ದೇಲಂಪಾಡಿ ತುಳುಕೂಟ ಸಮಿತಿ ಮೆಣಸಿನಕಾನ ವತಿಯಿಂದ “ತುಳು ಐಸಿರೊ” ಕಾರ್ಯಕ್ರಮ

0

ಪುತ್ತೂರು: ದೇಲಂಪಾಡಿ ಗ್ರಾಮದ ಮೆಣಸಿನಕಾನದ ಶ್ರೀ ಧೂಮಾವತಿ ಸಹ ಪರಿವಾರ ದೈವಸ್ಥಾನ ನೆಲ್ಲಿಂಜಗುತ್ತು ತರವಾಡು ಮನೆಯ ವಠಾರದಲ್ಲಿ “ತುಳುಕೂಟ ಸಮಿತಿ ಮೆಣಸಿನಕಾನ – ದೇಲಂಪಾಡಿ” ವತಿಯಿಂದ “ತುಳು ಐಸಿರೊ” ಕಾರ್ಯಕ್ರಮವು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿವಿಧ ಜಾನಪದ ಸಾಂಸ್ಕೃತಿಕ ಕ್ರೀಡಾಕೂಟಗಳೊಂದಿಗೆ ನಡೆಯಿತು.


ಶ್ರೀ ರವಿಕಿರಣ ಶೆಟ್ಟಿ ಬೆದ್ರಾಡಿ ದೀಪ ಬೆಳಗಿಸಿ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಆಟೋಟ ಸ್ಪರ್ಧೆಗಳನ್ನು ನಡೆಸಲು ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಕುಕ್ಕುಪುಣಿ ಮತ್ತು ಪ್ರಸಾದ್ ಯಾದವ್ ಚಿಮಿಣಿಗುಡ್ಡೆ ಇವರು ನಿರ್ಣಾಯಕರಾಗಿ ಸಹಕಾರ ನೀಡಿದರು.ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಪಂಚವಟಿ ಎಂಬ ತುಳು ಯಕ್ಷಗಾನ ತಾಳಮದ್ದಲೆ ಪ್ರಸಂಗ ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಸಿ ತುಳು ಭಾಷೆ, ಸಂಸ್ಕೃತಿ, ಆಚಾರ- ವಿಚಾರ ಉಳಿಸುವಲ್ಲಿ ಈ ತುಳುಕೂಟದ ಶ್ರಮ ಯಶಸ್ವಿಯಾಗಲಿ, ಇನ್ನಷ್ಟು ಪ್ರೋತ್ಸಾಹ ಸಿಗಲಿ ಎಂದರು. ತುಳುಕೂಟ ಮಹಿಳಾ ಸಮಿತಿಯ ಅಧ್ಯಕ್ಷೆ ಮಹಿತ ರೈ ಕಾರ್ಯಕ್ರಮಕ್ಕೆ ಶುಭಕೋರಿದರು.


ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಲಿಂಜಗುತ್ತು ಸದಾಶಿವ ರೈಯವರು ವಹಿಸಿದರು.ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಹೇಮನಾಥ ಶೆಟ್ಟ , ಕೃಷ್ಣ ಭಟ್ ಮುಂಡ್ಯ, ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ರವಿ ಮುಗೇರ , ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡಿನ ಮುಖೇಶ್ ,ಬನ್ನೂರು ಎ.ವಿ.ಜಿ. ಶಾಲೆಯ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ನಾರಾಯಣ ನ್ಯಾಕ್ ಊಜಂಪಾಡಿ,ನಾರಾಯಣ ರೈ ಕಟ್ಟೆ ಕುದ್ಕಾಡಿ, ಶಿವರಾಮ ಕಲ್ಲೂರಾಯ ಕಲ್ಲಡ್ಕ, ಸದಾಶಿವ ರೈ ಬೆಳ್ಳಿಪ್ಪಾಡಿ ಗುತ್ತು, ಸತ್ಯನಾರಾಯಣ ಮನೋಳಿತ್ತಾಯ ಎಂಕಣಮೂಲೆ, ಜಯಪ್ರಕಾಶ್ ರೈ ನೂಜಿಬೈಲು, ಗಿರೀಶ್ ರೈ ಮರಕ್ಕಡ, ದೇವದಾಸ್ ಶೆಟ್ಟಿ ಪೆರುವಾಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೃಷಿ ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡ ಪಕ್ಕೀರ ಅಂದಿತಿರಿಯನ್ ಮೆಣಸಿನಕಾನ, ಮಂಜಪ್ಪ ಪೂಜಾರಿ ಊಜಂಪಾಡಿ, ಕಿಟ್ಟಣ್ಣ ರೈ ಮೆಣಸಿನಕಾನ, ಶಾಂತಪ್ಪ ರೈ ಮುದಿಯಾರು, ನಾರಾಯಣ ನಾಯಕ್ ಮೆಣಸಿನಕಾನ, ಬಾಬು ಗೌಡ ಮೆಣಸಿನಕಾನ, ಗೋಪಾಲ ಮಣಿಯಾಣಿ ಊಜಂಪಾಡಿ, ಅಪ್ಪಯ ನಾಯ್ಕ ಶಾಂತಿಮಲೆ, ರೇವತಿ ವಾಲ್ತಾಜೆ, ಕುಂಞಣ್ಣ ರೈ ಬೆಳ್ಳಾರೆ, ವಿಶ್ವನಾಥ ರೈ ಊಜಂಪಾಡಿ, ವಸಂತ ರೈ ಶಾಂತಿಮಲೆ,ಹರೀಶ್ ಭಂಡಾರಿ ಕೌಡೂರು ಬೀಡು, ಬೊಲ್ಪಾರು ರಾಧಾಕೃಷ್ಣ ರೈ ಮುದಿಯಾರು, ರುಕ್ಮಯ ಅಜಲಾಯ ಮಯ್ಯಾಳ, ಊಜಂಪಾಡಿ ಶ್ರೀ ರಾಮ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ. ವಿದ್ಯಾ ಮೋಹನದಾಸ್ ರೈ ರತ್ನಾ ಕ್ಲಿನಿಕ್ ಬೆಳ್ಳೂರು ಬಹುಮಾನ ವಿತರಿಸಿ ಶುಭಕೋರಿದರು.ಸಮಿತಿಯ ಕಾರ್ಯಾಧ್ಯಕ್ಷ ಕೊರಗಪ್ಪ ರೈ ಮಯ್ಯಾಳ ಸ್ವಾಗತಿಸಿ , ಸಮಿತಿಯ ಕೋಶಾಧ್ಯಕ್ಷ ಸಂಪತ್ ರೈ ಊಜಂಪಾಡಿ ವಂದಿಸಿ,ಸಮಿತಿಯ ಪದಾಧಿಕಾರಿಗಳಾದ ಹರ್ಷಿತ್ ರೈ ಮೆಣಸಿನಕಾನ, ಕೆ ರಾಮಯ್ಯ ರೈ ಕಲ್ಲಡ್ಕಗುತ್ತು, ಸೀತಾರಾಮ ರೈ ಕಲ್ಲಡ್ಕಗುತ್ತು,ದೇವಪ್ಪ ಗೌಡ ಸಿ ಯೆಚ್, ವೀಣಾ ಮೆಣಸಿನಕಾನ, ಸವಿತಾ ಮೆಣಸಿನಕಾನ, ಮೋಹನ ಮೆಣಸಿನಕಾನ , ರಾಜೇಶ್ ಮಯ್ಯಾಳ, ವೇಣು ಶಾಂತಿಮಲೆ, ಹರೀಶ್ ಮೆಣಸಿನಕಾನ, ಲೋಕೇಶ್ ಗೌರಿಮೂಲೆ, ಮೋಹನ ವಾಲ್ತಾಜೆ, ರತ್ನಾಕರ ರೈ ಮುದಿಯಾರು, ಮೋಹನದಾಸ್ ರೈ ಮುದಿಯಾರು, ಬಾಳಪ್ಪ ಕನ್ನಂಗೊಳು, ಚರಣ್ ಗೌಡ ವಲ್ತಾಜೆ, ಜಗದೀಶ್ ರೈ ಕಲ್ಲಡ್ಕ, ಬಾಬು ಊಜಂಪಾಡಿ, ರವಿ ರೈ ಮೆಣಸಿನಕಾನ ಹಾಗೂ ಸರ್ವ ಸದಸ್ಯರು ಸಹಕರಿಸಿದರು. ವಿದ್ಯಾ ಶ್ರೀ ಯಸ್ ಪಡುಮಲೆ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶ್ರೀ ಕೋದಂಡರಾಮ ಭಜನಾ ಮಂಡಳಿ ಸದಸ್ಯರಿಂದ ನೃತ್ಯ ವೈವಿಧ್ಯ ಮತ್ತು ಮಂಜು ಬಳಗ ಸುಳ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತಂಡದಿಂದ ತುಳು ನಾಡ ವೈಭವ ಹಾಗೂ ತುಳು ನೃತ್ಯ ಸಂಗಮ ಕಾರ್ಯಕ್ರಮದೊಂದಿಗೆ ತುಳುಕೂಟ ಸಮಿತಿಯ ತುಳು ಐಸಿರೊ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here