ಪುತ್ತೂರು: ಪುತ್ತೂರು ಪಾರ್ಲರ್ ಫ್ರೆಂಡ್ಸ್ ಆಯೋಚಿಸಿದ್ದ ಒಂದು ದಿನದ ಮಾಸ್ಟರ್ ಮೇಕಪ್ ಕ್ಲಾಸ್ ಪುತ್ತೂರಿನ ಮಹಾವೀರ ವೆಂಚರ್ಸ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಯುಪಿ ಶಿವಾನಂದ್ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಇಂಟರ್ನ್ಯಾಷನಲ್ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಸೋಮು ಹಾಸನ್ ಈ ಮಾಸ್ಟರ್ ಕ್ಲಾಸನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸೋಮು ಹಾಸನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಉಪ್ಪಿನಂಗಡಿ ಪ್ರಗತಿ ಬ್ಯೂಟಿ ಪಾರ್ಲರ್ ನ ಮಾಲಕಿ ಮಾಧವಿ ರೈ ಯವರ ಸೇವಾ ಅವಧಿಯನ್ನು ಗುರುತಿಸಿ ಪುತ್ತೂರು ಪಾರ್ಲರ್ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.ಐಶ್ವರ್ಯ ಬ್ಯೂಟಿ ಪಾರ್ಲರ್ ಮಾಲಕಿ ಐಶ್ವರ್ಯ ಚಂದ್ರಶೇಖರ್ ಅತಿಥಿಗಳನ್ನ ಗೌರವಿಸಿ ಸನ್ಮಾನಿಸಿದರು. ಇಂಟರ್ನ್ಯಾಷನಲ್ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಸೋಮು ಹಾಸನ್, ಹೇರ್ ಸ್ಟೈಲಿಸ್ಟ್ ಆಶಾ, ಮೇಕಪ್ ಆರ್ಟಿಸ್ಟ್ ಚಿರಂತ್, ಹಾಸನದ ಸಂತೋಷ್ ಬ್ಯೂಟಿ ವರ್ಲ್ಡ್ ನ ಸಾಗರ್ ದಂಪತಿಗಳು, ಪುತ್ತೂರು ಪಾರ್ಲರ್ ಫ್ರೆಂಡ್ಸ್ ನ ಸೆನೋರಿಟಾ ಬ್ಯೂಟಿ ಪಾರ್ಲರ್ ಮಾಲಕಿ ದಿವ್ಯ.ಕೆ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಂದು ದಿನದ ಮಾಸ್ಟರ್ ಕ್ಲಾಸ್ ನಲ್ಲಿ ಸೌತ್ ಇಂಡಿಯನ್ ಬ್ರೈಡಲ್ ಲುಕ್, ರಿಸೆಪ್ಶನ್ ಲುಕ್, ಹೇರ್ ಸ್ಟೈಲ್ ಗಳ ತರಬೇತಿಯನ್ನು ನೀಡಲಾಯಿತು. ತಾಲೂಕು ಮಟ್ಟದಲ್ಲಿ ಇದೇ ಪ್ರಥಮ ಬಾರಿಗೆ ಈ ಮಾಸ್ಟರ್ ಮೇಕಪ್ ಕ್ಲಾಸ್ ನಡೆದಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಹಲವಾರು ಬ್ಯೂಟಿಷಿಯನ್ಸ್, ಮೇಕಪ್ ಆರ್ಟಿಸ್ಟ್ ಗಳು ಈ ಮಾಸ್ಟರ್ ಕ್ಲಾಸ್ ನಲ್ಲಿ ಭಾಗಿಯಾಗಿದ್ದರು.
ಶ್ರೀಮಾ ಬ್ಯೂಟಿಪಾರ್ಲರ್ ಮಾಲಕಿ ಮಾಧವಿ ಮನೋಹರ್ ರೈ ಸ್ವಾಗತಿಸಿ, ತಾರುಣ್ಯ ಬ್ಯೂಟಿ ಪಾರ್ಲರ್ ಮಾಲಕಿ ನಿಶ್ಚಲ.ಎಸ್. ಆಳ್ವಾ ವಂದಿಸಿದರು. ಸೌಂದರ್ಯ ಬ್ಯೂಟಿ ಪಾರ್ಲರ್ ಮಾಲಕಿ ಹೇಮಾ.ಜೆ. ರೈ ಕಾರ್ಯಕ್ರಮವನ್ನು ನಿರೂಪಿಸಿದರು.