ಅಡಿಕೆ, ತೆಂಗು ಕೊಯ್ಲು, ಮದ್ದು ಸಿಂಪಡಣೆಗೆ ಧರಿತ್ರಿ ಸೌಹಾರ್ದ ಸಹಕಾರಿಯ ತಂಡ ಸೇವೆಗೆ ಸಿದ್ಧ

0

ಪುತ್ತೂರು: ಕೃಷಿಕರಿಗೆ ಅಡಿಕೆ ಮರಗಳಿಗೆ ಮದ್ದು ಸಿಂಪಡಣೆ ಹಾಗೂ ಅಡಿಕೆ ಕೊಯ್ಲು ಮಾಡಲು ಧರಿತ್ರಿ ಸೌಹಾರ್ದ ಸಹಕಾರಿಯ ಅಡಿಕೆ ಕೊಯ್ಲು ತಂಡ ಸೇವೆ ನೀಡಲು ಸಿದ್ಧವಾಗಿದೆ.
2024ರ ಜನವರಿ ತಿಂಗಳಲ್ಲಿ ಪ್ರಾರಂಭ ಮಾಡಿದ ಧರಿತ್ರಿ ಸೌಹಾರ್ದ ಸಹಕಾರಿಯ ಅಡಿಕೆ ಕೊಯ್ಲು ತಂಡ ಈಗಾಗಲೇ 75 ಮಂದಿ ರೈತರ 2500 ಅಡಿಕೆ ಮರಗಳ ಅಡಿಕೆ ಕೊಯ್ಲು ಹಾಗೂ 5000 ಅಡಿಕೆ ಮರಗಳಿಗೆ ಮದ್ದು ಸಿಂಪಡಣೆ ಮಾಡಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರೈತರಿಗೆ ಸೇವೆ ನೀಡಲು ತಂಡ ತಯಾರಿದೆ.

ಈಗಾಗಲೇ 2 ತಂಡ ತಯಾರಿದ್ದು 1 ತಂಡದಲ್ಲಿ ಕೊಯ್ಲು ಮಾಡುವವರು ಹಾಗೂ ಒಬ್ಬರು ಸಹಾಯಕರು ಇರುತ್ತಾರೆ. ಒಂದು ತಂಡ ದಿನಕ್ಕೆ 500ರಿಂದ 700 ಅಡಿಕೆ ಗಿಡಗಳಿಗೆ ಕೊಯ್ಲು ಮಾಡುತ್ತಾರೆ. ನಾವು ಜನವರಿ ತಿಂಗಳಲ್ಲಿ ಅಡಿಕೆ ಕೊಯ್ಲು ಪ್ರಾರಂಭ ಮಾಡಿದ್ದು, ಇದು ಕೊನೆಯ ಕೊಯ್ಲು. ಅದ ಕಾರಣ ಹತ್ತಿರದ ರೈತರಿಗೆ ಸೇವೆ ನೀಡಿದ್ದೇವೆ. ಮುಂದಿನ ಕೊಯ್ಲು ಹಾಗೂ ಮದ್ದು ಸಿಂಪಡಣೆಗೆ ಎಲ್ಲಾ ಕಡೆಯಿಂದ ರೈತರು ಈಗಾಗಲೇ ಕರೆ ಮಾಡಿ ಬುಕ್ಕಿಂಗ್ ಮಾಡಿರುತ್ತಾರೆ. ಅಡಿಕೆ ಹಿಂಗಾರಕ್ಕೆ ಹಾಗು ಸೋಗೆಗೆ 26 ಮಂದಿ ರೈತರು ಮದ್ದು ಸಿಂಪಡಣೆ ಮಾಡಿರುತ್ತಾರೆ. ಮದ್ದು ಸಿಂಪಡಣೆಗೆ ಪಂಪ್ ಮತ್ತು ಪೈಪ್ ನಮ್ಮಲ್ಲಿಯೇ ಇದ್ದು ರೈತರು ಮದ್ದು ಮಾತ್ರ ತಯಾರು ಮಾಡಿ ಕೊಡಬೇಕು. ಉಳಿದ ಕೆಲಸವನ್ನು ನಮ್ಮ ತಂಡ ನಿರ್ವಹಿಸುತ್ತದೆ. 1 ತಂಡ ದಿನಕ್ಕೆ 700ರಿಂದ 800 ಗಿಡದವರೆಗೆ ಮದ್ದು ಸಿಂಪಡಣೆ ಮಾಡುತ್ತಾರೆ. ಪುತ್ತೂರು ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ರೈತರಿಗೂ ಸೇವೆ ಕೊಡಲು ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ತಂಡವನ್ನು ಸಿದ್ಧ ಮಾಡುವ ಗುರಿಯನ್ನು ಹೊಂದಿರುತ್ತೇವೆ. ತೆಂಗಿನ ಕೊಯಿಲು ಮಾಡುವ ತಂಡ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು ಅಡಿಕೆ ಕೊಯ್ಲು ಹಾಗೂ ತೆಂಗು ಕೊಯಿಲು ಮಾಡಲು ಬುಕ್ಕಿಂಗ್ ಮಾಡಲು 7349508621/9611309794 ನಂಬರಿಗೆ ಕರೆ ಮಾಡಿ ಬುಕ್ಕಿಂಗ್ ಮಾಡಬಹುದು ಎಂದು ಧರಿತ್ರಿ ಸೌಹಾರ್ದ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here