ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.92.4 ಫಲಿತಾಂಶ ಲಭಿಸಿದೆ.
ಮೂರು ವಿಭಾಗಗಳಿಂದ ಒಟ್ಟು 106 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ವಾಣಿಜ್ಯ ವಿಭಾಗದಲ್ಲಿ ಶೇ.98.15, ವಿಜ್ಞಾನ ವಿಭಾಗದಲ್ಲಿ 96.43, ಕಲಾ ವಿಭಾಗದಲ್ಲಿ ಶೇ.75 ಫಲಿತಾಂಶ ಬಂದಿದೆ. ಒಟ್ಟು 21 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 63 ವಿದ್ಯಾರ್ಥಿಗಳು ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 4 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಹರ್ಷಿತ್ ಕುಮಾರ್ ಎಂ. 556 ಅಂಕ, ವಿಜ್ಞಾನ ವಿಭಾಗದ ಆಯಿಷಾತ್ ಫರ್ಜಾನ 551 ಅಂಕ ಹಾಗೂ ಕಲಾ ವಿಭಾಗದ ವಂದನಾಶ್ರೀ 538 ಅಂಕ ಪಡೆದು ಪ್ರತೀ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.