ಪುತ್ತೂರು: ಮಾರ್ಚ್ 2024ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 51 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇಕಡಾ ನೂರು ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 51 ವಿದ್ಯಾರ್ಥಿಗಳ ಪೈಕಿ 9 ಮಂದಿ ವಿಶಿಷ್ಟ ಶ್ರೇಣಿ, 33 ಮಂದಿ ಪ್ರಥಮ ದರ್ಜೆ ಮತ್ತು 9 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಫಾತಿಮಾ ಶೈಮಾ -573/600-95.5%, Science-P-94,C-96,M-99,B-96, (ಕೆ.ಪಿ.ಮಹಮ್ಮದ್ ಷರೀಫ್ ಮತ್ತು ಸಾಜಿದಾ, ಪೆರಾಬೆ, ಕಡಬ, ಇವರ ಮಗಳು), ಇಂಚರ ಕೆ.ಎಚ್.558/600-93%, Commerce-E-99,B-94,A-99,S-94, (ಹೇಮಂತ್ ಕೆ.ಯು ಮತ್ತು ಜೀಜಾಬಾಯಿ ಬಿ.ಪಿ., ಮಕ್ಕಂದೂರು,ಮಡಿಕೇರಿ ಇವರ ಮಗಳು), ಶ್ರದ್ಧಾ, 555/600-92.5% Commerce-E-98,B-91,A-94,Cs-91, (ಸೊಮಶೇಖರ ಮತ್ತು ಬೇಬಿ, ಮುಚ್ಚಿರಡ್ಕ, ರೆಖ್ಯ, ಬೆಳ್ತಂಗಡಿ, ಇವರ ಮಗಳು), ಅಯ್‌ಷತ್ ವಫಾ, 550/600-91.60% Science-P-93,C-96,M-95,B-93,, (ಅಬ್ದುಲ್ ರಹಿಮಾನ್ ಮತ್ತು ಝೀನತ್‌ಬಾನು, ಮಿತ್ತೋಡಿ, ಮರ್ದಾಳ, ಕಡಬ ಇವರ ಮಗಳು), ಮಿಥುನ್ ಪಿ., 547/600-91.16% Science-P-87,C-89,M-94,B-94, (ಚೆನ್ನಪ್ಪ ಗೌಡ ಮತ್ತು ವಸಂತಿ, ಪಾರಮಗ್ರ, ನರಿಮೊಗರು ಇವರ ಮಗ), ಹರ್ಷಿತ್ ಎ.ಕೆ., 529/600-88.16%, Science-P-86,C-81,M-94,Cs-96(ಆನಂದ ಕೆ. ಮತ್ತು ಪುಷ್ಪಾವತಿ ಬಿ.ಎಂ., ಕೇಕುಡೆ, ಸವಣೂರು ಇವರ ಮಗ), ದಿಶಾ ಕೆ., 523/600-87.16%, Commerce-E-92,B-83,A-100,Cs-82 (ರವಿ ಕೆ. ಮತ್ತು ಸರಸ್ವತಿ, ಕೇಕುಡೆ, ಸವಣೂರು ಇವರ ಮಗಳು), ಗೌತಮಿ ಕೆ.519/600-86.5%, Science-P-75,C-85,M-82,B-86(ಕೇಶವ ಗೌಡ ಮತ್ತು ವಸಂತಿ, ಕಂಡಿಗ, ಚಾರ್ವಾಕ ಇವರ ಮಗಳು), ಮರ್ವಾ ಅಬ್ದುಲ್ಲಾ ಸೋಂಪಾಡಿ, 515/600-85.83%, Science-P86,C-81,M-83,B-89, (ಅಬ್ದುಲ್ಲಾ ಸೋಂಪಾಡಿ ಮತ್ತು ರೆಹಮತ್ ಬೀಬಿ ಅಬ್ದುಲ್ಲಾ, ಸೋಂಪಾಡಿ, ಸವಣೂರು ಇವರ ಮಗಳು) ಈ 9 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಮತ್ತು ಬೋಧಕ ಸಿಬ್ಬಂದಿಯವರನ್ನು ಕಾಲೇಜಿನ ಸಂಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.
ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗಕ್ಕೆ ದಾಖಲಾತಿ ಆದವರಿಗೆ ಉದ್ಯೋಗದ ಖಾತರಿ ನೀಡಲಾಗುವುದು ಎಂದು ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ತಿಳಿಸಿದ್ದಾರೆ.