ಚುನಾವಣೆ ಸಂದರ್ಭ ಬಂದೂಕು ಠೇವಣಿ ಆದೇಶ ರದ್ದು ಕೋರಿ ರಿಟ್ ವಿನಾಯಿತಿ ಮನವಿ ಪರಿಶೀಲಿಸಿ ಸರಕಾರದಿಂದ ಸೂಕ್ತ ಕ್ರಮ-ಎಜಿ ಮಾಹಿತಿ

0

ಐವರ್ನಾಡಿನ ಕೃಷಿಕ ಕೆ.ವಿ.ಪ್ರಸಾದರಿಂದ ರಿಟ್ ಅರ್ಜಿ
ಅರ್ಜಿ ಸಲ್ಲಿಸಿದರೆ 2 ದಿನಗಳೊಳಗೆ ಆದೇಶ ಹೊರಡಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ
ಗೃಹ ಇಲಾಖೆ ಪ್ರ.ಕಾರ್ಯದರ್ಶಿ,ಡಿಸಿ, ಎಸ್ಪಿ, ಬೆಳ್ಳಾರೆ ಠಾಣಾಧಿಕಾರಿಗೆ ನೋಟೀಸ್

ಬೆಂಗಳೂರು: ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯ ಪಾಲನೆಗೆ ಅನುಗುಣವಾಗಿ ಸರ್ಕಾರದ ಸುಪರ್ದಿಗೆ ಒಪ್ಪಿಸಲಾಗಿರುವ ಬಂದೂಕು ಹಿಂದಿರುಗಿಸುವಂತೆ ಕೋರಿ ಅಧಿಕೃತ ಪರವಾನಗಿದಾರರು ಮನವಿ ಸಲ್ಲಿಸಿದರೆ,ಅಂತಹ ಮನವಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.


ಈ ಸಂಬಂಧ ಸುಳ್ಯ ತಾಲ್ಲೂಕಿನ ಐವರ್ನಾಡು ಗ್ರಾಮದ ಕೃಷಿಕ ಕೆ.ವಿ.ಪ್ರಸಾದ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಏ.10ರಂದು ವಿಚಾರಣೆ ನಡೆಸಿತು.ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು ಅರ್ಜಿದಾರರ ಮನವಿಗೆ ಸಂಬಂಽಸಿದಂತೆ ಉತ್ತರಿಸಿ,ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.ಇದರ ಅನುಸಾರ ಪರವಾನಗಿ ಹೊಂದಿದ ಆಯುಧಗಳನ್ನು ಠೇವಣಿ ಇರಿಸುವಂತೆ ಸ್ಥಳೀಯವಾಗಿ ಜಿಲ್ಲಾಽಕಾರಿಗಳು ಆದೇಶ ಹೊರಡಿಸಿದ್ದಾರೆ.ಅಗತ್ಯ ಇರುವವರಿಗೆ ಇದರಿಂದ ವಿನಾಯಿತಿ ನೀಡಬಹುದಾಗಿದೆ.ಆದರೆ, ಇದನ್ನು ಆಯಾ ಜಿಲ್ಲಾಽಕಾರಿಗಳೇ ನಿರ್ಧರಿಸಲಿದ್ದಾರೆ ಎಂದರು.


ಇದನ್ನು ದಾಖಲಿಸಿಕೊಂಡ ನ್ಯಾಯಪೀಠ,ಅರ್ಜಿದಾರರು ಮನವಿ ಸಲ್ಲಿಸಿದರೆ, ಎರಡು ದಿನಗಳಲ್ಲಿ ಸೂಕ್ತ ಆದೇಶ ಹೊರಡಿಸಿ ಎಂದು ಸೂಚಿಸಿತು.ಪ್ರಕರಣದ ಪ್ರತಿವಾದಿಗಳಾದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸುಳ್ಯ ತಾಲ್ಲೂಕು ತಹಶೀಲ್ದಾರ್, ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಽಕಾರಿಗೆ ನೋಟೀಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿ ವಿಚಾರಣೆ ಮುಂದೂಡಿತು.ಅರ್ಜಿದಾರ ಕೆ.ವಿ.ಪ್ರಸಾದ್ ಪರ ವಕೀಲ ಕೆ.ರವಿಶಂಕರ್ ವಾದ ಮಂಡಿಸಿದರು.ರೈತರು ಪರವಾನಿಗೆ ಹೊಂದಿರುವ ಕೋವಿಗಳನ್ನು ಪ್ರತಿ ಚುನಾವಣೆ ಸಂದರ್ಭ ಠೇವಣಿ ಇರಿಸಬೇಕೆಂಬ ಆದೇಶದ ವಿರುದ್ಧ ಈಗಾಗಲೇ ಹಲವು ಕಡೆಗಳಲ್ಲಿ ರೈತರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಕೋವಿಗಳನ್ನು ಠೇವಣಿ ಇರಿಸಿದರೆ ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೆ ನಷ್ಟ ಅನುಭವಿಸಬೇಕಾಗುತ್ತದೆ.ಜೊತೆಗೆ ಕಾಡುಪ್ರಾಣಿಗಳಿಂದ ತಮಗೆ ಪ್ರಾಣ ಭಯವೂ ಇದೆ ಎಂದು ಹೇಳುತ್ತಿರುವ ರೈತರು, ಚುನಾವಣೆ ಸಂದರ್ಭ ಕೋವಿಗಳನ್ನು ಠೇವಣಿ ಇರಿಸುವ ನಿಯಮದಿಂದ ರೈತರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.ಕಾಡು ಪ್ರಾಣಿಗಳಿಂದ ತಮ್ಮ ಕೃಷಿಗೆ ಆಗುತ್ತಿರುವ ಉಪಟಳದ ವಿರುದ್ಧ ಕೆಲವು ರೈತರು ‘112ಕ್ಕೆ ಕರೆ ಮಾಡಿ’ ಅಭಿಯಾನವನ್ನೂ ಆರಂಭಿಸಿದ್ದಾರೆ.

ನಾನೊಬ್ಬ ಕೃಷಿಕ.ನಾನು ಜನವಿರಳವಾದ ಬೆಳ್ಳಾರೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ.ಹೀಗಾಗಿ,ನನ್ನ ಜೀವ ರಕ್ಷಣೆ ಮತ್ತು ಕೃಷಿ ಚಟುವಟಿಕೆ ವೇಳೆ ವನ್ಯಪ್ರಾಣಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ನನಗೆ ಬಂದೂಕಿನ ಅಗತ್ಯವಿದೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನನ್ನ ಬಂದೂಕನ್ನು ತನ್ನ ಸುಪರ್ದಿಗೆ ಪಡೆದಿದೆ.ಆಯುಧ ಸುಪರ್ದಿಗೆ ಪಡೆಯುವ ಆದೇಶದಿಂದ ನನಗೆ ವಿನಾಯಿತಿ ನೀಡುವಂತೆ ಕೋರಲಾದ ಮನವಿಯನ್ನು ತಿರಸ್ಕರಿಸಲಾಗಿದೆ.ಇದು ಸಹಜ ನ್ಯಾಯತತ್ವ ಹಾಗೂ ಸಂವಿಧಾನದ 14, 16 ಮತ್ತು 21ನೇ ವಿಧಿಗಳಿಗೆ ವಿರುದ್ಧವಾಗಿದೆ.ಆದ್ದರಿಂದ, ಸರ್ಕಾರ ಈ ಸಂಬಂಧ 2024ರ ಮಾರ್ಚ್ 26ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರ ಕೆ.ವಿಪ್ರಸಾದ್ ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here