ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಎ.7ರಂದು ಆರಂಭಗೊಂಡಿದ್ದು 5 ದಿನಗಳ ಕಾಲ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಎ.9ರಂದು ಬೆಳಿಗ್ಗೆ ದೀಪಬಲಿ, ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಭೂತ ಬಲಿ ಉತ್ಸವ, ಕೆರೆಕಟ್ಟೆ ಉತ್ಸವ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಆರ್ ಕೆ ಆರ್ಟ್ಸ್ ಚಿಣ್ಣರ ಮನೆ ತಂಡದವರಿಂದ ನೃತ್ಯ ಸಂಭ್ರಮ ಹಾಗೂ ಮೂಂಡಬೈಲು ವೈಭವಿ ಕಲಾ ತಂಡದವರಿಂದ ‘ಇನಿ ಅತ್ತಂಡ ಎಲ್ಲೆ’ ತುಳು ಹಾಸ್ಯಮಯ ನಾಟಕ ನಡೆಯಿತು.
ಎ.10 ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವಿಟ್ಲ ಅರಮನೆಯ ಬಂಗಾರ ಅರಸರು, ರಾಜಾರಾಮ ವರ್ಮ, ಆಡಳಿತ ಸಮಿತಿ, ಗ್ರಾಮಸ್ಥರು, ಊರ-ಪರಊರ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ಇಂದು ರಾತ್ರಿ ಕ್ಷೇತ್ರದಲ್ಲಿ..
ರಾತ್ರಿ ಉತ್ಸವ ಬಲಿ, ದರ್ಶನ ಬಲಿ, ಬೆಡಿಕಟ್ಟೆ ಉತ್ಸವ, ಸಿಡಿಮದ್ದು ಪ್ರದರ್ಶನ, ಮೃಗ ಬೇಟೆ ಸವಾರಿ, ನಿತ್ಯಪೂಜೆ, ಶ್ರೀ ಭೂತ ಬಲಿ, ಶಯನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ನಾದೃಧೀಂ 24 ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಲಿದೆ.