ಸುಧಾಕರ್ ದರ್ಬೆ ರೂಪಿಸಿದ ಮುಖಪುಟ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ – ಬಹುರೂಪಿ ಪ್ರಕಟಣೆಯ ‘ಕೆರೆ-ದಡ’ ಯಲ್ಲಿನ ಮುಖಪುಟ – ಎಲ್ಲಾ ಭಾಷೆಗಳನ್ನೊಳಗೊಂಡ ಮುಖಪುಟ ಸ್ಪರ್ಧೆಯಲ್ಲಿ ಪ್ರಥಮ

0

ಭಾರತದ ಎಲ್ಲಾ ಭಾಷೆಗಳನ್ನು ಒಳಗೊಂಡು ಜರುಗಿದ ಈ ಮುಖಪುಟ ಸ್ಪರ್ಧೆಯಲ್ಲಿ ಅನೇಕ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು.ಈ ಹಿಂದೆ ಬಹುರೂಪಿಯ ‘ದುಪ್ಪಟ್ಟು’ ‘ಛೂಮಂತ್ರಯ್ಯನ ಕಥೆಗಳು’ ಹಾಗೂ ‘ಅಕ್ಕಯ್’ ಕೃತಿಗಳು ರನ್ನರ್ ಅಪ್ ಆಗಿದ್ದವು.ಪತ್ರಿಕಾ ವಿನ್ಯಾಸಕಾರರಾದ ಸುಧಾಕರ ದರ್ಬೆ ಅವರು ಪುತ್ತೂರು ಮೂಲದವರು. ಅನೇಕ ಕೃತಿಗಳಿಗೆ ಇವರು ರಚಿಸಿರುವ ಮುಖಪುಟ ಹಾಗೂ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

ಬೆಂಗಳೂರು:‘ಬಹುರೂಪಿ’ ಪ್ರಕಟಿಸಿದ ‘ಕೆರೆ-ದಡ’ ಕೃತಿ ಪ್ರಕಾಶನ ರಂಗದ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.‘ಪಬ್ಲಿಷಿಂಗ್ ನೆಕ್ಸ್ಟ್’ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಹಿರಿಯ ಕಲಾವಿದ ಸುಧಾಕರ ದರ್ಬೆ ರೂಪಿಸಿದ ಮುಖಪುಟ ಮೊದಲ ಸ್ಥಾನ ಪಡೆದಿದೆ.ಪ್ರತೀ ವರ್ಷ ಪ್ರಕಾಶನ ರಂಗದ ವಿವಿಧ ವಿಭಾಗಗಳಲ್ಲಿ ‘ಪಬ್ಲಿಷಿಂಗ್ ನೆಕ್ಸ್ಟ್’ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದು ಇದೇ ಮೊದಲ ಬಾರಿಗೆ ಕನ್ನಡದ ಕೃತಿಯೊಂದು ತನ್ನ ಮುಖಪುಟ ವಿನ್ಯಾಸಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದೆ.
ಭಾರತದ ಎಲ್ಲಾ ಭಾಷೆಗಳನ್ನು ಒಳಗೊಂಡು ಜರುಗಿದ ಈ ಮುಖಪುಟ ಸ್ಪರ್ಧೆಯಲ್ಲಿ ಅನೇಕ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು.ಈ ಹಿಂದೆ ಬಹುರೂಪಿಯ ‘ದುಪ್ಪಟ್ಟು’ ‘ಛೂಮಂತ್ರಯ್ಯನ ಕಥೆಗಳು’ ಹಾಗೂ ‘ಅಕ್ಕಯ್’ ಕೃತಿಗಳು ರನ್ನರ್ ಅಪ್ ಆಗಿದ್ದವು.ಪತ್ರಿಕಾ ವಿನ್ಯಾಸಕಾರರಾದ ಸುಧಾಕರ ದರ್ಬೆ ಅವರು ಪುತ್ತೂರು ಮೂಲದವರು.ಅನೇಕ ಕೃತಿಗಳಿಗೆ ಇವರು ರಚಿಸಿರುವ ಮುಖಪುಟ ಹಾಗೂ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.
ಪುತ್ತೂರು ದರ್ಬೆ ಮೂಲದವರಾಗಿದ್ದು ಬೆಂಗಳೂರು ನಿವಾಸಿಯಾಗಿರುವ ಸುಧಾಕರ ದರ್ಬೆ ಅವರು ದಿ|ಕೆ.ಗೋಪಾಲ ಆಚಾರ್ಯ-ದಿ|ಮೀನಾಕ್ಷಿ ದಂಪತಿಯ ಮಗ. 1991ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಸಮೂಹದ ಕನ್ನಡಪ್ರಭ ದಿನಪತ್ರಿಕೆ ಬಳಗಕ್ಕೆ ಸೇರ್ಪಡೆಯಾಗಿ ಕಳೆದ 33 ವರ್ಷಗಳಿಂದ ಕಲಾವಿದನಾಗಿ, ಪ್ರಸ್ತುತ ಮುಖ್ಯ ಕಲಾವಿದನಾಗಿ ಕನ್ನಡಪ್ರಭದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡಪ್ರಭ ದಿನಪತ್ರಿಕೆ, ಪುರವಣಿಯಲ್ಲಿ ಸುದ್ದಿ, ಕಥೆ, ಕವನ, ವಿಶೇಷಾಂಕಗಳಿಗೆ ಹಲವಾರು ಸಂದರ್ಭಚಿತ್ರ ಮತ್ತು ವ್ಯಕ್ತಿ ಚಿತ್ರ, ವ್ಯಂಗ್ಯ ಚಿತ್ರಗಳ ಹಾಗೂ ವಿನ್ಯಾಸ ರಚನೆ, ಪತ್ರಿಕೆಯ ಅಂಕಣಗಳಿಗೆ ಹಾಗೂ ವಿಶೇಷ ಪುರವಣಿಗಳಲ್ಲಿ ಮುಖಪುಟ, ಸಂದರ್ಭ ಚಿತ್ರಗಳ ರಚನೆ. ವಿಶೇಷ ಸಂದರ್ಭಗಳಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟ ರಚನೆ.ಇಂಡಿಯನ್ ಎಕ್ಸ್‌ಪ್ರೆಸ್ ಪುರವಣಿ ಹಾಗೂ ಮುಂಬೈನಿಂದ ಪ್ರಕಟವಾಗುತ್ತಿದ್ದ ಇಂಗ್ಲಿಷ್ ಮಾಸಿಕ ಜೆಂಟ್ಸ್‌ಮನ್ ಪತ್ರಿಕೆಗಳಿಗೂ ಇಲಸ್ಟೇಷನ್ ರಚನೆ ಮಾಡಿರುವ ಇವರು ಕನ್ನಡದ ಹಲವಾರು ಶ್ರೇಷ್ಠ ಸಾಹಿತಿಗಳ ಸಾಹಿತ್ಯ ಕೃತಿಗಳಿಗೆ ಮುಖಪುಟ ಚಿತ್ರ ವಿನ್ಯಾಸ ರಚನೆ. ಅಲ್ಲದೆ ಹಲವಾರು ಖ್ಯಾತನಾಮ ಪ್ರಕಾಶನ ಸಂಸ್ಥೆಗಳ ಕನ್ನಡ, ಇಂಗ್ಲಿಷ್, ಸಂಸ್ಕೃತ ಸೇರಿದಂತೆ ಸಾವಿರಾರು ಸಾಹಿತ್ಯ ಕೃತಿಗಳಿಗೆ ಮುಖಪುಟ ರಚನೆ.ಕಲಾತ್ಮಕ ಹಾಗೂ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಶೀರ್ಷಿಕೆ ವಿನ್ಯಾಸ ಹಾಗೂ ಪ್ರಚಾರ ಕಲೆ ರಚನೆ. ಜನಪ್ರಿಯ ಟಿ.ವಿ. ಧಾರಾವಾಹಿಗಳಿಗೆ ಶೀರ್ಷಿಕೆ ವಿನ್ಯಾಸ ರಚನೆ ಮಾಡಿದ್ದಾರೆ. ಇವರಿಗೆ ಈಗಾಗಲೇ ಹಲವು ಪ್ರಶಸ್ತಿ, ಬಹುಮಾನಗಳು ಲಭಿಸಿವೆ.

LEAVE A REPLY

Please enter your comment!
Please enter your name here