ಕುರಿಂಜ ನಿವಾಸಿ ಸೋಮಪ್ಪ ನಾಯ್ಕ ಎಸ್‌ ನಿಧನ

0

ಪುತ್ತೂರು: ಅರಿಯಡ್ಕ ಗ್ರಾಮದ ಮನ್ನಾಪು ಕುರಿಂಜದ ಸೋಮಪ್ಪ ನಾಯ್ಕ ಎಸ್‌(76) ಅವರು ಎ.9ರಂದು ಕಿಡ್ನಿ ವೈಫಲ್ಯದಿಂದ ಅವರ ಮನೆಯಲ್ಲಿ ನಿಧನರಾಗಿದ್ದಾರೆ.

ಇವರು ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಪುತ್ತೂರು ಇದರ ಡೈರೆಕ್ಟರ್‌ ಆಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಸುಮಾರು ವರ್ಷಗಳ ಕಾಲ ನಿರ್ದೇಶಕಾರಿಗೆ ಹಾಗೂ ಹಾಲಿ ನಿರ್ದೇಶಕರಿಗೆ ಸೇವೆ ಸಲ್ಲಿಸಿರುತ್ತಾರೆ. ಇವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ 5 ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರಿಗೆ ಅರಿಯಡ್ಕ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಶಿವರಾಮಮಣಿ ಕುರಿಂಜ, ಅರಿಯಡ್ಕ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಸ್‌ ಇಕ್‌ಬಾಲ್ ಹುಸೈನ್‌ ಹಾಗೂ ಅನೇಕ ರಾಜಕೀಯ ಮುಖಂಡರು ಹಾಗೂ ಇನ್ನಿತರರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here