ಪುತ್ತೂರು: ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಏ.3 ರಂದು ಫ್ಯಾಟಿ ಲಿವರ್(ಲಿವರ್ ನ ಕೊಬ್ಬು) ಇರುವವರಿಗೆ ವಿಶೇಷ ಫೈಬ್ರೋಸ್ಕ್ಯಾನ್ ಹಾಗೂ ಲಿವರ್ ಫಂಕ್ಷನ್ ಟೆಸ್ಟ್ ತಪಾಸಣೆಯನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಆಸ್ಪತ್ರೆಯ ವೈದ್ಯ ಡಾ.ಜೆ.ಸಿ ಆಡಿಗರವರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಝೈಡಸ್ ಕಂಪೆನಿಯ ಸೈಯದ್ ಇಸ್ರಾರ್, ಡಾ.ಲಾಲ್ ಪತ್ ಲ್ಯಾಬ್, ಇಂಟಸ್ ಫಾರ್ಮಾ ವಿನಯ್, ಹರ್ಷ, ಚೇತನಾ ಆಸ್ಪತ್ರೆಯ ಸಿಬ್ಬಂದಿ ಸಹಕರಿಸಿದರು. ಆಸ್ಪತ್ರೆಯ ಮ್ಯಾನೇಜರ್ ನೋಯೆಲ್ ಡಿ’ಸೋಜ ಉಪಸ್ಥಿತರಿದ್ದರು.