ಕೊಳ್ತಿಗೆ, ಈಶ್ವರಮಂಗಲದಲ್ಲಿ ʼಸುದ್ದಿʼ ಚಾನೆಲ್‌ನ ‘ಮತಸಮರ-2024’ ದ.ಕ. ಲೋಕ ಸಂಚಾರ

0

ಪುತ್ತೂರು: ಲೋಕಸಭಾ ಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಏರುತ್ತಿದೆ. ಎಲ್ಲೆಡೆ ಮತ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಅಭಿವೃದ್ಧಿ ಕೆಲಸಗಳು, ಬಾಕಿ ಉಳಿದುಕೊಂಡಿರುವ ಸಮಸ್ಯೆಗಳು, ಮುಂದಕ್ಕೆ ಆಗಬೇಕಿರುವ ಕೆಲಸಗಳು, ಗೆದ್ದುಬರುವ ಅಭ್ಯರ್ಥಿಯಿಂದ ಜನರು ಮಾಡುತ್ತಿರುವ ನಿರೀಕ್ಷೆಗಳನ್ನು ತಿಳಿಯುವ ಸಲುವಾಗಿ ಸುದ್ದಿ ಚಾನೆಲ್ ವತಿಯಿಂದ ‘ಮತಸಮರ-2024; ದ.ಕ. ಲೋಕಸಂಚಾರ’ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ.

ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಗ್ರಾಮದ ಜನರು, ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಎ.5ರಂದು ಕೊಳ್ತಿಗೆ ಪೆರ್ಲಂಪಾಡಿ ಹಾಗೂ ಈಶ್ವರಮಂಗಲದಲ್ಲಿ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಳ್ತಿಗೆ ಪರಿಸರದ ಜನರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿ ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು. ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟರಮಣ ಕೆ.ಎಸ್., ಗ್ರಾಮ ಪಂಚಾಯತ್ ಸದಸ್ಯ ಪವನ್ ಡಿ.ಜಿ., ಪ್ರಮುಖರಾದ ಶ್ರೀಧರ ಪೂಜಾರಿ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ತೀರ್ಥಾನಂದ, ಹಾಲು ಸೊಸೈಟಿಯ ನಿರ್ದೇಶಕ ತಿರುಮಲೇಶ್, ಜನಾರ್ದನ ಗೌಡ ಪೆಲಂಪಾಡಿ, ಕೆಪಿಸಿಸಿ ಸಂಯೋಜಿತ ಪ್ರದೀಪ್ ಪಾಂಬಾರು, ಪ್ರಮುಖರಾದ ಉದಯ ಕುಮಾರ್ ಜಿ.ಕೆ. ತಾ.ಪಂ. ಮಾಜಿ ಸದಸ್ಯ ರಾಮ ಪಾಂಬಾರು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ, ವಸಂತ್ ಕುಮಾರ್ ರೈ ದುಗ್ಗಳ, ಯತೀಂದ್ರ, ಮಾಜಿ ಪಂಚಾಯತ್ ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ, ಕಿಸಾನ್ ಕಾಂಗ್ರೆಸ್‌ನ ಅಧ್ಯಕ್ಷ ಮುರಳೀಧರ ಎಸ್.ಪಿ. ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here