ಯುವತಿಯೊಂದಿಗಿನ ಪ್ರೀತಿ ವಿಚಾರ:ಯುವಕನಿಗೆ ಹಲ್ಲೆ,ಬೆದರಿಕೆ-ದೂರು

0

ಪುತ್ತೂರು:ಯುವತಿಯೋರ್ವರನ್ನು ಪ್ರೀತಿಸುತ್ತಿದ್ದ ವಿಚಾರದಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿ,ಜೀವಬೆದರಿಕೆಯೊಡ್ಡಿರುವ ಆರೋಪದ ಘಟನೆ ಕುರಿಯ ಮಲಾರ್ ಎಂಬಲ್ಲಿಂದ ವರದಿಯಾಗಿದೆ.

ಘಟನೆ ಕುರಿತು ಅಶ್ವಿತ್ ಕುಮಾರ್(24 ವ.)ರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಱತಾನು ಕುರಿಯ ಗ್ರಾಮದ ಮಲಾರ್ ಎಂಬಲ್ಲಿ ಕಟ್ಟಿಸಿದ ಹೊಸ ಮನೆಗೆ ಏ.3ರಂದು ಸಂಜೆ ನೀರು ಹಾಕುತ್ತಿದ್ದ ಸಮಯ ಪರಿಚಯದ ಸಚಿನ್ ಮುಕ್ವೆ ಎಂಬಾತ ಕರೆ ಮಾಡಿ,ನಿನ್ನಲ್ಲಿ ಮಾತನಾಡುವುದು ಇದೆ ಎಂದು ತಿಳಿಸಿದಾಗ, ತಾನು ಮಲಾರ್‌ನಲ್ಲಿದ್ದು, ದರ್ಬೆಗೆ ಬರುವುದಾಗಿ ತಿಳಿಸಿ, ಮಲಾರ್‌ನಿಂದ ತನ್ನ ಬೈಕ್‌ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಸಚಿನ್ ಮುಕ್ವೆ ಹಾಗೂ ಇತರರು ಕೆಎ 19:ಎಂಇ8216ನೇ ಕಾರಿನಲ್ಲಿ ದರ್ಬೆ ಕಡೆಯಿಂದ ಬರುತ್ತಿರುವವರು ನನ್ನನ್ನು ನೋಡಿ ಕಾರಿನ ಚಾಲಕ ಕೀರ್ತೇಶನು ನನ್ನ ಬೈಕಿಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿದ್ದ.ನಂತರ ಸಚಿನ ಮುಕ್ವೆ, ಅಂಕಿತ್ ಹಾಗೂ ಇತರ ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕಾರಿನಿಂದ ಇಳಿದು ಬಂದು, ನನಗೆ ಮತ್ತು ಅಮೃತಾರವರ ಮಧ್ಯೆ ಇರುವ ಪ್ರೀತಿ ವಿಚಾರವಾಗಿ, ಆಕೆಯ ವಿಚಾರಕ್ಕೆ ಬಂದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಹೇಳಿ ಅವಾಚ್ಯ ಶಬ್ಧಗಳಿಂದ ಬೈದು, ಸಚಿನ್ ಹಾಗೂ ಅಂಕಿತ್‌ರವರು ಕೈಯಿಂದ ಹೊಡೆದಿದ್ದು, ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡರು.ನಾನು ಅವರಿಂದ ತಪ್ಪಿಸಿಕೊಂಡು ಓಡಿದಾಗ, ಮುಂದಕ್ಕೆ ಹುಡುಗಿಯ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆೞಎಂದು ಅಶ್ವಿತ್ ಕುಮಾರ್ ಅವರು ನೀಡಿರುದ ದೂರಿನಲ್ಲಿ ಆರೋಪಿಸಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ(ಅ.ಕ್ರ 48-2024)ಕಲಂ-143, 147, 504, 341, 323, 506, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here