ನಿವೃತ್ತಿ ಹೊಂದಿದ ಇರ್ದೆ-ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಲೆಕ್ಕಿಗ ಮಹಮ್ಮದ್ ಕುಂಞಿರವರಿಗೆ ಬೀಳ್ಕೊಡುಗೆ

0

ಯಾವುದೇ ಚ್ಯುತಿ ಬಾರದ ರೀತಿ ಕರ್ತವ್ಯ ನಿರ್ವಹಿಸಿದ್ದಾರೆ-ಶಶಿಕುಮಾರ್ ರೈ ಬಾಲ್ಯೊಟ್ಟು

ಪುತ್ತೂರು: 40 ವರ್ಷಗಳಿಂದ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸಿ ಮಾ.31ರಂದು ನಿವೃತ್ತಿಗೊಂಡ ಮಹಮ್ಮದ್ ಕುಂಞಿರವರಿಗೆ ಸಹಕಾರಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ತಮ್ಮ ಮಕ್ಕಳನ್ನೇ ಸಂಪತ್ತಾನ್ನಾಗಿರಿಸಿದವರು-ಶಶಿಕುಮಾರ್ ರೈ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಒಬ್ಬ ಮನುಷ್ಯನಿಗೆ ಹುಟ್ಟು ಸಾವು ದೇವರು ಕೊಟ್ಟಂತಹ ವರ. ಓರ್ವ ಸಿಬಂದಿಗೆ ಉದ್ಯೋಗಕ್ಕೆ ಸೇರುವ ಹಾಗೂ ಉದ್ಯೋಗದಿಂದ ನಿವೃತ್ತಿಯಾಗುವ ಸಮಯ ಸಮವಾದುದು. 40 ವರ್ಷಗಳ ಸುದೀರ್ಘ ಸೇವೆಯನ್ನು ಮಹಮ್ಮದ್ ಕುಂಞಿರವರು ಸಲ್ಲಿಸಿದ್ದಾರೆ. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಲವು ಸಾಧನೆಗಳ ಮುಖಾಂತರ ಪ್ರಶಶ್ತಿಗೆ ಭಾಜನವಾಗಿದೆ. ತಮ್ಮ ಸೇವೆಯಲ್ಲಿ ಯಾವುದೇ ಚ್ಯುತಿ ಬಾರದ ಹಾಗೆ ಮಹಮ್ಮದ್ ಕುಂಞಿ ಕರ್ತವ್ಯ ನಿರ್ವಹಿಸಿದ್ದಾರೆ. ತನ್ನ ಬಂಧು, ಮಿತ್ರರಿಗೆ ನೆರವಾದವರು. ಕಂಪ್ಯೂಟರ್ ರೀತಿಯಲ್ಲಿ ಹಲವು ದಾಖಲೆಗಳನ್ನು ನೆನಪಿನಲ್ಲಿ ಇಟ್ಟುಕೊಂಡವರು. ಮಹಮ್ಮದ್ ಕುಂಞಿರವರು ತಮ್ಮ ಮಕ್ಕಳನ್ನೇ ಸಂಪತ್ತಾನ್ನಾಗಿರಿಸಿದವರು. ದೇವರು ಅವರಿಗೆ ಅನುಗ್ರಹಿಸಲಿ ಎಂದು ಹೇಳಿ ಶುಭಹಾರೈಸಿದರು.

ಅತ್ಯಂತ ಕೌಶಲ್ಯಪೂರ್ಣವಾಗಿ ಸೇವೆ ಸಲ್ಲಿಸಿದವರು-ಆರ್.ಬಿ.ಸುವರ್ಣ:
ಸಂಘದ ಹಿರಿಯ ಗುಮಾಸ್ತ ಆರ್.ಬಿ.ಸುವರ್ಣ ಮಾತನಾಡಿ ಮಹಮ್ಮದ್ ಕುಂಞಿ 1985ರಲ್ಲಿ ಸಂಸ್ಥೆಯಲ್ಲಿ ಕರ್ತವ್ಯ ಆರಂಭಿಸಿದ್ದರು. ಅತ್ಯಂತ ಕೌಶಲ್ಯಪೂರ್ಣವಾಗಿ ಸೇವೆ ಸಲ್ಲಿಸಿದವರು. ತನಗೆ ನಿರ್ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು. ಎಲ್ಲರೊಂದಿಗೆ ಆತ್ಮೀಯತೆಯನ್ನು ಹೊಂದಿದ ವ್ಯಕ್ಯಿಯಾಗಿದ್ದರು. ವೃತ್ತಿಗೆ ನಿವೃತ್ತಿಯಾದದರೂ ಸಾಮಾಜಿಕ ಚಟುವಟಿಕೆಗೆಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿ ಹಾರೈಸಿದರು.

ಕೆಲಸದಲ್ಲಿ ನೈಪುಣ್ಯತೆ ಹೊಂದಿದವರು-ವಿಷ್ಣುರಾವ್ ಬಿ.:
ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ರಾವ್ ಮಾತನಾಡಿ ಮಹಮ್ಮದ್ ಕುಂಞಿರವರು ಸ್ವ ಇಚ್ಚೆಯಿಂದ ಶೀಘ್ರವಾಗಿ ಕೆಲಸ ನಿರ್ವಹಿಸುತ್ತಿದ್ದರು. ಯಾವುದೇ ವಿಭಾಗದಲ್ಲಿಯೂ ಕ್ಲಪ್ತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುತ್ತಿದ್ದರು. ಕೆಲಸದ ನೈಪುಣ್ಯತೆ ಇತ್ತು. ಯುಗಾದಿಯ ಹೊಸ ವರ್ಷದಲ್ಲಿ ಹೊಸ ಜೀವನ ನಡೆಸಲಿ ಎಂದು ಹಾರೈಸಿದರು.

ಸಂಘದ ಬೆಳವಣಿಗೆಗೆ ಅವರ ಪಾತ್ರ ಬಹಳ ದೊಡ್ಡದು-ರಮೇಶ್ ರೈ
ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ರೈ ಪಂಜೊಟ್ಟು ಮಾತನಾಡಿ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿ ಮಹಮ್ಮದ್ ಕುಂಞಿರವರು. ಎಷ್ಟೇ ಕಷ್ಟಕರ ಪರಿಸ್ಥಿತಿಯನ್ನೂ ನಿಭಾಯಿಸುತ್ತಿದ್ದರು. ಸಂಘದ ಬೆಳವಣಿಗೆಗೆ ಅವರ ಪಾತ್ರ ಬಹಳ ದೊಡ್ಡದಿದೆ. ಅವರಿಗೆ ಶ್ರೀಮಹಾಲಿಂಗೇಶ್ವರ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸಿದರು.

ಕ್ರೀಡೆಯಲ್ಲಿಯೂ ನೈಪುಣ್ಯತೆಯ ಆಟಗಾರರಾಗಿದ್ದರು-ಚಂದ್ರಶೇಖರ ರೈ ಬಾಲ್ಯೊಟ್ಟು:
ಚಂದ್ರಶೇಖರ ರೈ ಬಾಲ್ಯೊಟ್ಟು ಮಾತನಾಡಿ ಮಹಮ್ಮದ್ ಕುಂಞಿ ಹಾಗೂ ನಾನು ಪ್ರೌಢಶಾಲೆಯಲ್ಲಿ ಸಹಪಾಠಿಗಳಾಗಿದ್ದವರು. ಶಾಲಾ ದಿನಗಳಲ್ಲಿ ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದವರು. ನೈಪುಣ್ಯತೆಯ ಆಟಗಾರರಾಗಿದ್ದರು. ಅದೇ ರೀತಿ ಸಂಘದ ಕಾರ್ಯನಿರ್ವಹಣೆಯಲ್ಲಿಯೂ ನೈಪುಣ್ಯತೆಯನ್ನು ಹೊಂದಿದ್ದಾರೆ. ಅವರು ನಂಬಿದ ದೇವರು ನಿವೃತ್ತಿ ಜೀವನಕ್ಕೆ ಅನುಗ್ರಹಿಸಲಿ ಎಂದು ಹೇಳಿ ಹಾರೈಸಿದರು.

ಸದಸ್ಯರಿಗೆ, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ವ್ಯಕ್ತಿ-ರಾಮಯ್ಯ ರೈ:
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಸ್ವಾಗತಿಸಿ ಮಾತನಾಡಿ ಮಹಮ್ಮದ್ ಕುಂಞಿರವರು 40 ವರ್ಷಗಳ ಸೇವೆ ಸಲ್ಲಿಸಿ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರಿಗೆ, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ವ್ಯಕ್ತಿ. ಅಲ್ಲದೆ ಗ್ರಾಹಕ, ಸದಸ್ಯರನ್ನು ಮನವೊಲಿಸಿ ಸಂಘದ ವ್ಯವಹಾರದಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತಿದ್ದರು. ತಾಳ್ಮೆಯಿಂದ ಚತುರತೆಯಿಂದ ಕೆಲಸದ ನೈಪುಣ್ಯತೆಯಿಂದ ಸೇವೆ ಮಾಡಿದವರು. ಅವರ ನಿವೃತ್ತಿ ಜೀವನ ಉತ್ತಮ ರೀತಿಯಲ್ಲಿ ಸಆಗಲಿ ಎಂದು ಹಾರೈಸಿದರು.

ಚಿತ್ರ: ಹರಿ ಸ್ಟುಡಿಯೋ ರೆಂಜ

ನಿವೃತ್ತಿಯ ನಂತರವೂ ಅವರ ಸೇವೆ ಬ್ಯಾಂಕಿಗೆ ಬೇಕು-ರಂಗನಾಥ ರೈ ಗುತ್ತು:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಂಗನಾಥ ರೈ ಮಾತನಾಡಿ ಹಳ್ಳಿ ಪ್ರದೇಶದ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವತ್ತು ಬಹಳ ಎತ್ತರಕ್ಕೆ ಬೆಳೆದಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಸಂಘದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ ಮಹಮ್ಮದ್ ಕುಂಞಿರವರು. ಅವರಿಗೆ ಇತಿಮಿತಿಯಲ್ಲಿ ಗೌರವಾರ್ಪಣೆ ಮಾಡಿದ್ದೇವೆ. ನಿವೃತ್ತಿಯ ನಂತರವೂ ಅವರ ಸೇವೆ ಬ್ಯಾಂಕಿಗೆ ಬೇಕು. ಅವರ ಸೇವಾಮನೋಭಾವನೆ ಶ್ಲಾಘನೀಯ ಎಂದು ಹೇಳಿ ಶುಭಹಾರೈಸಿದರು.

ಕುಮಾರಿ ಅದಿತಿ ಪ್ರಾರ್ಥಿಸಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಗೌಡ ವಂದಿಸಿದರು. ನಿರ್ದೇಶಕ ಸದಾಶಿವ ರೈ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರುಗಳಾದ ಶೇಷಪ್ಪ ರೈ ಮೂರ್ಕಾಜೆ, ದೇವಪ್ಪ ನಾಯ್ಕ, ಚಂದ್ರನ್ ತಲೆಪ್ಪಾಡಿ, ಕರುಣಾಕರ ಶೆಟ್ಟಿ ಕೊಮ್ಮಂಡ, ನಾಗರಾಜ್ ಕಜೆ, ಹರೀಶ್ ಗೌಡ ಗುಮ್ಮಟೆಗದ್ದೆ, ದೀಪಿಕಾ ರೈ, ಆಶಾ ಅರವಿಂದ್, ಹಿರಿಯ ಸದಸ್ಯರುಗಳಾದ ಕೆ.ಪರಮೇಶ್ವರ ಭಟ್, ದೇವಪ್ಪ ಗೌಡ ಬಿ.ಆರ್., ಶೇಷಪ್ಪ ರೈ ನಾಕಪ್ಪಾಡಿ, ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರವೀಣ್ ರೈ ಪಂಜೊಟ್ಟು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ನವೀನ್ ರೈ ಚೆಲ್ಯಡ್ಕ, ಮೊಯಿದುಕುಂಞಿ, ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ, ನಿರ್ದೇಶಕ ಪ್ರಭಾಕರ ರೈ ಬಾಜುವಳ್ಳಿ, ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ನಿದೇಶಕ ದಿನೇಶ್ ರೈ ಬಾಳೆಹಿತ್ಲು, ಮಹಮ್ಮದ್ ಕುಂಞಿರವರ ಪುತ್ರಿಯರಾದ ಫಾತಿಮತ್ ಹಸೀನಾ, ಹರ್ಶನಾ, ಅಳಿಯ ಐಡಿಯಲ್ ಫ್ಯೂಯೆಲ್ಸ್‌ನ ಹನೀಫ್ ಟಿ.ಎಚ್.ಎಮ್.ಎ.ರವರು ಸೇರಿದಂತೆ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಿಬಂದಿಗಳಾದ ಬಾಲಕೃಷ್ಣ ನಾಯ್ಕ, ರವಿ, ಸ್ವಾತಿ, ನವ್ಯಾ, ಪ್ರಜ್ಞಾ, ಅಶ್ವಿನಿ, ಅಬ್ದುಲ್ ಕುಂಞಿ, ಪ್ರೇರಕಿ ತುಳಸಿರವರು ಸಹಕರಿಸಿದರು.

ನಿವೃತ್ತಿಗೊಂಡ ಮಹಮ್ಮದ್ ಕುಂಞಿ ಮತ್ತು ಮೈಮೂನ ದಂಪತಿಗೆ ಗೌರವಾರ್ಪಣೆ
ನಿವೃತ್ತಿಗೊಂಡ ಮಹಮ್ಮದ್ ಕುಂಞಿ ಮತ್ತು ಅವರ ಪತ್ನಿ ಮೈಮೂನ ದಂಪತಿಯನ್ನು ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು. ಶಲ್ಯ, ಪೇಟ, ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು. ಮಹಮ್ಮದ್ ಕುಂಞಿರವರ ಅಭಿಮಾನಿ ಬಳಗದ ವತಿಯಿಂದ ಗೌರವಿಸಲಾಯಿತು. ಹಮೀದ್ ಕೊಮ್ಮೆಮಾರ್, ರಝಾಕ್ ಸೇರಿದಂತೆ ಅವರ ಅಭಿಮಾನಿಗಳು ಮಹಮ್ಮದ್ ಕುಂಞಿ ದಂಪತಿಯನ್ನು ಗೌರವಿಸಿದರು.

ನನ್ನ ಜೀವನಕ್ಕೆ ಆಧಾರ ಸ್ತಂಭವಾಗಿ ನಿಂತ ಸಂಘಕ್ಕೆ ನಾನು ಚಿರಋಣಿ-ಮಹಮ್ಮದ್ ಕುಂಞಿ
ಗೌರವಾರ್ಪಣೆ ಸ್ವೀಕರಿಸಿದ ಮಹಮ್ಮದ್ ಕುಂಞಿರವರು ಮಾತನಾಡಿ ನಾನು ಇಂದು ತುಂಬಾ ಭಾವುಕನಾಗಿದ್ದೇನೆ ಹಾಗೂ ಸಂತೋಷಪಡುತ್ತಿದ್ದೇನೆ. ಈ ಸಂಘದಲ್ಲಿ ನಾನು 40 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಆಧಾರ ಸ್ತಂಭವಾಗಿ ನಿಂತ ಸಂಘಕ್ಕೆ ನಾನು ಚಿರಋಣಿಯಾಗಿದ್ದೇನೆ. ಎಲ್ಲರ ಅಹಕಾರದಿಂದ ನಿಷ್ಠಾವಂತನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಸಂಘ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹೇಳಿ ಹಾರೈಸಿದರು.

LEAVE A REPLY

Please enter your comment!
Please enter your name here