ನೆಕ್ಕರೆ: ಗುಡ್ಡಕ್ಕೆ ಬೆಂಕಿ

0

ಉಪ್ಪಿನಂಗಡಿ: ಕಾಂಚನ ಬಳಿಯ ನೆಕ್ಕರೆ ಎಂಬಲ್ಲಿ ಗುಡ್ಡವೊಂದಕ್ಕೆ ಬೆಂಕಿ ಬಿದ್ದಿದ್ದು, ಹಲವು ಮರ- ಗಿಡಗಳು ಸುಟ್ಟು ಹೋದ ಘಟನೆ ಎ.11ರ ಸಂಜೆ ನಡೆದಿದೆ.
ಇಲ್ಲಿನ ಸೂರಪ್ಪ ಎಂಬವರ ಗುಡ್ಡಕೆ ಬೆಂಕಿ ಬಿದ್ದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣವೆನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದ್ದು, ಇದರಿಂದಾಗಿ ಸೂರಪ್ಪರ ಜಮೀನಿನ ಪಕ್ಕದಲ್ಲಿರುವ ರಬ್ಬರ್ ತೋಟಗಳಿಗೆ ಬೆಂಕಿ ಹರಡುವುದು ತಪ್ಪಿದೆ. ಬಳಿಕ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕಾಗಮಿಸಿದ್ದು, ಬೆಂಕಿಯನ್ನು ನಂದಿಸಿದೆ.

LEAVE A REPLY

Please enter your comment!
Please enter your name here