ಪುತ್ತೂರು ತುಳುಕೂಟದಿಂದ ಜಿ.ಎಲ್. ವನ್ ಮಾಲ್‌ನಲ್ಲಿ ವಿಷು ಆಚರಣೆ

0

ಪುತ್ತೂರು:ತುಳು ಕೂಟ ಪುತ್ತೂರು ಇದರ ವತಿಯಿಂದ ಏ.14ರಂದು ಜಿ.ಎಲ್ ವನ್ ಮಾಲ್‌ನಲ್ಲಿ ವಿಷು ಹಬ್ಬವನ್ನು ಆಚರಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿ.ಎಲ್ ವನ್ ಮಾಲ್‌ನ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ಭಾಷೆ ಅರಿತರೆ ಸಂಸ್ಕೃತಿಯ ಅರಿವಾಗಲಿದೆ. ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿಯ ಅಡಕವಾಗಿದೆ. ಹಬ್ಬಗಳ ಆಚರಣೆಯ ಮೂಲಕ ಸಂಸ್ಕೃತಿಯನ್ನು ತಿಳಿಯಲು ಸಹಕಾರಿಯಾಗಿದ್ದು ವಿಷು ಹಬ್ಬ ಆಚರಿಸಿದ ತುಳು ಕೂಟಕ್ಕೆ ಅಭಿನಂದನೆ ಸಲ್ಲಿಸಿದರು. ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳ ಆಯೋಜನಗೆ ಮಾಲ್‌ನ ಸಂಪೂರ್ಣ ಸಹಕಾರವಿದೆ. ಮಾಲ್ ಕೇವಲ ವ್ಯಾಪಾರ ಕೇಂದ್ರವಾಗಿರದೆ ಸಾಂಸ್ಕೃತಿಕ ಕೇಂದ್ರವಾಗಿಯೂ ಬೆಳೆಯಲಿದೆ ಎಂದರು.


ಮಾಸ್ಟರ್ ಪ್ಲಾನರಿಯ ನಿರ್ದೇಶಕ ಅಕ್ಷಯ್ ಎಸ್.ಕೆ. ಮಾತನಾಡಿ, ತುಳು ಕೂಟದ ಮುಖಾಂತರ ನಡೆಯುವ ವಿಷು ಆಚರಣೆಯು ಸಂಸ್ಕೃತಿ ಉಳಿಸುವ ಕಾರ್ಯಕ್ರಮವಾಗಿದೆ. ಪುರಾತನ ಆಚರಣೆಗಳನ್ನು ಪ್ರತಿಯೊಬ್ಬರು ಮಾಡುವ ಮೂಲಕ ಪುರಾತನ ಭಾಷೆ, ಸಂಸ್ಕೃತಿ ಉಳಿಸಲು ನಾವು ಪ್ರಯತ್ನಿಸಬೇಕು ಎಂದರು.


ವಿಷು ಹಬ್ಬದ ಮಹತ್ವದ ಬಗ್ಗೆ ವಿವರಿಸಿದ ನಿವೃತ್ತ ಅಂಚೆ ಪಾಲಕ ಸೀತಾರಾಮ ಗೌಡ ಮುಂಡಾಲ ಮಾತನಾಡಿ, ಪುರಾತನ ಸಂಪ್ರದಾಯ, ಆಚರಣೆ, ಸಂಸ್ಕಾರಗಳಿಗೆ ಬಹಳಷ್ಟು ಮಹತ್ವವಿದೆ. ಅದನ್ನು ಉಳಿಸಿ ಬೆಳೆಸಬೇಕು. ತುಳು ಭಾಷೆ ವಿಶ್ವವ್ಯಾಪಿಯಾಗಿ ಬೆಳೆಯಲಿ ಎಂದರು.
ಕಾರ್ಯಕ್ರಮದಲ್ಲಿ ರಶಪ್ರಶ್ನೆ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತುಳು ಕೂಟದ ಅಧ್ಯಕ್ಷ ಫ್ಯಾಟ್ರಿಕ್ ಸಿಪ್ರಿಯನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ವಂದಿಸಿದರು.

LEAVE A REPLY

Please enter your comment!
Please enter your name here