ರಾಮಕುಂಜ ಆ.ಮಾ.ಶಾಲೆಯಲ್ಲಿ ಬೇಸಿಗೆ ಶಿಬಿರ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ.27ರಿಂದ ಎ.2ರ ತನಕ ಬೇಸಿಗೆ ಶಿಬಿರ ಸಂಸ್ಕಾರ-ಸಂಭ್ರಮ ನಡೆಯಿತು. ಇದರ ಸಮಾರೋಪ ಸಮಾರಂಭ ಎ.2ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಶಿಬಿರದ ಸದುಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಯಾಗಬೇಕೆಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶಿಕ್ಷಕ-ರಕ್ಷಕ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಎ.ಪಿ., ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ದಾಮೋದರ ಗೌಡ ಕಕ್ವೆಯವರು ಸಂದರ್ಭೋಚಿತವಾಗಿ ಮಾತನಾಡಿದರು. ಶಿಬಿರದ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಕೆ.ಎಂ.ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಮಹಿಳಾ ಸಂಘಟಕಿ ಸೌಮ್ಯ ಮಾಧವ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆದಿತ್ಯ ಎ.ಆರ್ ಭಟ್, ಮಾನ್ವಿ ಆರ್ ರೈ, ಧನ್ಯ ಶ್ರೀ ಶಿಬಿರದ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಹಶಿಕ್ಷಕಿ ಅಕ್ಷತಾ ಶೇಖರ್‌ರವರ ಚಿತ್ರಕಲಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಶಿಬಿರದಲ್ಲಿ ಜನಪದ ನೃತ್ಯ-ಸುಭಾಷ್ ಪಂಜ, ಕರಕುಶಲ ವಸ್ತುಗಳ ತಯಾರಿಕೆ-ಸುಮನಾ ಕೆರೆಕರೆ, ನೃತ್ಯ ತರಬೇತಿ-ಚೈತನ್ಯ, ಜಾದೂ ಪ್ರದರ್ಶನ- ಡಾ. ಸುಧಾಕರ್ ಬರ್ಕಜೆ, ಹಾಡು ಮತ್ತು ರಂಗಕಲೆ-ಸುಬ್ರಹ್ಮಣ್ಯ ಕೆ.ಎಂ, ಮುಖವರ್ಣಿಕೆ-ಶಿವರಾಮ ಕಲ್ಮಡ್ಕ, ನಾಟಕ ತರಬೇತಿ-ಸುಧೀರ್ ಏನೆಕಲ್ಲು, ಹಾಸ್ಯ ಮತ್ತು ಶಿಶುಗೀತೆ-ರಕ್ಷಣ್ ಮಾಡೂರು ಹಾಗೂ ಯಕ್ಷಗಾನ ನಾಟ್ಯ ತರಬೇತಿ-ಸತೀಶ್ ಆಚಾರ್ಯ ಮಾಣಿ ಇವರಿಂದ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಹೊರಸಂಚಾರ ಹಾಗೂ ಸ್ಕೌಟ್ಸ್, ಗೈಡ್ ಮತ್ತು ಕಬ್ ಬುಲ್ ಬುಲ್‌ನ ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದ ಅಡುಗೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ.ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್ ವಂದಿಸಿದರು. ಸಹಶಿಕ್ಷಕರಾದ ಕಿಶೋರ್ ಕುಮಾರ್ ಬಿ, ಹರೀಶ್ ಆಚಾರ್ಯ ಎಂ, ಅಕ್ಷತಾ ಟಿ, ಶುಭರಾಣಿ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು. ಸಂಸ್ಥೆಯ ಶಿಕಕ್ಷ-ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here