ದೈವ ದೇವರುಗಳ ಅರಾಧನೆಯಿಂದ ಒಳಿತಾಗುತ್ತದೆ-ಪದ್ಮನಾಭ ತಂತ್ರಿ
ಕಾಣಿಯೂರು: ಚಾರ್ವಾಕ ಗ್ರಾಮದ ಕಂರ್ದ್ಲಾಜೆ ಕುಟುಂಬದ ಕೇಶವ ಗೌಡ ಕಂರ್ದ್ಲಾಜೆ ಅವರ ತರವಾಡು ಮನೆಯಲ್ಲಿ ಶ್ರೀ ಮಹಾದೇವಿ ಸಾನಿಧ್ಯ, ಧರ್ಮದೈವಗಳ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮವು ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎ.2ರಂದು ಪ್ರಾರಂಭಗೊಂಡು ಎ.4ರಂದು ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಎ.2ರಂದು ರಾತ್ರಿ ಸುದರ್ಶನ ಹೋಮ, ಏ.3ರಂದು ರಾತ್ರಿ ತಿಲ ಹೋಮ, ಸಾಯುಜ್ಯ, ಪ್ರಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ಬಿಂಬ ಜಲಧಿವಾಸ ವಾಸ್ತು ಬಲಿ ನಡೆಯಿತು. ಎ.4ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಸಾನಿಧ್ಯ ಕಲಶ ಪೂಜೆ, ಶ್ರೀ ಮಹಾದೇವಿ ಹಾಗೂ ಧರ್ಮದೈವಗಳ ಸಾನಿಧ್ಯ ಪುನರ್ ಪ್ರತಿಷ್ಠೆ ಸಾನಿಧ್ಯ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅರುವಗುತ್ತಿನ ಸಿ. ಜೆ. ಚಂದ್ರಕಲಾ ಜಯರಾಮ್ ಅರುವಗುತ್ತು, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಕರಂದ್ಲಾಜೆ, ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ, ದೈಪಿಲ ಕ್ರೀಡಾ ಸೇವಾ ಸಂಘದ ಪ್ರವೀಣ್ ಕುಂಟ್ಯಾನ, ಕುಶಾಲಪ್ಪ ಗೌಡ ದೈಪಿಲ, ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಪ್ರದೀಪ್ ಬೊಬ್ಬೆಕೇರಿ, ಚಂದ್ರಶೇಖರ್ ಬರೆಪ್ಪಾಡಿ, ಕೊರಗಪ್ಪ ಗೌಡ ಕುಕ್ಕುನಡ್ಕ, ನೇಮಣ್ಣ ಗೌಡ ಅಂಬುಲ, ಆನಂದ ಗೌಡ ಮೇಲ್ಮನೆ, ಧರ್ಣಪ್ಪ ಗೌಡ ಅಂಬುಲ, ಕಂರ್ದ್ಲಾಜೆ ಕುಟುಂಬದ ತರವಾಡು ಮನೆಯ ಕೇಶವ ಗೌಡ ಹಾಗೂ ಕುಟುಂಬಸ್ಥರಾದ ಭವಾನಿಶಂಕರ ಗೌಡ, ದಾಮೋದರ ಗೌಡ, ರಾಘವ ಗೌಡ, ಕೆ.ವಿ ಮಾಧವ ಗೌಡ ಕಂರ್ದ್ಲಾಜೆ, ಅಕ್ಕಯ್ಯ ಶಿವರಾಮ ಗೌಡ, ಲೋಲಾಕ್ಷಿ ಲಕ್ಷ್ಮಣ ಗೌಡ, ನೀರಜ ಶ್ರೀನಿವಾಸ ಗೌಡ, ವಸಂತ ಗೌಡ, ಬಾಲಕೃಷ್ಣ ಗೌಡ, ವೆಂಕಪ್ಪ ಗೌಡ ಕಂಪ, ವಿಶ್ವನಾಥ ಗೌಡ ಕಂಪ, ಕುಶಾಲಪ್ಪ ಗೌಡ ಕಜೆ, ಮಾಧವ ಗೌಡ ಕಜೆ, ಜಯರಾಮ ಗೌಡ ಕಜೆ, ಹುಕ್ರಪ್ಪ ಗೌಡ ಕೊರತ್ಯಡ್ಕ, ವೆಂಕಪ್ಪ ಗೌಡ ಎಂಜಿರ, ಬಾಬು ಗೌಡ ಧರ್ಮಸ್ಥಳ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ದೈವ ದೇವರುಗಳ ಅರಾಧನೆಯಿಂದ ಒಳಿತಾಗುತ್ತದೆ-ಪದ್ಮನಾಭ ತಂತ್ರಿ
ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಮಾತನಾಡಿ, ನಮ್ಮ ದೈವ ದೇವರುಗಳ ಆರಾಧನೆಯಿಂದ ನಮಗೆಲ್ಲ ಒಳಿತಾಗುತ್ತದೆ. ಒಂದು ಕುಟುಂಬದಲ್ಲಿ ಯಜಮಾನ ಭೌತಿಕವಾಗಿ ಆದ್ಯಾತ್ಮದೆದೆಡೆಗೆ ಕೊಂಡೊಯ್ಯಲು ಕುಟುಂಬದ ಧರ್ಮ ದೈವ ದಾರಿ ತೋರಿಸುತ್ತದೆ. ಧರ್ಮ, ಪ್ರಕೃತಿ, ದೇವರ ಬಗ್ಗೆ ಅರ್ಥ ಹುಡುಕುವುದು ಸುಲಭದ ಕೆಲಸವಲ್ಲ, ಇವುಗಳನ್ನು ಶ್ರದ್ದೆಯಿಂದ ಪೂಜಿಸಿದರೆ ದೇವರು ಅನುಗ್ರಹಿಸುತ್ತಾನೆ. ಕಂರ್ದ್ಲಾಜೆ ಕುಟುಂಬದ ದೈವ ದೇವರು ಕುಟುಂಬಕ್ಕೆ ಸನ್ಮಂಗಲ ಉಂಟು ಮಾಡಲಿ ಎಂದು ಹರಸಿದರು. ಕಂರ್ದ್ಲಾಜೆ ಕುಟುಂಬದ ತರವಾಡು ಮನೆಯ ಕೇಶವ ಗೌಡ ಕಂರ್ದ್ಲಾಜೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಟುಂಬದ ಕೆ. ವಿ ಮಾಧವ ಕಂರ್ದ್ಲಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:
ಈ ಸಂದರ್ಭದಲ್ಲಿ ಕಂರ್ದ್ಲಾಜೆ ಕುಟುಂಬದ ತರವಾಡು ಮನೆಯ ಕೇಶವ ಗೌಡ ಕಂರ್ದ್ಲಾಜೆ ಮತ್ತು ಸೀತಮ್ಮ ದಂಪತಿಗಳನ್ನು ಸನ್ಮಾನಿಸಲಾಯಿತು. ಕಳೆದ 25 ವರ್ಷಗಳಿಂದ ದೈವದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ದಾಮೋದರ ಗೌಡ ಕಂರ್ದ್ಲಾಜೆ ಹಾಗೂ ಕುಟುಂಬದ ಹಿರಿಯ ಸದಸ್ಯೆ ಅಕ್ಕಯ್ಯ ಶಿವರಾಮ ಗೌಡ ಅವರನ್ನು ಸನ್ಮಾನಿಸಲಾಯಿತು. ದೈವಸ್ಥಾನ ನಿರ್ಮಾಣದಲ್ಲಿ ಸಹಕಾರ ನೀಡಿದ ದಾನಿಗಳಿಗೆ, ಕುಟುಂಬದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯಕ್ಷಗಾನ ತಾಳಮದ್ದಳೆ:
ಕಾರ್ಯಕ್ರಮದಲ್ಲಿ ಮಡಂತ್ಯಾರು ಪಾರೆಂಕಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘದವರಿಂದ ಕದಂಬ ಕೌಶಿಕೆ ಯಕ್ಷಗಾನ ತಾಳಮದ್ದಳೆ ನಡೆಯಿತು.