ಸವಣೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಶಿಬಿರದ ಉದ್ಟಾಟನಾ ಸಮಾರಂಭ ಮಾ.31ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಾಷ್ರೀಯ ಸೇವಾ ಯೋಜನಾಧಿಕಾರಿ ನಿರಂಜನ್.ವಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಸುಬ್ರಹ್ಮಣ್ಯ ಕಣ್ಕಲ್ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ. ರಘುನಾಥ ರೈ ವಹಿಸಿ ಮಾತನಾಡಿ ಈ ಗ್ರಾಮದಲ್ಲಿ ಬರುವ ಏಳು ಶಾಲೆಗಳಲ್ಲಿ ಒಟ್ಟು ಆರು ಶಾಲೆಗಳಲ್ಲಿ ಮಾತ್ರ ರಾಷ್ಟ್ರೀಯ ಸೇವಾಯೋಜನೆ ಶಿಬಿರವು ನಡೆದಿತ್ತು ಆದರೆ 25 ವರ್ಷಗಳ ನಂತರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎನ್.ಎಸ್.ಎಸ್ ಶಿಬಿರವು ನಡೆಯುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಡಾ ದೇವಿ ಪ್ರಸಾದ್ ಕಾನತ್ತೂರ್ ಮತ್ತು ವಿನೋದ್ ಬೊಳ್ಮಲೆ ,ಮುಖ್ಯ ಗುರು ಪುರುಪಷೋತ್ತಮ ಬಿ , ಸುರೇಶ್ ಎನ್ ಹಾಗೂ ಸುಮಾ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಹ ಶಿಭಿರಾಧಿಕಾರಿಗಳು ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.