ಮತದಾರರು ರಾಜರಾಗಿ ಆಡಳಿತ ನಡೆಸುವಂತಾಗಬೇಕೇ?-ಜನಪ್ರತಿನಿಧಿಗಳು, ಅಧಿಕಾರಿಗಳು ರಾಜರಾಗುವ ವ್ಯವಸ್ಥೆ ಮುಂದುವರಿಯಬೇಕೇ?

0

ನಾವು (ಜನರು) ಓಟು ಹಾಕುವ ದಿನ ಹತ್ತಿರ ಹತ್ತಿರ ಬರುತ್ತಿದೆ. ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು ನಮ್ಮ ಒಂದೊಂದು ಓಟಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಆ ಒಂದೊಂದು ಓಟು ಸೋಲು ಗೆಲುವಿಗೆ ಕಾರಣವಾಗಬಲ್ಲದು. ಅದಕ್ಕಾಗಿ ಓಟಿಗೆ ನಿಂತವರು ಪ್ರತಿಯೊಬ್ಬ ಮತದಾರನನ್ನು ಗುರುತಿಸುತ್ತಾರೆ, ಓಲೈಸುತ್ತಾರೆ, ಮತದಾರರ ಮನೆಯವರ ಪರಿಚಯವಿರುತ್ತದೆ. ಕಷ್ಟ ಸುಖಗಳ ಅರಿವು ಇರುತ್ತದೆ. ಏನೆಲ್ಲಾ ಬೇಕು ಎಂದು ಬೇಡಿಕೆಗಳನ್ನು ಕೇಳುತ್ತಾರೆ. ಭರವಸೆ ನೀಡುತ್ತಾರೆ. ಪ್ರತಿಯೊಬ್ಬ ಮತದಾರರನ್ನು ರಾಜರಂತೆ ನೋಡುತ್ತಾರೆ. ಮತದಾರನಿಗೂ ತನ್ನ ಮತಕ್ಕೆ ಬೆಲೆ ಇದೆ ಎಂದು ಅರಿವಾಗುತ್ತದೆ. ಆದರೆ ಮತದಾನ ಕಳೆದು ಅಭ್ಯರ್ಥಿ ಗೆದ್ದ ಮೇಲೆ ಅವರು ರಾಜರಾಗುತ್ತಾರೆ. ಮೆರವಣಿಗೆ ಮಾಡುತ್ತಾರೆ. ಮತದಾರ ಮೊದಲಿನಂತೆ ವ್ಯವಸ್ಥೆಯ ಗುಲಾಮನಾಗಿ ಜೀವನ ನಡೆಸುತ್ತಾನೆ. ಲಂಚ, ಭ್ರಷ್ಟಾಚಾರದ ಆಡಳಿತ ಮೊದಲಿನಂತೆ ಮುಂದುವರಿಯುತ್ತಾ ಬರುತ್ತದೆ. ಅದು ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದೇ ಇಲ್ಲ ಯಾಕೆ?.


ಸ್ವಾತಂತ್ರ್ಯ ಬಂದು 77 ವರ್ಷಗಳಾಗಿವೆ. ಮತದಾನದ ಹಕ್ಕಿನ ನಮಗಾಗಿ ನಮ್ಮದೇ ಆದ ಆಡಳಿತ ಎಂದು ಹೇಳುವ ಪ್ರಜಾಪ್ರಭುತ್ವ ಬಂದು 72 ವರ್ಷಗಳಾದರೂ ಇದು ಹಾಗೆಯೇ ಮುಂದುವರಿಯುತ್ತಿರುವುದು ಯಾಕೆ ಎಂದು ಆಶ್ಚರ್ಯವಾಗುವುದಿಲ್ಲವೇ?. ಬದಲಾವಣೆ ಸಾಧ್ಯವಿಲ್ಲವೇ?. ಸಾಧ್ಯವಿದೆ! ಪ್ರತಿಯೊಬ್ಬ ಮತದಾರ ಈ ಊರು ನಮ್ಮದು ಮತ್ತು ತಾನು ರಾಜ, ಜನಪ್ರತಿನಿಧಿಗಳು, ಅಧಿಕಾರಿಗಳು ಜನಸೇವಕರು. ನಮ್ಮ ಸೇವೆಗಾಗಿ ಇರುವವರು ಎಂಬುವುದನ್ನು ಹೇಳುವ ಈ ಮೇಲಿನ ಫಲಕವನ್ನು ಓದಿ, ನಂಬಿ ಆಚರಣೆಗೆ ತಂದರೆ ಆತ ರಾಜನಾಗುತ್ತಾನೆ. ದೇಶ ಉದ್ಧಾರವಾಗುತ್ತದೆ. ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗುತ್ತದೆ, ಮಹಾತ್ಮಗಾಂಧಿಯವರ ಆಶಯ ಈಡೇರುತ್ತದೆ.
– ಡಾ.ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here