NMMS ಪರೀಕ್ಷೆ: ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವೀಣಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ

1

ರಾಮಕುಂಜ: ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು ಹಲವಾರು ವರ್ಷಗಳಿಂದ NMMS ಪರೀಕ್ಷೆ ಯಲ್ಲಿ ವಿಶೇಷ ಸಾಧನೆ ಮಾಡಿಕೊಂಡು ಬಂದಿರುವ ವಿದ್ಯಾಸಂಸ್ಥೆ ಯಾಗಿದೆ. ಪ್ರಸ್ತುತ ವರ್ಷದ NMMS ಪರೀಕ್ಷೆಯಲ್ಲಿ ಆನ ದಿನೇಶ್ ಎ ಹಾಗೂ ಭವ್ಯ ದಂಪತಿಯ ಪುತ್ರಿ, 8ನೇ ತರಗತಿಯ ವೀಣಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಕಲ್ಲೇರಿ ಪೊಡಿಯ ಕೆ.ಹಾಗೂ ಗೀತಾ ದಂಪತಿಯ ಪುತ್ರಿ ಅನುಶ್ರೀ ನಾಲ್ಕನೇ ಸ್ಥಾನ ಪಡೆದಿರುತ್ತಾರೆ.


ಶಾಲೆಯಿಂದ ಪರೀಕ್ಷೆಗೆ ಹಾಜರಾದ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಭಟ್ ಹಾಗೂ ಶಿಕ್ಷಕ ವೃಂದ ತರಬೇತಿ ನೀಡಿದ್ದರು. ಪೋಷಕರು ಮತ್ತು ಆಡಳಿತ ಮಂಡಳಿ ಸಹಕರಿಸಿದ್ದರು.

1 COMMENT

  1. ಸಾಧನೆ ಎಂದರೆ ಹೀಗಿರಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ; ಒಬ್ಬರಿಗೆ ಯಾವುದು ಸಾಧ್ಯವೋ ಅದು ಎಲ್ಲರಿಗೂ ಸಾಧ್ಯ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    [email protected]

LEAVE A REPLY

Please enter your comment!
Please enter your name here