, ಸಿಸ್ಟರ್ ಮೀರಾ ಮಾರ್ಟಿಸ್, ಸಿಸ್ಟರ್ ನತಾಲಿಯಾ ಡಿ’ಸೋಜ, ಪ್ರಮೀಳಾ ಡಿ’ಅಲ್ಮೇಡ, ಸಿಸ್ಟರ್ ಪ್ರಿಯಾ ತೋರಸ್, ಸಿಸ್ಟರ್ ರುಫಿನಾ ಡಿ’ಸೋಜ, ಸಿಸ್ಟರ್ ವೆರೋನಾ ಲೂವಿಸ್‌ರವರುಗಳಿಗೆ ಯೇಸುಕ್ರಿಸ್ತರ ಪ್ರತಿಮೆ ನೀಡಿ ಗೌರವಿಸಲಾಯಿತು.


ಸ್ಮರಣಾ ಸಂಚಿಕೆ ಬಿಡುಗಡೆ:
ಚರ್ಚ್ ರಜತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಚರ್ಚ್ ಸ್ಮರಣಾ ಸಂಚಿಕೆಯನ್ನು ಹೊರ ತಂದಿದ್ದು ಈ ಸ್ಮರಣಾ ಸಂಚಿಕೆಯನ್ನು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಬಿಡುಗಡೆಗೊಳಿಸಿದರು. ಮಾತ್ರವಲ್ಲ ಈ ಸ್ಮರಣಾ ಸಂಚಿಕೆಗೆ ಸೂಕ್ತ ಹೆಸರನ್ನು ನೀಡಿದ ಪ್ರೇಮ್ ನೊರೋನ್ಹಾರವರನ್ನು ಅಭಿನಂದಿಸಲಾಯಿತು.


ಯೇಸುಕ್ರಿಸ್ತರ ಪವಿತ್ರ ಹೃದಯ ಪ್ರತಿಮೆ ಆಶೀರ್ವಚನ:
ಚರ್ಚ್ ರಜತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಚರ್ಚ್ ವ್ಯಾಪ್ತಿಯಲ್ಲಿನ ಸುಮಾರು 272 ಕುಟುಂಬಕ್ಕೆ ಯೇಸುಕ್ರಿಸ್ತರ ಪವಿತ್ರ ಹೃದಯದ ಪ್ರತಿಮೆಯನ್ನು ಹಸ್ತಾಂತರಿಸುವುದೆಂದು ನಿರ್ಧರಿಸಲಾಗಿದ್ದು, ಈ ಪ್ರತಿಮೆಯನ್ನು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೊಳಿಸಿದರು.


ಅತಿ ಹೆಚ್ಚು ದೇಣಿಗೆ ನೀಡಿದವರಿಗೆ ಗುರುತಿಸುವಿಕೆ:
ಚರ್ಚ್ ಅಭಿವೃದ್ಧಿ ನಿಟ್ಟಿನಲ್ಲಿ ರೂ.50 ಸಾವಿರಕ್ಕೂ ಮಿಕ್ಕಿ ದೇಣಿಗೆ ನೀಡಿದ ದಿ.ಕ್ಲಿಫರ್ಡ್ ಮೈಕಲ್ ಗೋಮ್ಸ್‌ರವರ ಸ್ಮರಣಾರ್ಥ ಅವರ ಪತ್ನಿ ಸಿಸಿಲಿಯಾ ಗೋಮ್ಸ್‌ರವರಿಗೆ(ಚರ್ಚ್ ಬಲಿಪೂಜೆಯ ಪವಿತ್ರ ವೇದಿಕೆಯ ನಿರ್ಮಾಣ), ಮಾಯಿದೆ ದೇವುಸ್ ಚರ್ಚ್ ಪರವಾಗಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಅಲ್ಲದೆ ಸೈಂಟ್ ಪೆದ್ರು ವಾಳೆಯ ವಿಕ್ಟರ್ ಮೊಂತೇರೊ, ಹೆನ್ರಿ ಡಿ’ಸೋಜ ಹಾಗೂ ಅಲೆಕ್ಸ್ ಬೆನೆಡಿಕ್ಟ ರೊಡ್ರಿಗಸ್, ಸೈಂಟ್ ಲಾರೆನ್ಸ್ ವಾಳೆಯ ಕ್ಲ್ಯಾರೆನ್ಸ್ ಡಿ’ಅಲ್ಮೇಡ, ಸೈಂಟ್ ಜುಜೆ ವಾಳೆಯ ಸಂತೋಷ ಡಿ’ಅಲ್ಮೇಡ, ಜ್ಯೋತಿ ಮೌರಿಸ್ ಕುಟಿನ್ಹಾ, ಸೈಂಟ್ ಅಂತೋನಿ ವಾಳೆಯ ಓಸ್ವಾಲ್ಡ್ ಲೂವಿಸ್, ಚಾಲ್ಸ್೯ ಪಾಯಿಸ್, ಲಿಯೋ ಕ್ರಾಸ್ತಾ, ಲ್ಯಾನ್ಸಿ ವಿನೀತಾ ಲೂವಿಸ್, ಸೈಂಟ್ ತೋಮಸ್ ವಾಳೆಯ ಜೋಯೆಲ್ ವಿಸಿಯಾ ರೊಡ್ರಿಗಸ್, ಆಲಿಸ್ ರೊಡ್ರಿಗಸ್, ಸೈಂಟ್ ಪಾವ್ಲ್ ವಾಳೆಯ ಐಡಾ ಕುಟಿನ್ಹಾ, ಸುನಿಲ್ ಮಿರಾಂದಾ, ರೋಸ್‌ಮೇರಿ ಕುಟಿನ್ಹಾ, ಸೈಂಟ್ ಫ್ರಾನ್ಸಿಸ್ ಝೇವಿಯರ್ ವಾಳೆಯ ನೋರ್ಬರ್ಟ್ ಎವ್ಲಿನ್ ಸೆರಾವೋ, ಸೈಂಟ್ ವೆಲಂಕಣಿ ವಾಳೆಯ ರೋಬರ್ಡ್ ರಿಚರ್ಡ್ ಡಿ’ಸೋಜ, ಸೈಂಟ್ ಪೆದ್ರು ವಾಳೆಯ ಎಡ್ವಿನ್ ಡಿ’ಸೋಜ, ಪಿಯಾದ್ ಮಾರ್ಟಿಸ್, ಕ್ಲೆಮೆಂಟ್ ಮಾರ್ಟಿಸ್, ಸೈಂಟ್ ಲಾರೆನ್ಸ್ ವಾಳೆಯ ಸಂತೋಷ್ ಡಿ’ಸೋಜ, ಸೂರಜ್ ರೆಬೆಲ್ಲೋ, ನ್ಯಾನ್ಸಿ ಮಾಡ್ತಾ, ಯೇಸು ಕ್ರಿಸ್ತರ ಪವಿತ್ರ ಹೃದಯ ವಾಳೆಯ ಚಾಲ್ಸ್೯ ಕುವೆಲ್ಲೊ ಹಾಗೂ ಲ್ಯಾನ್ಸಿ ರೊಡ್ರಿಗಸ್ ಪುತ್ತೂರು ರವರುಗಳನ್ನು ಅಭಿನಂದಿಸಲಾಯಿತು.


ಗುರಿಕಾರರಿಗೆ ಅಭಿನಂದನೆ:
ಚರ್ಚ್ ವ್ಯಾಪ್ತಿಯ 11 ವಾಳೆಗಳಲ್ಲಿ ಸೇವೆ ಸಲ್ಲಿಸಿದ ಗುರಿಕಾರರಾದ ಸೈಂಟ್ ಲಾರೆನ್ಸ್ ವಾಳೆಯ ಹೆರಾಲ್ಡ್ ಮಸ್ಕರೇನ್ಹಸ್, ರೋಬರ್ಟ್ ಮೊಂತೇರೊ, ಮೀರಾ ಟೆಲ್ಲಿಸ್, ಡೇವಿಡ್ ಜೋನ್ ಸೆರಾವೋ, ಫ್ಲೋರಿನ್ ಡಾಯಸ್, ದಿ.ಚಾಲ್ಸ್೯ ಡಿ’ಸೋಜರವರ ಪರವಾಗಿ ಅವರ ಮನೆಯವರಿಗೆ, ಸೈಂಟ್ ಜೋಸೆಫ್ ವಾಳೆಯ ದಿ.ಜೋಸೆಫ್ ಡಿ’ಅಲ್ಮೇಡರವರ ಪರವಾಗಿ ಅವರ ಮನೆಯವರಿಗೆ, ಇಗ್ನೇಷಿಯಸ್ ಡಿ’ಕುನ್ಹಾ, ಮೌರಿಸ್ ಕುಟಿನ್ಹಾ, ಫ್ರಾನ್ಸಿಸ್ ಸೆರಾವೋ, ಪ್ರಮೀಳಾ ಸೆರಾವೋ, ಸೈಂಟ್ ಆಂಟನಿ ವಾಳೆಯ ಜೋಕಿಂ ಪಾಯಿಸ್, ಜೋಸೆಫ್ ಪಾಯಿಸ್, ತೋಮಸ್ ಕುಟಿನ್ಹಾ, ಗಿಲ್ಬರ್ಟ್ ಡಿ’ಕುನ್ಹಾ, ಹಿಲಾರಿ ಪಾಯಿಸ್, ಸರಿತಾ ರೊಡ್ರಿಗಸ್, ಸೈಂಟ್ ಪೀಟರ್ ವಾಳೆಯ ಲಿಯೋ ಮಾರ್ಟಿಸ್, ಜೋನ್ ಲೂವಿಸ್, ಎಡ್ವಿನ್ ಡಿ’ಸೋಜ, ವೆಲಂಕಣಿ ವಾಳೆಯ ಡೆನ್ನಿಸ್ ಸೆರಾವೋ, ವಲೇರಿಯನ್ ತೋರಸ್, ಶರಲ್ ಶ್ವೇತ ವೇಗಸ್, ಸೈಂಟ್ ಫ್ರಾನ್ಸಿಸ್ ಝೇವಿಯರ್ ವಾಳೆಯ ಲಾರೆನ್ಸ್ ಡಿ’ಸೋಜ, ಡೆನ್ನಿಸ್ ಪಿರೇರಾ, ಬ್ಯಾಪ್ಟಿಸ್ಟ್ ಡಿ’ಸೋಜ, ರೋಬರ್ಟ್ ಡಿ’ಸೋಜ, ಸಾಲ್ವದೊರ್ ಡಿ’ಕುನ್ಹಾ, ಜೋನ್ ಮಸ್ಕರೇನ್ಹಸ್, ಸೈಂಟ್ ಜಾಕೋಬ್ ವಾಳೆಯ ಆದಂ ಲಿಯೋ ಡಿ’ಸೋಜ, ಜೋನ್ ಮಸ್ಕರೇನ್ಹಸ್, ಹೆನ್ರಿ ಡಿ’ಸೋಜ, ರೋಬರ್ಟ್ ಡಿ’ಸೋಜ, ಸೈಂಟ್ ಪಾವ್ಲ್ ವಾಳೆಯ ಮೌರಿಸ್ ಡಿ’ಅಲ್ಮೇಡ, ಜೋಸೆಫ್ ಕುಟಿನ್ಹಾ, ಕಾರ್ಮಿನ್ ಅಂದ್ರಾದೆ, ಸೈಂಟ್ ತೆರೆಸಾ ವಾಳೆಯ ದಿ.ಮೆಲ್ವಿನ್ ಡಿ’ಸೋಜರವರ ಪರವಾಗಿ ಅವರ ಮನೆಯವರಿಗೆ, ಲೀನಾ ಮೊಂತೇರೊ, ಸೆಲಿನ್ ರೆಬೆಲ್ಲೋ, ಸೆಲಿನ್ ಪಿಂಟೊ, ಸೈಂಟ್ ತೋಮಸ್ ವಾಳೆಯ ಚಾಲ್ಸ್೯ ಪಸನ್ನ, ಡೇವಿಡ್ ಪಿರೇರಾ, ಜೋನ್ ಸಿರಿಲ್ ರೊಡ್ರಿಗಸ್, ಅನಿಲ್ ಪಸನ್ನ, ಸೆಕ್ರೇಡ್ ಹಾರ್ಟ್ ವಾಳೆಯ ದಿ.ಎಡ್ವರ್ಡ್ ಮಸ್ಕರೇನ್ಹಸ್‌ರವರ ಪರವಾಗಿ ಅವರ ಮನೆಯವರಿಗೆ, ಎಡೋಲ್ಫ್ ಫೆರ್ನಾಂಡೀಸ್, ಆಲ್ಬರ್ಟ್ ಡಿ’ಸೋಜ, ಹಿಲಾರಿ ಲೋಬೊರವರುಗಳಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.


ಬಿಷಪ್‌ದ್ವಯರಿಗೆ ಪ್ರವೇಶ ದ್ವಾರದಲ್ಲಿ ಸ್ವಾಗತ:
ದಿವ್ಯ ಬಲಿಪೂಜೆ ಆರಂಭಕ್ಕೆ ಮುನ್ನ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ, ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ರವರುಗಳನ್ನು ಚರ್ಚ್ ಪ್ರವೇಶ ದ್ವಾರದಲ್ಲಿ ಚರ್ಚ್ ಪ್ರಧಾನ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಪ್ರೊ.ಎಡ್ವಿನ್ ಡಿ’ಸೋಜರವರು ಹೂಗುಚ್ಛ ನೀಡುವುದರೊಂದಿಗೆ ಸ್ವಾಗತಿಸಲಾಯಿತು. ಬಳಿಕ ಪುಟಾಣಿ ಮಕ್ಕಳು ದಾರಿಯುದ್ದಕ್ಕೂ ಪುಷ್ಪಾರ್ಚನೆಗೈಯುತ್ತಾ, ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಅಭೂತಪೂರ್ವವಾಗಿ ಕರೆ ತರಲಾಯಿತು.


ಅಭಿನಂದನೆ:
ಚರ್ಚ್‌ನಲ್ಲಿ ನಡೆಯುವ ಪ್ರತಿಯೊಂದು ಉತ್ಸವಕ್ಕೂ ಪವಿತ್ರ ವೇದಿಕೆಯನ್ನು ಸಜ್ಜುಗೊಳಿಸುವ ಕಾಯಕವನ್ನು ನಿರಂತರ ಮಾಡುತ್ತಾ ಬಂದಿರುವ ಬೆಥನಿ ಧರ್ಮಭಗಿನಿಯರ ಪರವಾಗಿ ಬೆಥನಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಪ್ರಶಾಂತಿ, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ಗೆ ಆಗಮಿಸಿ ಕೇವಲ ಐದೇ ತಿಂಗಳಲ್ಲಿ ಚರ್ಚ್‌ನ ರಜತ ಸಂಭ್ರಮವನ್ನು ಆಚರಿಸಲು ಕಾರಣಕರ್ತರಾದ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಚರ್ಚ್‌ನಲ್ಲಿ ಕಳೆದ ಆರು ತಿಂಗಳಿನಿಂದ ದಿಯಾಕೊನ್ ಆಗಿ ಸೇವೆ ನೀಡುತ್ತಿದ್ದು, ಏ.2ರಂದು ನಿರ್ಗಮಿಸುತ್ತಿರುವ ಬ್ರ|ಸ್ಟ್ಯಾನೀಸ್ ಲೋಪೇಸ್‌ರವರನ್ನು ಗುರುತಿಸಿ ಅಭಿನಂದಿಸಲಾಯಿತು.


ಚರ್ಚ್ ವ್ಯಾಪ್ತಿಯ ಮಕ್ಕಳು ಸ್ವಾಗತ ನೃತ್ಯ ಮಾಡುವುದರೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರೂ.5ಸಾವಿರಕ್ಕೂ ಮೇಲ್ಪಟ್ಟು ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು. ಚರ್ಚ್ ಪ್ರಧಾನ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು ಸ್ವಾಗತಿಸಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್ ವಂದಿಸಿದರು. ಪಾಲನಾ ಸಮಿತಿ ಕಾರ್ಯದರ್ಶಿ ಪ್ರೊ.ಎಡ್ವಿನ್ ಡಿ’ಸೋಜರವರು ಚರ್ಚ್ ವರದಿಯನ್ನು ಮಂಡಿಸಿದರು. ಶ್ರೀಮತಿ ಗ್ರೆಟ್ಟ ಪಿರೇರಾ, ಶ್ರೀಮತಿ ಜ್ಯುಲಿಯಾನಾ ಮಾರ್ಟಿಸ್, ಶರಲ್ ಶ್ವೇತ ವೇಗಸ್, ಶಾಂತಿ ರೆಬೆಲ್ಲೋ, ಅನಿಲ್ ಪಾಯಿಸ್‌ರವರು ಸನ್ಮಾನಿತರ, ದಾನಿಗಳ, ಅತಿಥಿಗಳ ಪರಿಚಯ ಮಾಡಿದರು. ಬ್ರದರ್ ಅವಿತ್ ಪಾಯಿಸ್ ಹಾಗೂ ಶ್ರೀಮತಿ ಫ್ಲೋರಿನ್ ಡಾಯಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಮಿಡಿ ಕಂಪೆನಿ ಗ್ರೂಪ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


ರಜತ ಸಂಭ್ರಮದ ಕಳೆ ಹೆಚ್ಚಿಸಿದೆ..
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ವಂ|ನೀಲೇಶ್‌ರವರು ಚರ್ಚ್ ಬಾಂಧವರ ಸಹಕಾರದೊಂದಿಗೆ ಚರ್ಚ್‌ನ ರಜತ ಸಂಭ್ರಮದ ಕಳೆಯನ್ನು ಹೆಚ್ಚಿಸಿದ್ದಾರೆ. ಬದುಕು ನಿಂತ ನೀರಲ್ಲ, ಅದು ಸದಾ ಹರಿಯಬೇಕು ಎಂಬಂತೆ ಚರ್ಚ್‌ನ ಎಲ್ಲಾ ಬಾಂಧವರೊಡನೆ ಕೈಜೋಡಿಸುವ ಮೂಲಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ವಿವಿಧ ಕುಟುಂಬದಲ್ಲಿರುವ ನಾವು ಚರ್ಚ್ ಗೆ ಬಂದಾಗ ನಾವೆಲ್ಲರೂ ಒಂದೇ ಕುಟುಂಬ ಎನ್ನುವುದನ್ನು ಮನಗಾಣಬೇಕಾಗಿದೆ.
-ಅತಿ.ವಂ.ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್, ಧರ್ಮಾಧ್ಯಕ್ಷರು, ಸೀರೊ ಮಲಂಕರ ಧರ್ಮಪ್ರಾಂತ್ಯ

ಸನ್ಮಾನ…
ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ, ಸೀರೊ ಮಲಂಕರ ಧರ್ಮಪ್ರಾಂತ್ಯದ ಬಿಷಪ್ ಅತಿ.ವಂ.ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಚರ್ಚ್ ಸ್ಥಾಪಕ ಧರ್ಮಗುರು ವಂ|ರೊನಾಲ್ಡ್ ಡಿ’ಸೋಜ, ಬಳಿಕ ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ವಂ|ಪಾವ್ಲ್ ಡಿ’ಸೋಜ, ವಂ|ಆಂಟನಿ ಪ್ರಕಾಶ್ ಮೊಂತೇರೊ, ವಂ|ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹೆರಾಲ್ಡ್ ಮಾಡ್ತಾ, ಡೇವಿಡ್ ಪಿರೇರಾ, ಲೀನಾ ಪಾಯಿಸ್, ಎಡ್ವಿನ್ ಡಿ’ಸೋಜ, ಗ್ರೆಟ್ಟ ಪಿರೇರಾ, ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಲ್ಯಾನ್ಸಿ ಲೂವಿಸ್, ಜೋನ್ ಮಸ್ಕರೇನ್ಹಸ್, ಎಡೋಲ್ಫ್ ಫೆರ್ನಾಂಡೀಸ್, ಮೌರಿಸ್ ಕುಟಿನ್ಹಾ, ಲಿಗೋರಿ ಸೆರಾವೋ, ನ್ಯಾನ್ಸಿ ಮಾಡ್ತಾ, ಎಡ್ವಿನ್ ಡಿ’ಸೋಜ, ಚರ್ಚ್‌ನಲ್ಲಿ ಕಳೆದ ಹಲವು ವರ್ಷಗಳಿಂದ ತೋಟದ ಕೆಲಸವನ್ನು ನಿಸ್ವಾರ್ಥದಿಂದ ಮಾಡಿಕೊಂಡು ಬಂದಿರುವ ಭವಾನಿ ರವರುಗಳನ್ನು ಸನ್ಮಾನಿಸಲಾಯಿತು.

ದಿವ್ಯ ಬಲಿಪೂಜೆಯಲ್ಲಿ 70ಕ್ಕೂ ಮಿಕ್ಕಿ ಧರ್ಮಗುರುಗಳು ಭಾಗಿ
ವಿವಿಧ ಚರ್ಚ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಧರ್ಮಗುರುಗಳಿಗೆ/ಧರ್ಮಭಗಿನಿಯರಿಗೆ ಗೌರವಾರ್ಪಣೆ
ಸ್ಮರಣಾ ಸಂಚಿಕೆ ಬಿಡುಗಡೆ
ಯೇಸುಕ್ರಿಸ್ತರ ಪವಿತ್ರ ಹೃದಯ ಪ್ರತಿಮೆ ಆಶೀರ್ವಚನ
ಅತಿ ಹೆಚ್ಚು ದೇಣಿಗೆ ನೀಡಿದವರಿಗೆ ಗುರುತಿಸುವಿಕೆ
ಗುರಿಕಾರರಿಗೆ ಅಭಿನಂದನೆ
ಬಿಷಪ್‌ದ್ವಯರಿಗೆ ಪ್ರವೇಶ ದ್ವಾರದಲ್ಲಿ ಸ್ವಾಗತ
ಸಿ|ಪ್ರಶಾಂತಿ, ವಂ|ಡೊನಾಲ್ಡ್ ನೀಲೇಶ್, ಬ್ರ|ಸ್ಟ್ಯಾನೀಸ್ ಲೋಫೇಶ್‌ರವರಿಗೆ ಅಭಿನಂದನೆ
ಭಕ್ತರಿಗೆ ಸಸ್ಯಹಾರ, ಮಾಂಸಹಾರ ಭೋಜನ

LEAVE A REPLY

Please enter your comment!
Please enter your name here