ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ, ಪುತ್ತೂರು ಇವರಿಂದ ತಾಳಮದ್ದಳೆ, “ಸಮರ ಸೌಗಂಧಿಕಾ” ನಡೆಯಿತು.
ಹಿಮ್ಮೇಳದಲ್ಲಿ, ಭಾಗವತರಾಗಿ, ಹೇಮಾ ಸ್ವಾತಿ ಕುರಿಯಾಜೆ, ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮದ್ದಳೆಯಲ್ಲಿ ಪದ್ಯಾಣ ಜಯರಾಮ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ, ಪದ್ಮಾ ಕೆ ಆರ್ ಆಚಾರ್ಯ(ಭೀಮ1),ಜಯಲಕ್ಷ್ಮಿ ವಿ ಭಟ್(ದ್ರೌಪದಿ) , ಶ್ರೀವಿದ್ಯಾ ಜೆ ರಾವ್(ಕುಬೇರ), ಶುಭಾ ಪಿ ಆಚಾರ್ಯ(ಭೀಮ2) ಹೀರಾ ಉದಯ್(ಹನುಮಂತ), ಶೃತಿ ವಿಸ್ಮಿತ್(ವನಪಾಲಕ) ಅರ್ಥದಾರಿಗಳಾಗಿ ಪಾತ್ರ ನಿರ್ವಹಣೆ ಮಾಡಿದರು. ಪದ್ಮಾ ಕೆ ಆರ್ ಆಚಾರ್ಯ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮವನು ನ್ಯಾಯವಾದಿ ಹೀರಾ ಉದಯ್ ಪ್ರಾಯೋಜಿಸಿದರು. ದೇವಳದ ಟ್ರಸ್ಟಿಗಳಲ್ಲೋರ್ವರಾದ ಲೀಲಾವತಿ ಹಿರ್ಕುಡೇಲು ಸಹಕರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಕೃಷ್ಣರಾಜ ಎರ್ಕಾಡಿತ್ತಾಯರು ಕಲಾವಿದರನ್ನು ಶಾಲು, ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಿದರು.