ಸಚಿನ್ ಮಾಲಕತ್ವದ ಶ್ರೀ ರಕ್ಷಾ ಹೇರ್ ಡ್ರೆಸರ್ಸ್ ಗೆ ಸಂಸದ ಕಟೀಲ್ ಭೇಟಿ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ನೂತನವಾಗಿ ಶುಭಾರಂಭಗೊಂಡ ಶ್ರೀ ರಕ್ಷಾ ಹೇರ್ ಡ್ರೆಸರ್ಸ್ ಗೆ ಸಂಸದ ನಳಿನ್ ಕುಮಾರ್ ಕಟೀಲ್ ರವರು ಭೇಟಿ ನೀಡಿ, ಸಂಸ್ಥೆಗೆ ಶುಭಹಾರೈಸಿದರು.
ಸಂಸ್ಥೆ ಯ ಮಾಲಕ ಸಚಿನ್ ಸವಣೂರು ಸಂಸದರನ್ನು ಸ್ವಾಗತಿಸಿ ಗೌರವಿಸಿದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕ ಗಂಗಾಧರ ಪೆರಿಯಡ್ಕ, ನ್ಯಾಯವಾದಿಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ, ಮಹೇಶ್ ಕೆ.ಸವಣೂರು, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸುಧಾಕರ ರೈ ಕುಂಜಾಡಿ, ಸವಣೂರು ಗ್ರಾ.ಪ, ಸದಸ್ಯರುಗಳಾದ ತೀರ್ಥರಾಮ್ ಕೆಡೆಂಜಿ, ಸತೀಶ್ ಅಂಗಡಿಮೂಲೆ, ಮಾಜಿ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ವಿಠಲ ಶೆಟ್ಟಿ ಬಂಬಿಲ,‌ ಶ್ರೀರಕ್ಷಾ ಹೇರ್‌ ಡ್ರೆಸ್ಸರ್ಸ್ ನ ಮನೋಹರ ಮುಗೇರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here