ವಿದ್ಯಾರಶ್ಮಿ: ʼಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವʼ ಅರಿವು ಮೂಡಿಸುವ ಕಾರ್ಯಕ್ರಮ

0

ಸವಣೂರು: ಮಾನವ ಹಕ್ಕು ಘಟಕದ ವತಿಯಿಂದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾ.27ರಂದು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜು ಸವಣೂರು ಇಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇದರ ಪ್ರಾಂಶುಪಾಲರಾದ ಪ್ರೊ.ದಾಮೋದರ ಗೌಡರವರು ಮಾತನಾಡಿ ಚುನಾವಣೆಯ ಬಗ್ಗೆ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಕರೆ ನೀಡಿದರು. ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಚುನಾವಣೆಯಲ್ಲಿ ಸಮರ್ಥ ಜನನಾಯಕರನ್ನು ಆಯ್ಕೆ ಮಾಡುವ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮಾನವ ಹಕ್ಕು ಘಟಕದ ಸಂಯೋಜಕರಾದ ಕಿರಣ್ ಚಂದ್ರ ರೈ ರಾಜ್ಯಶಾಸ್ತ್ರ ಉಪನ್ಯಾಸಕರು ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮವನ್ನು ಅಲೀಮತ್ ಸಜ಼ಾನ ಪ್ರಥಮ ಬಿಕಾಂ ನಿರೂಪಿಸಿದರು. ಶ್ರದ್ದಾ ಎನ್ ಕೆ ತೃತೀಯ ಬಿಕಾಂ ಸ್ವಾಗತಿಸಿ, ಪ್ರವೀಣ್ ತೃತೀಯ ಬಿ ಎ ವಂದಿಸಿದರು. ಅಭೀಜ್ಞಾ ಮತ್ತು ಶ್ರಾವ್ಯವಾಣಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

LEAVE A REPLY

Please enter your comment!
Please enter your name here